ಆಸ್ಪತ್ರೆ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕ ಸೇರಿದಂತೆ ಎಲ್ಲವೂ ಕೊರತೆಯಾಗಿರುವುದು ಸಂಪೂರ್ಣ ವೈಫಲ್ಯ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ. ಯಾವುದೇ ನಿರ್ದಿಷ್ಟ ಸರ್ಕಾರವನ್ನು ಉಲ್ಲೇಖಿಸದೆ, ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ವಿಭಾಗೀಯ ಪೀಠವು ದೇಶವು ಸೋಂಕಿನಲ್ಲಿ ಭಾರಿ ಏರಿಕೆ ಕಾಣುತ್ತಿದೆ, ಇದು ಇಡೀ ವೈದ್ಯಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.
“ಇದು ನಮ್ಮ ಮೇಲೆ ಈ ರೀತಿ ದಾಳಿ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಮೂಲಸೌಕರ್ಯಗಳು ಇಲ್ಲದಿರುವ ಸಮಸ್ಯೆ ಇದೆ ಎಂದು ಅದು ಹೇಳಿದೆ. “ಆಮ್ಲಜನಕದ ಕೊರತೆಯಿದೆ, ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳು ರೋಗಿಗಳಿಗೆ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ಪ್ರವೇಶವನ್ನು ನಿಲ್ಲಿಸಿದೆ, ವೈದ್ಯರು ಕುಸಿದು ಹೋಗುತ್ತಿದ್ದಾರೆ, ಅಳುತ್ತಿದ್ದಾರೆ” ಎಂದು ನ್ಯಾಯಾಲಯವು ಹೇಳಿದೆ.
ಇದನ್ನೂ ಓದಿ: ದೆಹಲಿಯಾದ್ಯಂತ ಬೆಂಕಿಯೇ ಕಾಣುವಾಗ ಇಲ್ಲಿನ ಬಿಜೆಪಿ ಎಲ್ಲಿ?: ಆರ್‌ಎಸ್‌ಎಸ್ ಮುಖಂಡರೊಬ್ಬರ ಆಕ್ರೋಶ
ನ್ಯಾಯಾಲಯವು ದೆಹಲಿಯ ಬಾರ್ ಕೌನ್ಸಿಲ್ ಸದಸ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. ತಾನು ಸಂಪೂರ್ಣವಾಗಿ ಅಸಹಾಯಕನಾಗಿದ್ದು, ಸೋಂಕು ಪೀಡಿತ ವಕೀಲರಿಂದ ಪ್ರತಿದಿನ ನೂರಾರು ಕರೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ದೆಹಲಿಯ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿರುವ ಹಿರಿಯ ವಕೀಲ ರಮೇಶ್ ಗುಪ್ತಾ ಹೇಳಿದ್ದಾರೆ.
“ನಾವು ಖಾಸಗಿ ಅತಿಥಿಗೃಹವೊಂದನ್ನು ವ್ಯವಸ್ಥೆ ಮಾಡಿದ್ದೇವೆ. ವೈದ್ಯರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅವರು ಒಪ್ಪುತ್ತಿದ್ದಾರೆ ಆದರೆ ಅವರಿಗೆ ಐಸಿಯು ಅವಕಾಶವಿಲ್ಲ. 53-55 ಹಾಸಿಗೆಗಳನ್ನು ಹೊಂದಿರುವ ಅತಿಥಿ ಗೃಹವನ್ನು ಆಸ್ಪತ್ರೆಯಾಗಿ ಜೋಡಿಸಬೇಕೆಂದು ನಾವು ಬಯಸುತ್ತೇವೆ. ನಮಗೆ ಏನೂ ಅಗತ್ಯವಿಲ್ಲ. ನಮಗೆ ಹಣದ ಅಗತ್ಯವಿಲ್ಲ. ಗಂಭೀರ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಐಸಿಯುಗೆ ಸ್ಥಳಾಂತರಿಸುವುದು ಮಾತ್ರ ನಮಗೆ ಬೇಕಾಗಿದೆ” ಎಂದು ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್ ಗಾಂಧಿ


