Homeಕರೋನಾ ತಲ್ಲಣExplainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

Explainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

- Advertisement -
- Advertisement -

ನಿನ್ನೆ ಶುಕ್ರವಾರದ ಮುಂಜಾನೆವರೆಗೆ, 18-45 ವಯೋಮಾನದ ಸುಮಾರು ಎರಡು ಕೋಟಿ ಯುವಜನರು ಕೋ-ವಿನ್ ಪ್ಲಾಟ್‌ಫಾರ್ಮಿನಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಸಲು ಯತ್ನಿಸಿದ್ದಾರೆ. ಆದರೆ ಕರ್ನಾಟಕ ಸೇರಿದಂತೆ ಹತ್ತು ಹಲವು ರಾಜ್ಯಗಳು ಇವತ್ತಿನಿಂದ 3ನೇ ಹಂತದ ಲಸಿಕೆ ಅಭಿಯಾನ ಆರಂಭಿಸಿಲ್ಲ.

ಇದು ದೇಶದ ಲಸಿಕಾ ನೀತಿಯಲ್ಲಿನ ಅಸಂಬದ್ಧತೆ, ದೂರದರ್ಶಿತ್ವದ ಕೊರತೆ ಮತ್ತು ಜನರಿಗಿಂತ ಕಾರ್ಪೋರೇಟ್‌ಗಳು ಮೇಲು ಎನ್ನುವ ಪ್ರಭುತ್ವದ ಸಿದ್ದಾಂತಕ್ಕೆ ಅನುಗುಣವಾಗಿಯೇ ನಡೆದಿದ್ದು, ಭಾರತದಲ್ಲಿ ಮೊದಲ ಸಲ ಒಂದು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಳ್ಳ ಹಿಡಿಯುತ್ತಿರುವ ಸೂಚನೆಗಳನ್ನು ನೀಡುತ್ತಿದೆ. ಕಡೆಗೂ ಇವತ್ತು ಶನಿವಾರ ಮುಂಜಾನೆ ಎಚ್ಚೆತ್ತುಕೊಂಡ ಕೇಂದ್ರ ಆರೋಗ್ಯ ಇಲಾಖೆ ಲಸಿಕೆಗಳ ಬಗ್ಗೆ ಮಾತನಾಡಿದೆ.

ಆರೋಗ್ಯ ಇಲಾಖೆ ಹೇಳಿದ್ದೇನು?

79 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಳಿದಿವೆ. ಮುಂದಿನ ಮೂರು ದಿನಗಳಲ್ಲಿ 17 ಲಕ್ಷಕ್ಕೂ ಹೆಚ್ಚಿನ ಡೋಸ್‌ಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
17+79= 96 ಲಕ್ಷ ಡೋಸ್‌ಗಳು ಇನ್ನು ಮೂರು ದಿನದಲ್ಲಿ ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇರಲಿವೆ. ಅದೇನೋ ಅರೆಕಾಸಿನ ಮಜ್ಜಿಗೆ ಅಂತಾರಲ್ಲ ಆ ಲೆಕ್ಕವಿದು. ಮಾತೆತ್ತಿದರೆ, ‘ಇಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಕೊರೊನಾ ನಿಯಂತ್ರಣ ಕಷ್ಟ ಎನ್ನುವ ಬಿಜೆಪಿ ಬೆಂಬಲಿಗರ ಸೋಗಲಾಡಿತನ ಇಲ್ಲೇ ಬೆತ್ತಲಾಗುವುದು. 96 ಲಕ್ಷ ಲಸಿಕೆ ಡೊಸ್ ಇಟ್ಟುಕೊಂಡು ದೇಶಾದ್ಯಂತ 3ನೆ ಹಂತದ ಲಸಿಕಾ ಅಭಿಯಾನ ಸಾಧ್ಯವೇ? ಅದೂ ಮೂರು ದಿನದ ಬಳಿಕವಂತೆ! ಆರೋಗ್ಯ ಇಲಾಖೆ ಏಪ್ರಿಲ್ 28ರಂದು 18-44 ವಯಸ್ಸಿನವರಿಗೆ ನೋಂದಣಿಗೆ ಕರೆ ನೀಡುವಾಗ ಈ ವಾಸ್ತವ ಅದಕ್ಕೆ ಗೊತ್ತು ಇರಲಿಲ್ಲವೇ? ಎಲ್ಲ ಗೊತ್ತು ಇರುತ್ತದೆ. ಆ ಕ್ಷಣದ, ಆ ದಿನದ ಜನರ ಆಕ್ರೋಶ, ರಾಜ್ಯ ಸರ್ಕಾರಗಳ ಅಸಮಾಧಾನ ಮತ್ತು ಕೋರ್ಟುಗಳ ಚಾಟಿ ಏಟುಗಳನ್ನು ತಪ್ಪಿಸಿಕೊಳ್ಳಲು ಹಾಗೆ ಮಾಡುತ್ತದೆ. ಇಡೀ ಕೋವಿಡ್ ನಿಯಂತ್ರಣದಲ್ಲಿ ಈ ಬೇಜವಾಬ್ದಾರಿಯೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿನ ಹಿನ್ನಡೆಗೆ ಕಾರಣವಾಗಿದೆ ಅಲ್ಲವೇ?

ಕೇಂದ್ರವು ಈವರೆಗೆ ಸುಮಾರು 16.37 ಕೋಟಿ ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಇದರಲ್ಲಿ, ನಾಶವಾದ ಲಸಿಕೆ ಸೇರಿದಂತೆ ಒಟ್ಟು ಬಳಕೆ 15,58,48,782 ಪ್ರಮಾಣಗಳಾಗಿವೆ ಎಂದು ಸರ್ಕಾರ ಮುಂಜಾನೆ ಹೇಳಿದೆ. (ನಾಶವಾಗಿದ್ದನ್ನು ಒಟ್ಟು ಬಳಕೆಯಾದ ಪ್ರಮಾಣಕ್ಕೆ ಸೇರಿಸಿಕೊಳ್ಳುವ ಕುತಂತ್ರ!)

ಮುಂದಿನ 3 ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿರುವುದು ಕೇವಲ 17,31,110 ಲಸಿಕೆಗಳು ಮಾತ್ರ! ಅದೂ ಗ್ಯಾರಂಟಿಯಿಲ್ಲವಂತೆ!

ಲಸಿಕಾ ಅಭಿಯಾನದ ಸುತ್ತ….

ಲಡಾಖ್‌ನ ಕೇಂದ್ರಾಡಳಿತ ಪ್ರದೇಶವು ತನ್ನ ಜನಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಿದೆ. ಆದರೆ ಉತ್ತರ ಪ್ರದೇಶವು ಅತಿದೊಡ್ಡ ಪ್ರಮಾಣದಲ್ಲಿ ಕೇಂದ್ರದಿಂದ ಲಸಿಕೆಗಳನ್ನು ಪಡೆದಿದ್ದರೂ ಸಹ ಅದರ ಜನಸಂಖ್ಯೆಯ ಶೇಕಡಾ ಒಂದು ಭಾಗಕ್ಕೂ ಸಂಪೂರ್ಣವಾಗಿ ಲಸಿಕೆ ನೀಡಿಲ್ಲ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾದ ಗುಜರಾತ್ ಲಸಿಕೆ ನೀಡುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ವ್ಯರ್ಥ ಮಾಡಿವೆ.

ಜನವರಿ 16 ರಂದು ಪ್ರಾರಂಭವಾದ ಲಸಿಕೆ ಚಾಲನೆಯ ಮೊದಲ ಹಂತದಲ್ಲಿ, ಲಸಿಕೆಗಳನ್ನು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಕಾಯ್ದಿರಿಸಲಾಗಿತ್ತು. ಮಾರ್ಚ್ 1 ರಿಂದ, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ರೋಗಲಕ್ಷಣ ಹೊಂದಿದ ಜನರು ಲಸಿಕೆ ಪಡೆಯಲು ಅರ್ಹರಾದರು. ಏಪ್ರಿಲ್ 1 ರಿಂದ, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಕೋವಿಡ್ ಲಸಿಕೆಗಳಿಗೆ ಅರ್ಹರಾದರು.

ಈಗ, ಇವತ್ತು ಮೇ 1 ರಿಂದ ಭಾರತವು ತನ್ನ ಕೋವಿಡ್ ವ್ಯಾಕ್ಸಿನೇಷನ್ ಅನ್ನು 18 ದಾಟಿದ ಎಲ್ಲಾ ವಯಸ್ಕರಿಗೆ ಮುಕ್ತಗೊಳಿಸಿದೆ. ಆದರೆ ತಯಾರಿ ಇರದ ಪರಿಣಾಮ ಮತ್ತು ಕೇಂದ್ರವು ಲಸಿಕಾ ಕಂಪನಿಗಳ ಮೇಲೆ ಯಾವುದೇ ನಿಯಂತ್ರಣ ಹೊಂದದ ಪರಿಣಾಮ ಇದು ಮುಗ್ಗರಿಸಿದೆ.

ಭಾರತದಲ್ಲಿ ಈವರೆಗೆ ಒಟ್ಟು 15,22,45,179 ( 15 ಕೋಟಿ 22 ಲಕ್ಷ 45,719) ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. 12,54,86,929 ಜನರಿಗೆ ಲಸಿಕೆಯ ಮೊದಲ ಡೋಸ್ ಸಿಕ್ಕಿದ್ದರೆ, 2,67,58,250 ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಒಟ್ಟಾರೆಯಾಗಿ, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಲಸಿಕಾ ಅಭಿಯಾನದಲ್ಲ್ಲಿ ಉತ್ತಮ ಸಾಧನೆ ತೋರಿವೆ, ಕಳೆದ ವರ್ಷವಷ್ಟೇ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಉನ್ನತ ಸಾಧನೆ ಮಾಡಿದೆ. ತನ್ನ ಜನಸಂಖ್ಯೆಯ ಶೇಕಡಾ 11 ರಷ್ಟು ಜನರಿಗೆ ಲಸಿಕೆಯನ್ನು ಸಂಪೂರ್ಣವಾಗಿ ನೀಡಿದೆ, ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ, ಗುಜರಾತ್ ಮತ್ತು ರಾಜಸ್ಥಾನಗಳು ಉನ್ನತ ಪ್ರದರ್ಶನ ನೀಡಿವೆ. ಗುಜರಾತ್ ರಾಜ್ಯವು ಜನಸಂಖ್ಯೆಯ ಶೇಕಡಾ 3.42 ರಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದರೆ, ಶೇಕಡಾ 14.2 ರಷ್ಟು ಜನರು ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಅಂತೆಯೇ, ರಾಜಸ್ಥಾನದಲ್ಲಿ, ಶೇಕಡಾ 13.6 ರಷ್ಟು ಜನಸಂಖ್ಯೆಯು ಕನಿಷ್ಠ ಮೊದಲ ಡೋಸ್ ಪಡೆದಿದೆ. 2.77 ರಷ್ಟು ಜನಸಂಖ್ಯೆಯು ಎರಡೂ ಡೋಸ್ ಸ್ವೀಕರಿಸಿದೆ.
ಲಡಾಖ್, ಸಿಕ್ಕಿಂ ಮತ್ತು ತ್ರಿಪುರವನ್ನು ಹೊರತುಪಡಿಸಿ, ಇತರ ಎಲ್ಲ ರಾಜ್ಯಗಳು ಜನಸಂಖ್ಯೆಯ ಶೇಕಡಾ 20 ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್‌ನೊಂದಿಗೆ ಲಸಿಕೆ ನೀಡಿದರೆ, ಶೇಕಡಾ 5 ಕ್ಕಿಂತ ಕಡಿಮೆ ಜನರು ಎರಡೂ ಪ್ರಮಾಣಗಳನ್ನು ಪಡೆದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಶೇಕಡಾ 1.97 ಜನರಿಗೆ ಸಂಪೂರ್ಣ ಲಸಿಕೆ (ಎರಡೂ ಡೋಸ್) ಸಿಕ್ಕಿದ್ದ್ದರೆ, ಶೇ. 9.24 ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ್ದು ಏಕೆ ಎಂದು ಪ್ರಶ್ನೆ ಕೇಳಿಬಂದಿದೆ.

ಲಸಿಕೆ ಪೋಲು

ಲಕ್ಷದ್ವೀಪ ಮತ್ತು ತಮಿಳುನಾಡು ಹೆಚ್ಚು ಲಸಿಕೆ ಪೋಲು ಮಾಡಿದ ರಾಜ್ಯಗಳಾಗಿವೆ. ಲಕ್ಷದ್ವೀಪ ತನ್ನ ಶೇಕಡಾ 9.76 ಪ್ರಮಾಣವನ್ನು ವ್ಯರ್ಥ ಮಾಡಿದರೆ, ತಮಿಳುನಾಡು ತನ್ನ ಲಸಿಕೆಗಳಲ್ಲಿ ಶೇ. 8.83 ರಷ್ಟನ್ನು ಪೋಲು ಮಾಡಿದೆ. (ಸಮಯಕ್ಕೆ ಸರಿಯಾಗಿ ಲಸಿಕೆ ನೀಡದಿದ್ದಲ್ಲಿ ಅದರ ಅವಧಿ ಮುಗಿದಾಗ ಅದು ವ್ಯರ್ಥವಾಗುತ್ತದೆ.)

ತಮಿಳುನಾಡಿನಲ್ಲಿ ಶೇಕಡಾ 8.83 ರಷ್ಟು ವ್ಯರ್ಥವಾಗುವುದು ಅಂದರೆ 5,16,191 ಡೋಸ್ ವ್ಯರ್ಥವಾದಂತೆ. ಇದು ಲಡಾಖ್‌ನಂತಹ ಸಣ್ಣ ಪ್ರದೇಶದ ಸಂಪೂರ್ಣ ಜನಸಂಖ್ಯೆಯನ್ನು ಸಂಪೂರ್ಣವಾಗಿ ಲಸಿಕೆ ಮಾಡಲು ಸಾಕು.

ಹೆಚ್ಚುವರಿ ಲಸಿಕೆ

ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ಇನ್ನೂ 79 ಲಕ್ಷ ಡೋಸ್‌ಗಳು ರಾಜ್ಯಗಳ ಬಳಿ ಇವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 11,80,659 ಲಸಿಕೆಗಳು ಇದ್ದು, ನಂತರದ ಸ್ಥಾನದಲ್ಲಿ ಬಿಹಾರ (8,36,283) ಇದೆ. ಈ ಎರಡೂ ರಾಜ್ಯಗಳು ಲಸಿಕಾ ಅಭಿಯಾನದಲ್ಲಿ ಕಳಪೆ ಸಾಧನೆ ಮಾಡಿವೆ.

ಮೊದಲ ಡೋಸ್ ಮತ್ತು ಎರಡನೇ ಡೋಸ್

ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28-56 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ, ಎರಡನೇ ಡೋಸ್‌ನ ಗ್ರಾಫ್ ಮೊದಲನೆಯದಕ್ಕೆ ಸಮಾನಾಂತರವಾಗಿ ಚಲಿಸಬೇಕು. ಆದರೆ ಹಾಗೆ ಆಗುತ್ತಿಲ್ಲ!

ಕೃಪೆ: ದಿ ಪ್ರಿಂಟ್

ಎರಡು ಪ್ಲಾಟ್‌ಗಳ ನಡುವೆ ಹೆಚ್ಚುತ್ತಿರುವ ಅಂತರವು ಅನೇಕ ಜನರು ತಮ್ಮ ಎರಡನೇ ಡೋಸ್ ಅನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಲಸಿಕೆಗಳು ಲಭ್ಯವಿಲ್ಲದಿರುವುದು ಅಥವಾ ಪ್ರಕರಣಗಳ ಹೆಚ್ಚಳದಿಂದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂಜರಿಯುವುದು ಇದಕ್ಕೆ ಕಾರಣವಾಗಿರಬಹುದು.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್

ಇಲ್ಲಿಯವರೆಗೆ ನೀಡಲಾದ ಒಟ್ಟು ಲಸಿಕೆಗಳಲ್ಲಿ ಭಾರತ್ ಬಯೊಟೆಕ್‌ನ ಶೇ.9ರಷ್ಟು ಕೋವ್ಯಾಕ್ಸಿನ್ ಲಸಿಕೆಗಳಿವೆ. ಈವರೆಗೆ ಶೇಕಡಾ 90 ಕ್ಕೂ ಹೆಚ್ಚು ಭಾರತೀಯರು ಸೀರಂನ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಕೇಂದ್ರದಿಂದ 1,500 ಕೋಟಿ ರೂ, ಹಣ ಪಡೆದ ಭಾರತ್ ಬಯೋಟೆಕ್ ಸಾಧನೆ ಗಮನಿಸಿ!

ಲಿಂಗವಾರು ವಿತರಣೆ

ಇಲ್ಲಿಯವರೆಗೆ, ಲಸಿಕೆ ಪಡೆದವರಲ್ಲಿ ಶೇಕಡಾ 52.18 ರಷ್ಟು ಪುರುಷರು, ಶೇ. 47.8 ರಷ್ಟು ಮಹಿಳೆಯರು ಇದ್ದಾರೆ. ಶೇಕಡಾ 0.01 ರಷ್ಟು ಲಸಿಕೆಗಳನ್ನು ತೃತೀಯ ಲಿಂಗಿಗಳಿಗೆ ನೀಡಲಾಗಿದೆ.

* ಪಿ.ಕೆ. ಮಲ್ಲನಗೌಡರ್

(ಮಾಹಿತಿ: ಕೇಂದ್ರ ಆರೋಗ್ಯ ಇಲಾಖೆ, ದಿ ಪ್ರಿಂಟ್ ಮತ್ತು ಇತರ ಮೂಲಗಳು)

ಚಿತ್ರಗಳು: ದಿ ಪ್ರಿಂಟ್


ಇದನ್ನೂ ಓದಿ:ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಯೋಗ್ಯರು, ಅಪ್ರಾಮಾಣಿಕರು ಹಾಗೂ ಅದಕ್ಶರ ಕೈಗೆ ಅಧಿಕಾರ ಸಿಕ್ಕಿರುವುದರ ಪರಿಣಾಮವನ್ನು ನಾವಿಂದು ಅನುಬವಿಸುತ್ತಿದ್ದೇವೆ.

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....