Election Results 2021 Live Updates | Assembly election 2021 result | latest election results | latest election news | NaanuGauri
ಐದು ರಾಜ್ಯಗಳ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳಲ್ಲಿ ಅಧಿಕಾರ ಪಡೆದೆ ತೀರುತ್ತೇವೆ ಎಂದು ಹೊರಟಿದ್ದ ಬಿಜೆಪಿ ಮುಗ್ಗರಿಸುತ್ತಿದೆ. ಬಂಗಾಳದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ನಂದಿಗ್ರಾಮದಲ್ಲಿ ಸ್ಪರ್ಧಿಸುತ್ತಿರುವ ಮಮತಾ ಬ್ಯಾನರ್ಜಿ ಅವರು ಮೂರು ಸುತ್ತಿನ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದರು. ಇದೀಗ ಅವರು ಮುನ್ನಡೆ ಸಾಧಿಸುತ್ತಿದ್ದಾರೆ.
ಮಮತಾ ವಿರುದ್ದ ಅವರ ಒಂದು ಕಾಲದ ಆಪ್ತರಾಗಿದ್ದ ಸುವೆಂದು ಅಧಿಕಾರಿ ಬಿಜೆಪಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಂಜಾನೆಯಿಂದ ನಿರಂತರವಾಗಿ ಮುನ್ನಡೆಯಲ್ಲಿದ್ದ ಸುವೆಂದು ಇದೀಗ ಹಿನ್ನಡೆ ಅನುಭವಿಸುತ್ತಿದ್ದಾರೆ.
ಆಡಳಿತ ಪಕ್ಷ ಟಿಎಂಸಿಯು ಬಿಜೆಪಿಗಿಂತ ಎರಡು ಪಟ್ಟು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಂಗಾಳದಲ್ಲಿ ಎಡಪಕ್ಷಗಳು ತಮ್ಮ ಅಸ್ತಿತ್ವ ತೋರುವಲ್ಲಿ ಎಡವಿದೆ.
ರಾಜ್ಯದ ಎಲ್ಲಾ 292 ಕ್ಷೇತ್ರಗಳಲ್ಲಿ ಎಣಿಕೆ ಪ್ರಾರಂಭವಾಗಿದ್ದು, ಇದುವರೆಗಿನ ಫಲಿತಾಂಶ ಹೀಗಿದೆ.
TMC ► 211 ಮುನ್ನಡೆ. Wins ► 3
BJP ► 76 ಮುನ್ನಡೆ. Wins ► 1
Cong & Left ► 2 ಮುನ್ನಡೆ.
ಇತರೆ ► 2 ಮುನ್ನಡೆ.
ಇದನ್ನೂ ಓದಿ: Election Results 2021 Live Updates: ಕ್ಷಣ ಕ್ಷಣದ ಅಪ್‌ಡೇಟ್‌ಗೆ ಇಲ್ಲಿ ಕ್ಲಿಕ್ ಮಾಡಿ!



Great victory for TMC party and Mamata Banerjee.