ಐದು ರಾಜ್ಯಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದೆ. ಕೇರಳ ವಿಧಾನಸಭೆಯ ಮತ ಎಣಿಕೆ ಸಂಪೂರ್ಣವಾಗಿದ್ದು, ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ನೇತೃತ್ವದ ಎಲ್‌ಡಿಎಫ್ ಒಕ್ಕೂಟವು 99 ಸ್ಥಾನಗಳಲ್ಲಿ ವಿಜಯಶಾಲಿಯಾಗಿ ಸ್ಪಷ್ಟ ಬಹುಮತ ಪಡೆದಿದೆ. ಈ ಮೂಲಕ ನಾಲ್ಕು ದಶಕಗಳ ಕೇರಳ ರಾಜಕೀಯದ ಸಂಪ್ರದಾಯನ್ನು ಪಿಣರಾಯಿ ವಿಜಯನ್ ಸರ್ಕಾರ ಬದಲಾಯಿಸಿದೆ.
ರಾಜ್ಯದಲ್ಲಿ ಮೈತ್ರಿಕೂಟವೊಂದು ಸತತವಾಗಿ ಅಧಿಕಾರ ಹಿಡಿಯುತ್ತಿರುವುದು ಕಳೆದ 40 ವರ್ಷಗಳ ಇತಿಹಾಸದಲ್ಲಿ ಇದೆ ಮೊದಲ ಬಾರಿಯಾಗಿದೆ. ಈ ಚುನಾವಣೆಯ ವಿಶೇಷವೆಂದರೆ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದ ಎಲ್ಲಾ ಪಕ್ಷಗಳಿಗೆ ಕನಿಷ್ಠ ಒಂದು ಸ್ಥಾನವಾದರೂ ದಕ್ಕಿದೆ.
ಇದನ್ನೂ ಓದಿ: ಬೆಳಗಾವಿ: ಜಿದ್ದಾಜಿದ್ದಿನ ಕಣದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮಂಗಳಾ ಅಂಗಡಿ
ಆರಂಭದಲ್ಲಿ ಕೇರಳದ ಪಾಲಕ್ಕಾಡ್, ಕಾಸರಗೋಡ್, ನೇಮಂ ಹಾಗೂ ಕೋಯಿಕ್ಕೋಡ್ ದಕ್ಷಿಣದಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ಫಲಿತಾಂಶ ಬರುವ ಹೊತ್ತಿಗೆ ಬಿಜೆಪಿ ಈ ಹಿಂದೆ ಇದ್ದ ಒಂದು ಕ್ಷೇತ್ರವನ್ನು ಕೂಡಾ ಕಳೆದುಕೊಂಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ, “ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುತ್ತೇವೆ” ಎಂದು ಹೇಳಿದ್ದರು.
ರಾಜ್ಯದ ಅಂತಿಮ ಫಲಿತಾಂಶದ ಪಟ್ಟಿ ಹೀಗಿದೆ:
ಸಿಪಿಎಂ ನೇತೃತ್ವದ LDF ಮೈತ್ರಿಕೂಟಕ್ಕೆ ಒಟ್ಟು 99 ಸ್ಥಾನ. ಕಳೆದ ಬಾರಿಗಿಂತ ಈ ಬಾರಿ ಮೈತ್ರಿಕೂಟಕ್ಕೆ 8 ಸ್ಥಾನಗಳು ಹೆಚ್ಚಾಗಿದೆ.
CPIM ► 62
CPI ► 17
KECM ► 5
ಎಲ್‌ಡಿಎಫ್ ಪಕ್ಷೇತರ ► 5
NCP ► 2
JDS ► 2
LTJD ► 1
NSC ► 1
CS ► 1
KECB ► 1
JKC ► 1
INL ► 1
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ 41 ಕ್ಷೇತ್ರಗಳ ಮತದಾರರು ಕೈಹಿಡಿದಿದ್ದು, ಮೈತ್ರಿಕೂಟವು ಕಳೆದ ಬಾರಿಗಿಂತ ಒಂದು ಕ್ಷೇತ್ರವನ್ನು ಕಳೆದು ಕೊಂಡಿದೆ.
ಕಾಂಗ್ರೆಸ್ ► 21
ಮುಸ್ಲಿಂ ಲೀಗ್ ► 15
KC ► 2
KECJ ► 1
ಯುಡಿಎಫ್ ಪಕ್ಷೇತರ ► 1
RMPOI ► 1
ಇದನ್ನೂ ಓದಿ: ಬಸವಕಲ್ಯಾಣ: ಬಿಜೆಪಿ ಅಭ್ಯರ್ಥಿ ಶರಣು ಸಲಗರರ ಗೆಲವಿಗೆ ಕಾರಣಗಳು


