Homeಮುಖಪುಟಬೆಳಗಾವಿ: ಜಿದ್ದಾಜಿದ್ದಿನ ಕಣದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮಂಗಳಾ ಅಂಗಡಿ

ಬೆಳಗಾವಿ: ಜಿದ್ದಾಜಿದ್ದಿನ ಕಣದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮಂಗಳಾ ಅಂಗಡಿ

- Advertisement -
- Advertisement -

ಕಡೆಯ ಸುತ್ತಿನವರೆಗೂ ತೀವ್ರ ಕುತೂಹಲ ಹುಟ್ಟಿಸಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ. ಕೇವಲ 2,904 ಮತಗಳ ಅಂತರದಿಂದ ಅವರು ಜಯಗಳಿಸಿದ್ದಾರೆ.

ಮಂಗಳಾ ಅಂಗಡಿ 4,35,202 ಮತಗಳನ್ನು ಪಡೆದರೆ, ಸತೀಶ್ ಜಾರಕಿಹೊಳಿ 4,32,298 ಮತಗಳನ್ನು ಪಡೆದರು.

ಮೊದಲ 40 ಸುತ್ತುಗಳ ಮತ ಎಣಿಕೆವರೆಗೂ ಐದು ಸಾವಿರ ಮತಗಳ ಅಂತರದಲ್ಲಿ ಬಿಜೆಪಿಯ ಮಂಗಳಾ ಅಂಗಡಿ ಮುನ್ನಡೆ ಸಾಧಿಸಿದ್ದರು. ಆದರೆ 40ನೇ ಸುತ್ತಿನಿಂದ 81ನೇ ಸುತ್ತಿನ ಮತ ಎಣಿಕೆವರೆಗೂ ಸತೀಶ್ ಜಾರಕಿಹೊಳಿ 5 ರಿಂದ 10 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು.

81ನೇ ಸುತ್ತಿನ ಮತ ಎಣಿಕೆಯಲ್ಲಿ ಕೇವಲ 488 ಮತಗಳ ಅಂತರದಿಂದ ಸತೀಶ್ ಜಾರಕಿಹೊಳಿ ಮುಂದಿದ್ದರು. ಆದರೆ 82 ನೇ ಸುತ್ತಿನ ಮತ ಎಣಿಕೆಯಿಂದ ಮಂಗಳಾ ಅಂಗಡಿಯವರು ಮತ್ತೆ 3000 ಮತಗಳ ಮುನ್ನಡೆ ಸಾಧಿಸಿದರು. 85ನೇ ಸುತ್ತಿನ ಮತ ಎಣಿಕೆ ಮುಗಿದಾಗ 3967 ಮತಗಳ ಮುನ್ನಡೆ ಸಾಧಿಸಿದರು. ಕೊನೆಗೆ 88 ಸುತ್ತಿನ ಮತ ಎಣಿಕೆ ಮುಗಿದಾಗ 2,904 ಮತಗಳ ಅಂತರದಿಂದ ಅವರು ಜಯಗಳಿಸಿದ್ದಾರೆ.


ಇದನ್ನೂ ಓದಿ: ಬಸವಕಲ್ಯಾಣ: ಬಿಜೆಪಿ ಅಭ್ಯರ್ಥಿ ಶರಣು ಸಲಗರರ ಗೆಲವಿಗೆ ಕಾರಣಗಳು

ಇದನ್ನೂ ಓದಿ: ಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...