ನಮಗೆ ಅರ್ಜೆಂಟ್ ಬೆಡ್ ಬೇಕಾಗಿದೆ, ಆಕ್ಸಿಜನ್ ಬೇಕಾಗಿದೆ, ರೆಮ್ಡಿಸಿವಿರ್ ಇಂಜೆಕ್ಷನ್ ಬೇಕಾಗಿದೆ ಎಂದೂ… ಹಾಗೆಯೆ ನಿಮ್ಮ ಸಹಾಯದಿಂದ ನಮ್ಮ ಪ್ರೀತಿಪಾತ್ರರು ಬದುಕಿದರು.. ನಿಮ್ಮ ಸಹಾಯವನ್ನು ನಾವೆಂದು ಮರೆಯುವುದಿಲ್ಲ ಎಂದು ಟ್ವಿಟರ್ ಮತ್ತು ಫೇಸ್ಬುಕ್‌ನಲ್ಲಿ ಅತಿ ಹೆಚ್ಚು ಟ್ಯಾಗ್ ಆಗುತ್ತಿರುವ ವ್ಯಕ್ತಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್..
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ಬಿ.ವಿ ಶ್ರೀನಿವಾಸ್ ದೆಹಲಿಯಲ್ಲಿ ಒಂದು ದೊಡ್ಡ ಯುವ ತಂಡ ಕಟ್ಟಿಕೊಂಡು, ಕೋವಿಡ್ ಸಂಬಂಧಿತವಾಗಿ ಯಾರಿಗೆ ಯಾವ ಸಹಾಯ ಬೇಕಾದರೂ ಹಗಲು ರಾತ್ರಿಯೆನ್ನದೇ ನೀಡಲು ಮುಂದಾಗಿದ್ದಾರೆ. ಇದುವರೆಗೂ ನೂರಾರು ಜನರ ಪ್ರಾಣ ಉಳಿಸಿದ ಶ್ರೇಯ ಇವರದು.. ಇವರನ್ನು ದೆಹಲಿ ಪೊಲೀಸರು ಇಂದು ಔಷಧಿ ವಿತರಣೆಗೆ ಸಂಬಂಧಿಸಿದ ಆರೋಪದ ಮೇಲೆ ಪ್ರಶ್ನಿಸಿದ್ದಾರೆ. ಅಲ್ಲದೇ ಆಪ್ ಮತ್ತು ಬಿಜೆಪಿ ನಾಯಕರು ತಮ್ಮನ್ನು ಪ್ರಶ್ನಿಸಲಾಯಿತು ಎಂದು ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಿಗಳ ಅಕ್ರಮ ವಿತರಣೆಯಲ್ಲಿ ವಿವಿಧ ಪಕ್ಷಗಳ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ದೀಪಕ್ ಸಿಂಗ್ ಎಂಬುವವರು ಸಲ್ಲಿಸಲಾಗಿರುವ ಅರ್ಜಿಯ ಮೇರೆಗೆ ತಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅರ್ಜಿಯಲ್ಲಿ ಯಾರೊಬ್ಬರ ಹೆಸರು ಉಲ್ಲೇಖಿಸದಿದ್ದರೂ ಕ್ರೈಮ್ ಬ್ರಾಂಚ್ ಪೊಲೀಸರು ದೆಹಲಿ ಯುತ್ ಕಾಂಗ್ರೆಸ್ ಕಚೇರಿಗೆ ತೆರಳಿ ಶ್ರೀನಿವಾಸ್‌ರವರ ಹೇಳಿಕೆ ಪಡೆದಿದ್ದಾರೆ. ಅದೇ ರೀತಿ ಆಪ್ ಪಕ್ಷದ ಎಎಪಿ ಶಾಸಕ ದಿಲೀಪ್ ಪಾಂಡೆಯವರನ್ನು ಪ್ರಶ್ನಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀನಿವಾಸ್, “ನಾವು ಕಾನೂನುಬಾಹಿರವಾಗಿ ಯಾವುದನ್ನೂ ಮಾಡುತ್ತಿಲ್ಲ, ಹಾಗಾಗಿ ಚಿಂತಿಸಬೇಕಾದ ಅಗತ್ಯವಿಲ್ಲ. ಪೊಲೀಸ್ ತನಿಖೆಯಿಂದ ನಮಗೆ ಭಯವಿಲ್ಲ, ನಾವು ನಮ್ಮ ಕೆಲಸವನ್ನು ನಿಲ್ಲಿಸದೇ ಮುಂದುವರೆಸುತ್ತೇವೆ” ಎಂದಿದ್ದಾರೆ.
“ನಾವು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಇಂತಹ ಪಿಐಎಲ್‌ಗಳಿಗೆ ಹೆದರುವುದಿಲ್ಲ. ನಮ್ಮ ಸಣ್ಣ ಪ್ರಯತ್ನಗಳು ಜೀವ ಉಳಿಸಲು ಸಹಾಯ ಮಾಡಿದರೆ, ನಾವು ನಮ್ಮ ಕೆಲಸ ನಿಲ್ಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಕುರಿತು “ರಕ್ಷಿಸುವವನು ಕೊಲ್ಲುವವನಿಗಿಂತ ಯಾವಾಗಲೂ ದೊಡ್ಡವನು #IStandWithIYC” ಎಂದು ಟ್ವೀಟ್ ಮಾಡಿದ್ದಾರೆ.
बचाने वाला हमेशा मारने वाले से बड़ा होता है।#IStandWithIYC
— Rahul Gandhi (@RahulGandhi) May 14, 2021
ಯೂತ್ ಕಾಂಗ್ರೆಸ್‌ನಿಂದ ಸಹಾಯ ಪಡೆದ ಪ್ರತಿಯೊಬ್ಬರ ಮನೆಗೂ ಗೃಹ ಸಚಿವ ಅಮಿತ್ ಶಾ ಪೊಲೀಸರನ್ನು ಕಳಿಸಿ ಪ್ರಶ್ನಿಸುತ್ತಾರೆಯೇ ಎಂದು ಸವಾಲು ಹಾಕುತ್ತೇನೆ. ಅವರನ್ನು ಎದುರಿಸುವ ಧೈರ್ಯ ಈ ಸರ್ಕಾರಕ್ಕಿದೆಯೇ ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.
ಈ ಸಾಂಕ್ರಾಮಿಕ ಸಮಯದಲ್ಲಿ ಸಹಾಯ ಮಾಡುತ್ತಿರುವ ಶ್ರೀನಿವಾಸ್ ಮತ್ತು ಯೂತ್ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡುವುದನ್ನು ಸಹಿಸುವುದಿಲ್ಲ. ರಾಜಕೀಯ ವಿರೋಧಿಗಳಿಗೆ ಕಿರುಕುಳ ಮತ್ತು ಬೆದರಿಕೆ ಒಡ್ಡುವುದು ಬಿಜೆಪಿಯ ಮೂಲ ಸಿದ್ದಾಂತವಾಗಿದೆ. ಆದರೆ ಇಂತಹ ದಾಳಿಗಳು ಕಾಂಗ್ರೆಸ್ ಅನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಎಎಪಿ ಶಾಸಕ ದಿಲೀಪ್ ಪಾಂಡೆ ಅವರನ್ನೂ ಪ್ರಶ್ನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ “ಮೋದಿ ಸರ್ಕಾರದ ಅಡಿಯಲ್ಲಿ ಜನರಿಗೆ ಸಹಾಯ ಮಾಡುವುದು ಅಪರಾಧವಾಗಿದೆ. ನನ್ನ ಇಡೀ ಕುಟುಂಬವು ಕೋವಿಡ್ ಸೋಂಕಿಗೆ ಒಳಗಾಗಿದೆ. ಆದರೆ ಕ್ರೈಮ್ ಬ್ರಾಂಚ್ ಪೊಲೀಸರು ನೀವು ಜನರಿಗೆ ಹೇಗೆ ಸಹಾಯ ಮಾಡಿದ್ದೀರಿ? ನಮಗೆ ಉತ್ತರಿಸಿ? ಎಂದು ಕೇಳುತ್ತಿದ್ದಾರೆ. ನೀವು ನನ್ನನ್ನ ಗಲ್ಲಿಗೇರಿಸಿದರೂ ಸರಿಯೇ, ಒಂದಲ್ಲ ಸಾವಿರ ಬಾರಿ ಜನರಿಗೆ ಸಹಾಯ ಮಾಡುತ್ತೇನೆ ಎಂದು ಅವರು ಘೋಷಿಸಿದ್ದಾರೆ.
ಈ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ರೀತಿಯ ವಿಚಾರಣೆಯಿಂದ ನೂರಾರು ಜನ ನೆರವು ಮಾಡುವುದರಿಂದ ಹಿಂದೆ ಸರಿಯಬಹುದು. ಇದು ಜನರಿಗೆ ಬಹಳ ತೊಂದರೆಯಾಗಲಿದೆ. ಕೋರ್ಟ್ ಮತ್ತು ಪೊಲೀಸರು ಈ ಹಿನ್ನೆಲೆಯಲ್ಲಿಯೂ ಯೋಚಿಸಬೇಕು ಮತ್ತು ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುತ್ತಿರುವವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
While the witch hunt continues, I have submitted my written reply to the Crime Branch, DP, sharing the last paragraph of my response to DP, and yes, #Sewa continues too?? #UnitedForHimanity https://t.co/qiGs6xKebK pic.twitter.com/daqBoFU7Pu
— मास्क लगायें, बेहद ज़रूरी हो तो ही बाहर जायें (@dilipkpandey) May 14, 2021
ಆದರೆ ದೆಹಲಿ ಸಂಸದ ಗೌತಮ್ ಗಂಭೀರ್ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪ್ರತಿಪಕ್ಷಗಳು ಪೊಲೀಸರ ಈ ಸರಿಯಾದ ಪ್ರಕ್ರಿಯೆಯನ್ನು ಅನಗತ್ಯವಾಗಿ ರಾಜಕೀಕರಣ ಮಾಡಬಾರದು. ದೆಹಲಿ ಪೊಲೀಸರು ನಮ್ಮಿಂದ ಸಹ ಉತ್ತರ ಕೇಳಿದ್ದಾರೆ ಮತ್ತು ನಾವು ಎಲ್ಲಾ ವಿವರಗಳನ್ನು ಒದಗಿಸಿದ್ದೇವೆ. ನಾನು ಯಾವಾಗಲೂ ದೆಹಲಿ ಮತ್ತು ಅದರ ಜನರಿಗೆ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸುತ್ತಿದ್ದೇನೆ!” ಎಂದು ಟ್ವೀಟ್ ಮಾಡಿದ್ದಾರೆ.
Opposition should not indulge in needless politicisation of due process.
Delhi Police has asked for a reply from us & we’ve provided all details. I will keep serving Delhi & its people to the best of my abilities always!— Gautam Gambhir (@GautamGambhir) May 14, 2021
ಬಿಜೆಪಿ ಮುಖಂಡ ಹರೀಶ್ ಖುರಾನಾ ಸಹ ನನ್ನನ್ನು ಪ್ರಶ್ನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. “ಜನರಿಗೆ ಸಹಾಯ ಮಾಡಿದ್ದಕ್ಕಾಗಿ ನನ್ನನ್ನು ಇಂದು ಕ್ರೈಮ್ ಬ್ರಾಂಚ್ ಪ್ರಶ್ನಿಸಿದೆ. ನಾನು ಮಧ್ಯಾಹ್ನ ಹೇಳಿಕೆ ನೀಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಕೈಚೆಲ್ಲಿ ಕುಳಿತಾಗ ಕೈಹಿಡಿದು ನಡೆಸಿದ ಮಾನವೀಯ ಮನಸ್ಸುಗಳಿಗೊಂದು ಸಲಾಂ
ಕೋವಿಡ್ ಹೆಚ್ಚಿದಂತೆಲ್ಲಾ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಮತ್ತು ವ್ಯವಸ್ಥೆ ಇದ್ದರೂ ಅದು ಅವ್ಯವಸ್ಥಿತವಾಗಿರುವ ಕಾರಣ ಜನ ಬೆಡ್‌ಗಾಗಿ, ಆಕ್ಸಿಜನ್ ಮತ್ತು ಇಂಜೆಕ್ಷನ್‌ಗಾಗಿ ಸರ್ಕಾರದ ಹೆಲ್ಫ್ ಲೈನ್‌ಗಳನ್ನು ನಂಬಿ ಕೂರುವ ಪರಿಸ್ಥಿತಿ ಇಲ್ಲ. ಆ ಹೆಲ್ಫ್ ಲೈನ್‌ಗಳಿಂದ ಸೂಕ್ತ ಭರವಸೆ ಸಿಗದ ಕಾರಣ ಅವರು ಶ್ರೀನಿವಾಸ್‌ರವರನ್ನು ಸಂಪರ್ಕಿಸುತ್ತಿದ್ದಾರೆ.
ಇತ್ತೀಚಿಗೆ ಭಾರತದಲ್ಲಿನ ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ ಕಚೇರಿಗಳು ಸಹ ಶ್ರೀನಿವಾಸ್‌ರವರ ಸಹಾಯ ಕೋರಿದ್ದವು. ಆಗ ಈ ತಂಡ ಕೂಡಲೇ ಅವರಿಗೆ ಆಮ್ಲಜನಕ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿತ್ತು. ಈ ವಿಡಿಯೋವನ್ನು ಯೂತ್ ಕಾಂಗ್ರೆಸ್ ಟ್ವೀಟ್ ಮಾಡಿದ್ದರಿಂದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಕ್ಷೇಪ ವ್ಯಕ್ತಪಡಿಸಿದ್ದರು.
Hoarding, even Love & help is a crime! #srinivasbv pic.twitter.com/mlrnzk4Cyz
— Prashant Bhushan (@pbhushan1) May 14, 2021
ಈ ಕಷ್ಟಕಾಲದಲ್ಲಿ ಶ್ರೀನಿವಾಸ್ ಎಂಬ ಕನ್ನಡಿಗನ ಮಾನವೀಯ ಕೆಲಸವನ್ನು ಹಲವಾರು ಮಾಧ್ಯಮಗಳು ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿವೆ. ದಿ ಕ್ವಿಂಟ್‌ನವರು ನೇರ ಅವರ ಕಛೇರಿಗೆ ತೆರಳಿ ಅವರ ಕೆಲಸ ವಿಧಾನದ ಕುರಿತು ವಿಡಿಯೋವೊಂದನ್ನು ಮಾಡಿದ್ದಾರೆ. ಈಗ ನೀವು ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ಮಾಡಬೇಕಾದುದು ಸರ್ಕಾರದ ಜವಾಬ್ದಾರಿ ಅಲ್ಲವೇ? ನೀವೇಕೆ ಮಾಡುತ್ತಿದ್ದೀರಿ ಎಂದು ಶ್ರೀನಿವಾಸ್ರವರನ್ನು ಪ್ರಶ್ನಿಸಿದಾಗ “ಇದು ರಾಜಕಾರಣ ಮಾಡುವ ಸಮಯವಲ್ಲ. ನಮ್ಮ ಕೈಯಿಂದ ಎಷ್ಟು ಮಾಡಲು ಸಾಧ್ಯ ಅಷ್ಟನ್ನು ಮಾಡುವ ದುರಂತದ ಸಮಯವಿದು. ನಮ್ಮ ಒಂದು ಸಣ್ಣ ಸಹಾಯ ಹಲವು ಜನರ ಪ್ರಾಣ ಉಳಿಸಬಹುದಾದರೆ ಅದೇ ನಮಗೆ ಮಹತ್ವದ್ದು. ಸಂಕಷ್ಟದಲ್ಲಿರುವ ಜನರಿಗೆ ಹೃದಯಪೂರ್ವಕವಾಗಿ ಸೇವೆ ಮಾಡಬೇಕಾದ ಸಮಯವಿದು” ಎನ್ನುತ್ತಾರೆ.
ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್ ತಂಡ


