Homeಕರೋನಾ ತಲ್ಲಣಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ - ಬಿಎಂಸಿ 92 ಡಾಕ್ಟರ್ಸ್‌ ತಂಡ

ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್‌ ತಂಡ

ಬಿಎಂಸಿ 1992ರ ಸಾಲಿನ ವಿದೇಶಗಳಲ್ಲಿರುವ ವೈದ್ಯರೆಲ್ಲರೂ ಸೇರಿ 250 ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಕಳಿಸಿದ್ದು, ಮತ್ತಷ್ಟನ್ನು ಕಳಿಸುವ ತಯಾರಿಯಲ್ಲಿದ್ದಾರೆ...

- Advertisement -
- Advertisement -

“ಕೊರೊನಾ ಬರುವುದನ್ನು ತಪ್ಪಿಸಲು ಆಗದೇ ಇರಬಹುದು. ಆದರೆ ಅದು ಉಲ್ಬಣವಾಗದಂತೆ ನೋಡಿಕೊಳ್ಳಲು ಸಾಧ್ಯ. ಖುದ್ದು ಡಾಕ್ಟರೇ ನಿಮ್ಮೊಂದಿಗೆ ಮಾತಾಡಿ ಚಿಕಿತ್ಸೆ ನೀಡುತ್ತಾರೆ. ಆ ನಂತರ ನೀವು ಗುಣವಾಗುವವರೆಗೆ‌ ಕೋವಿಡ್‌ ಕೌನ್ಸೆಲರ್ ನಿರಂತರ ಫಾಲೋಅಪ್‌ ಮಾಡುತ್ತಾರೆ. ಎಲ್ಲವೂ ಉಚಿತ” ಈ ರೀತಿಯಾಗಿ ವಾಗ್ದಾನ ಮಾಡಿದೆ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್‌ ತಂಡ..

ಕಳೆದೊಂದು ತಿಂಗಳಿಂದ ಬೆಡ್‌ ಕೊರತೆ, ಆಕ್ಸಿಜನ್, ಔಷಧಿ ಅಲಭ್ಯತೆಯಿಂದ ಜನ ಗೋಳಾಡುತ್ತಿರುವುದುನ್ನು, ಅಪಾರ ಸಾವು ನೋವುಗಳನ್ನು ನಾವು ಕಂಡಿದ್ದೇವೆ. ಕೋವಿಡ್ ಎರಡನೇ ಅಲೆಗೆ ಅತಿ ಹೆಚ್ಚು ತುತ್ತಾಗಿರುವ ರಾಜ್ಯ ಈಗ ಕರ್ನಾಟಕ ಆಗಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಉಲ್ಬಣವಾಗದಂತೆ ತಡೆಯಲು ಅಂದರೆ ಜನರಿಗೆ ಬೆಡ್‌, ಐಸಿಯು, ವೆಂಟಿಲೇಟರ್ ಬೇಕಾಗುವಂತ ಪರಿಸ್ಥಿತಿ ಬರುವ ಮೊದಲೇ ಅವರನ್ನು ಗುಣಪಡಿಸುವುದು ಕೆಸಿವಿಟಿ (ಕರ್ನಾಟಕ ಕೋವಿಡ್ ವಾಲಂಟೀಯರ್ಸ್ ಟೀಮ್‌) ಯ ಗುರಿಯಾಗಿದೆ.

ಬಹಳಷ್ಟು ಜನಕ್ಕೆ ಕೊರೊನಾ ಬಂದಾಗ ಏನು ಮಾಡಬೇಕು? ಉಸಿರಾಟದ ಸಮಸ್ಯೆಯುಂಟಾದರೆ ಏನು ಮಾಡಬೇಕು ಎಂಬುದು ತಿಳಿದಿಲ್ಲ. ಆ ಸಂದರ್ಭದಲ್ಲಿ ಬೆಡ್, ಔಷಧಿ ಸಿಗುತ್ತಿಲ್ಲವೆಂಬ ಭಯಕ್ಕೆ ಅವರು ಎದೆಗುಂದಿ ಮತ್ತಷ್ಟು ರೋಗಕ್ಕೆ ತುತ್ತಾಗುತ್ತಾರೆ. ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆ ಅದನ್ನು ನಿಭಾಯಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ವೈದ್ಯರು ಆರಂಭದಿಂದಲೇ ಸೋಂಕಿತರಿಗೆ ಫೋನಿನಲ್ಲಿ/ಆಪ್ ಮೂಲಕ ಹೇಳಿದ ಸಲಹೆಗಳನ್ನು ಪಾಲಿಸುವಂತೆ ಮಾಡಿ ಆಕ್ಸಿಜನ್ ಬೆಡ್‌ಗಾಗಿ ಹುಡುಕುವ ಪರಿಸ್ಥಿತಿಗೆ ಹೋಗದಂತೆ ಮಾಡಲು, ಕೊರೊನಾ ಉಲ್ಭಣಿಸಿದಂತೆ ತಡೆಯಲು ಕೆಸಿವಿಟಿ ಮುಂದಾಗಿದೆ.

500 ಕ್ಕೂ ಹೆಚ್ಚು ವಾಲಂಟೀಯರ್‌ಗಳು, ಬೆಂಗಳೂರು ಮೆಡಿಕಲ್ ಕಾಲೇಜಿನ 1992ರ ಸಾಲಿನ ವೈದ್ಯರು ಸೇರಿದಂತೆ 100 ಕ್ಕೂ ಹೆಚ್ಚು ವೈದ್ಯರು, 25 ಸ್ಪೆಷಲ್ ಕೌನ್ಸೆಲರ್‌ಗಳು, 50 ಫೀಲ್ಡ್‌ ವಾಲಂಟಿಯರ್‌ಗಳು ದಿನದ 24 ಗಂಟೆಗಳೂ ಕೂಡಾ ನೆರವಿನ ಕೇಂದ್ರದ ಹೆಲ್ಪ್ ಲಿಂಕ್ ನಂಬರ್ ಮೂಲಕ ಸೇವೆಗೆ ಸಿದ್ಧರಿದ್ದಾರೆ.

08047166155 ಹೆಲ್ಫ್‌ಲೈನ್‌ಗೆ ಸೋಂಕಿತರು ಕರೆ ಮಾಡಿದರೆ ರೋಗಿಯ ಗುಣಲಕ್ಷಣಗಳು, ಪರಿಸ್ಥಿತಿಗನುಗುಣವಾಗಿ ವೈದ್ಯರು ಚಿಕಿತ್ಸೆ ನೀಡುತ್ತಾರೆ. ನಂತರ ಒಬ್ಬ ನುರಿತ ವಾಲಂಟೀಯರ್ಸ್ ಆ ಸೋಂಕಿತರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮೇಲ್ವೀಚಾರಣೆ ನಡೆಸುತ್ತಾರೆ. ಅಗತ್ಯಬಿದ್ದಲ್ಲಿ ರೋಗಿಯ ಮನೆಗೆ ಆಕ್ಸಿಜನ್, ಔ‍ಷಧಿಗಳನ್ನು ಒದಗಿಸಲಾಗುತ್ತದೆ. ಒಂದು ವೇಳೆ ರೋಗ ಉಲ್ಭಣಗೊಂಡಲ್ಲಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ರೀತಿಯಾಗಿ ಗುಣಮುಖರಾಗುವವರೆಗೂ ವ್ಯವಸ್ಥಿತವಾಗಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲು ಕೆಸಿವಿಟಿ ಬದ್ಧವಾಗಿದೆ.

ಕೆಸಿವಿಟಿ ವತಿಯಿಂದ ಇದುವರೆಗೂ 180 ಕೊರೊನಾ ಸೋಂಕಿತರಿಗೆ ಬಿಬಿಎಂಪಿ ಸಹಾಯವಾಣಿ ಮೂಲಕವೇ ಬೆಡ್ ಬುಕ್ ಮಾಡಿಕೊಡಲಾಗಿದೆ. ಅಲ್ಲದೇ ಕೆಸಿವಿಟಿ ಸಹಯೋಗದ ಬೆಂಗಳೂರಿನ ಎಚ್‌ಬಿಎಸ್ ಆಸ್ಪತ್ರೆಗೆ ಹಲವಾರು ಜನರನ್ನು ದಾಖಲಿಸಲಾಗಿದೆ. ಎಚ್‌ಬಿಎಸ್‌ ಆಸ್ಪತ್ರೆಯು ಕೊರೊನಾ ರೋಗಿಗಳಿಗೆ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸುತ್ತಿದೆ. ಇದೇ ರೀತಿಯಾಗಿ ರಾಜ್ಯದ ಹಲವು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಹಲವು ಆಸ್ಪತ್ರೆಗಳೊಂದಿಗೆ ಸಹಯೋಗಕ್ಕಾಗಿ ಕೆಸಿವಿಟಿ ಪ್ರಯತ್ನಿಸುತ್ತಿದೆ.

ಈ ಚಿಕಿತ್ಸೆಗಳಿಗೆ ಅನುಕೂಲವಾಗಲೆಂದು ವಿದೇಶಗಳಲ್ಲಿ ನೆಲೆಸಿರುವ ಬೆಂಗಳೂರು ಮೆಡಿಕಲ್ ಕಾಲೇಜಿನ 1992ರ ಸಾಲಿನ ವೈದ್ಯರೆಲ್ಲರೂ ಸೇರಿ 4 ಕೋಟಿ ರೂ ವೆಚ್ಚದಲ್ಲಿ 250 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಕಳಿಸಿದ್ದು ಇನ್ನೆರೆಡು ದಿನಗಳಲ್ಲಿ ಬಂದು ತಲುಪಲಿವೆ. 5ಲೀ ಮತ್ತು 10 ಲೀ ಸಾಮರ್ಥ್ಯದ ಮತ್ತಷ್ಟು ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಇನ್ನು ಕೆಲವೇ ದಿನಗಳಲ್ಲಿ ಕಳಿಸುವುದಾಗಿ ಅವರು ನಿರ್ಧರಿಸಿದ್ದಾರೆ. ಇವು ಮನೆಯಲ್ಲಿಯೇ ಆಕ್ಸಿಜನ್ ಅಗತ್ಯವಿದ್ದವರಿಗೆ ನೀಡಲು ಸಹಕಾರಿಯಾಗಿವೆ.

ಅತಿ ದೊಡ್ಡ ಮಾನವೀಯ ಬಿಕ್ಕಟ್ಟು ಉಂಟಾಗಿರುವ ಈ ಸಂದರ್ಭದಲ್ಲಿ ಕೆಸಿವಿಟಿಯ ಈ ವ್ಯವಸ್ಥಿತ ಮಾನವೀಯ ಕೆಲಸ ಮಾದರಿಯುತವಾಗಿದೆ. ಅಗತ್ಯವಿದ್ದವರು ಇದರ ಸಹಾಯ ಪಡೆದುಕೊಳ್ಳುವುದರ ಜೊತೆಗೆ ಆಸಕ್ತರು ವಾಲಂಟಿಯರ್‌ಗಳಾಗಿ ಸಹ ತೊಡಗಿಸಿಕೊಳ್ಳಬಹುದಾಗಿದೆ. ದಿನಕ್ಕೆ 3 ಗಂಟೆಗಳ ಸಮಯ ನೀಡುವವರು 9731440021 ಸಂಖ್ಯೆಯನ್ನು ಸಂಪರ್ಕಿಸಬಹುದು.


ಇದನ್ನೂ ಓದಿ: ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...