Homeಮುಖಪುಟಕೊರೊನಾ ಆತಂಕ: ಯುಪಿಎಸ್‌ಸಿ ಪರೀಕ್ಷೆ ಅಕ್ಟೋಬರ್‌ 10ಕ್ಕೆ ಮುಂದೂಡಿಕೆ

ಕೊರೊನಾ ಆತಂಕ: ಯುಪಿಎಸ್‌ಸಿ ಪರೀಕ್ಷೆ ಅಕ್ಟೋಬರ್‌ 10ಕ್ಕೆ ಮುಂದೂಡಿಕೆ

- Advertisement -
- Advertisement -

ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೂನ್ 27 ರಂದು ನಡೆಯಬೇಕಿದ್ದ ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (ಯುಪಿಎಸ್‌ಸಿ) ಸಿವಿಲ್ ಸರ್ವೀಸಸ್ ಪ್ರಾಥಮಿಕ ಪರೀಕ್ಷೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ.

“ಕೊರೊನಾ ವೈರಸ್‌ನಿಂಸ ಉಂಟಾಗಿರುವ ಪರಿಸ್ಥಿತಿಗಳಿಂದಾಗಿ, ಕೇಂದ್ರ ಸಾರ್ವಜನಿಕ ಸೇವಾ ಆಯೋಗವು 2021 ರ ಜೂನ್ 27 ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆಯನ್ನು 2021 ರ ಅಕ್ಟೋಬರ್ 10 ಕ್ಕೆ ಮುಂದೂಡಿದೆ” ಎಂದು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ ) ಹೇಳಿಕೆಯಲ್ಲಿ ತಿಳಿಸಿದೆ.

ಆಯೋಗವು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳ ನೇಮಕಾತಿಗೆ ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ.

ಇದನ್ನೂ ಓದಿ: ಯಜ್ಞ ಮಾಡಿದರೆ ಕೊರೊನಾ 3ನೇ ಅಲೆ ಭಾರತವನ್ನು ಟಚ್ ಮಾಡಲ್ಲ ಎಂದ ಬಿಜೆಪಿ ಸಚಿವೆ!

ಕಳೆದ ವರ್ಷ, ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಮೇ 31 ರಿಂದ ಅಕ್ಟೋಬರ್ 4 ಕ್ಕೆ ಮುಂದೂಲಾಗಿತ್ತು. ಕಳೆದ ಬಾರಿಯ ಮುಖ್ಯ ಲಿಖಿತ ಪರೀಕ್ಷೆ ಮುಗಿದಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ಸಂದರ್ಶನವನ್ನು ತಡೆಹಿಡಿಯಲಾಗಿದೆ.

ಮೇ 9 ರಂದು ನಿಗದಿಯಾಗಿದ್ದ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಜಾರಿ ಅಧಿಕಾರಿಗಳ ಆಯ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ. “ಮುಂದೂಡಲ್ಪಟ್ಟ ಪರೀಕ್ಷೆ ಅಥವಾ ಸಂದರ್ಶನಗಳಿಗೆ ದಿನಾಂಕಗಳನ್ನು ನಿರ್ಧರಿಸಿದಾಗ ಅಭ್ಯರ್ಥಿಗಳಿಗೆ ಕನಿಷ್ಠ 15 ದಿನಗಳ ಮುಂಚೆ ನೋಟಿಸ್ ನೀಡಲಾಗುವುದು” ಎಂದು ಆಯೋಗ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದೆ.

ಭಾರತೀಯ ಆರ್ಥಿಕ ಸೇವೆಗಳ ಸಂದರ್ಶನ ಮತ್ತು ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆಗಳ ಪರೀಕ್ಷೆಯನ್ನೂ ಮುಂದೂಡಲಾಗಿದೆ. ಮೇ 5 ರಿಂದ ಪ್ರಾರಂಭವಾಗಬೇಕಿದ್ದ Combined Medical Services exam  ನೋಂದಣಿಯನ್ನು ಆಯೋಗ ಮುಂದೂಡಿದೆ.


ಇದನ್ನೂ ಓದಿ: 18-44 ವರ್ಷದ ಲಸಿಕಾ ಅಭಿಯಾನ ತಾತ್ಕಾಲಿಕ ರದ್ದು: ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...