ಲಸಿಕಾ ನೀತಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪ ವಿರೋಧಿಸಿದ ಕೇಂದ್ರ ಸರ್ಕಾರ

ಹಲವು ಅಡೆತಡೆಗಳ ನಡುವೆ ಮೇ 1 ರಿಂದ ಆರಂಭವಾಗಿದ್ದ 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಅಭಿಯಾನವನ್ನು ಮೇ 14 ರಿಂದ ಕರ್ನಾಟಕ ಸರ್ಕಾರ ತಾತ್ಕಾಲಿಕವಾಗಿ ರದ್ದು ಮಾಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮೂರು ದಿನದ ಹಿಂದೆ ತಾನೇ ಆರೋಗ್ಯ ಸಚಿವ ಡಾ.ಸುಧಾಕರ್‌ರವರು ಟ್ವೀಟ್ ಮಾಡಿ “ಸೋಮವಾರ, ಮೇ 10ರಿಂದ ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಜನರಲ್, ಸರ್ ಸಿ.ವಿ.ರಾಮನ್ ಜನರಲ್, ಇಎಸ್ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 18-44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕೆ ವಿತರಿಸಲಾಗುವುದು. ಹಲವು ಜಿಲ್ಲೆಗಳಲ್ಲಿಯೂ ಆರಂಭಿಸಲಾಗುವುದು” ಎಂದಿದ್ದರು.

ಆದರೆ ಇಂದು ಸರ್ಕಾರ ಲಸಿಕೆಯ ಕೊರತೆಯಿರುವುದರಿಂದ ಮೇ 14 ರಿಂದ ತಾತ್ಕಾಲಿಕವಾಗಿ 18-44 ವರ್ಷ ವಯೋಮಾನದವರಿಗೆ ಲಸಿಕೆ ರದ್ದುಮಾಡುತ್ತಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡುವುದು ನಮ್ಮ ಆದ್ಯತೆ ಎಂದು ತಿಳಿಸಿದೆ. ಕೋವಿನ್ ಆಪ್‌ನಲ್ಲಿ ನೊಂದಣಿ ಮಾಡಿಸಿಕೊಂಡವರಿಗೂ ಸಹ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದರಿಂದ ಜನರ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಈ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯ ಸರ್ಕಾರವೇ ಲಸಿಕೆಯಿಲ್ಲ ಎಂದು ಕೈಚೆಲ್ಲಿದರೆ ಜನರೇನು ಮಾಡಬೇಕು? ಈಗ ಕೇಂದ್ರ ಸರ್ಕಾರ ಲಸಿಕೆ ಪೂರೈಸುತ್ತಿಲ್ಲ ಎಂದಿದ್ದಾರೆ. ಎರಡು ಕಡೆ ಒಂದೇ ಸರ್ಕಾರವಿದ್ದರೆ ಸ್ವರ್ಗವಾಗುತ್ತೆ ಎಂದಿದ್ದರು. ಆದರೆ ಜನರ ಬಾಳು ಈಗ ನರಕವಾಗಿದೆ. ಇವರ ಭಾಷೆಯಲ್ಲೇ ಹೇಳುವುದಾರೆ ರಾಜ್ಯದ 25 ಜನ BJP ಸಂಸದರಿಗೆ ಕೇಂದ್ರದ ಬಳಿ ಲಸಿಕೆ ಕೇಳಲು ಧಮ್ ಇಲ್ಲವೆ?” ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ಲಸಿಕೆ ಕೊಡುವ ಯೋಗ್ಯತೆ ಇಲ್ಲದಿದ್ದರೆ ಲಸಿಕಾ ಅಭಿಯಾನ ಘೋಷಣೆ ಮಾಡಿದ್ಯಾಕೆ? ಆರೋಗ್ಯ ಸಚಿವರು ಎಲ್ಲರಿಗೂ ಲಸಿಕೆ ಕೊಡುತ್ತೀವಿ ಎನ್ನುತ್ತಾರೆ. ಮುಖ್ಯಮಂತ್ರಿಗಳು ಲಸಿಕೆಗಾಗಿ ಬೊಬ್ಬೆ ಹೊಡೆಯಬೇಡಿ ಎನ್ನುತ್ತಾರೆ. ಇದೇನು ಜವಬ್ಧಾರಿಯುತ ಸರ್ಕಾರವೋ?ರಣಹೇಡಿ ಸರ್ಕಾರವೋ? ಈ ಸರ್ಕಾರ ರಾಜ್ಯದ ಜನರ ದೌರ್ಭಾಗ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ 18-44 ವರ್ಷದವರಿಗೆ ಲಸಿಕೆ ನಿಲ್ಲಿಸುವುದಾಗಿ ಘೋಷಿಸಿದೆ. ರಾತ್ರಿ ವೇಳೆಗೆ ಬೆಂಗಳೂರಿನಲ್ಲಿ ಕೇವಲ 15,000 ಲಸಿಕೆಗಳು ಮಾತ್ರ ಉಳಿದಿವೆ. 63 ಲಕ್ಷ ಜನರಿಗೆ 2 ನೇ ಡೋಸ್ ಅಗತ್ಯವಿದೆ, ಆದರೆ ಲಸಿಕೆ ಇಲ್ಲ. ಯಾರದರೂ ಈ ಲಸಿಕೆ ಕೊರತೆಯ ಪಟ್ಟಿಯನ್ನು ಸಂಸದ ತೇಜಸ್ವಿ ಸೂರ್ಯ ಕೊಟ್ಟು ಮೋದಿಗೆ ಓದಲು ಹೇಳುವಿರಾ ಎಂದು ಶ್ರೀವತ್ಸ ವ್ಯಂಗ್ಯವಾಡಿದ್ದಾರೆ.

18-44 ವಯಸ್ಸಿನವರಿಗೆ ಲಸಿಕೆ ಅಭಿಯಾನ ಮೇ 1 ರಿಂದ ಪ್ರಾರಂಭವಾಗುವುದಾಗಿ ಪಿಎಂ ಪ್ರಕಟಿಸಿದರು. ಸಿಎಂ ಮೇ 1 ರಂದು ಉದ್ಘಾಟನೆ ಮಾಡುತ್ತಾರೆ. ಆದರೆ ಎಲ್ಲಿಯೂ ಲಸಿಕೆ ಸರಬರಾಜು ಇಲ್ಲ. ಮೇ 10 ರಿಂದ ಮತ್ತೆ ಪುನರಾರಂಭ. ಈಗ ಮೇ 14 ರಿಂದ ಅಮಾನತುಗೊಳಿಸಲಾಗಿದೆ. ಇದು ಆಡಳಿತ ಅಥವಾ ತಮಾಷೆಯೊ? ಎಂದು ಶಾಸಕ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೂಡ ಇಲ್ಲ!

18-44 ವಯಸ್ಸಿನವರಿಗೆ ಲಸಿಕೆ ಇಲ್ಲ ಮಾತ್ರವಲ್ಲದೇ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೂಡ ಲಸಿಕೆ ನೀಡಲಾಗುತ್ತಿಲ್ಲ. ತೀವ್ರ ಲಸಿಕೆಯ ಕೊರತೆಯಿಂದ ಅವರು ಸಹ ಕಾಯಬೇಕಾಗಿದೆ. ಈ ಕುರಿತು ಗದಗ ಜಿಲ್ಲಾ ಅರೋಗ್ಯ ಅಧಿಕಾರಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನಮ್ಮ ಆದ್ಯತೆಯಾಗಿರುವುದರಿಂದ ಹೊಸಬರಿಗೆ ಮೊದಲ ಡೋಸ್ ನೀಡಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇಂದು ಕೂಡ ಲಸಿಕೆ ಇಲ್ಲದೆ ಹಲವು ಆಸ್ಪತ್ರೆಗಳು ಲಸಿಕೆ ನೀಡುವುದನ್ನು ನಿಲ್ಲಿಸಿವೆ. ಕೋವಿನ್ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡರೂ ಲಸಿಕೆ ಸಿಗದವರು ಸಮರ್ಪಕ ಯೋಜನೆ ಇಲ್ಲದ ಕಾರಣ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಸತತ ಮನವಿಗೆ ಸ್ಪಂದಿಸದ ಮೋದಿ, ಯೋಗಿ!: ಮೋದಿ ಅನುಯಾಯಿ, RSS ಕಾರ್ಯಕರ್ತ ಕೊವಿಡ್‌ಗೆ ಬಲಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

2 COMMENTS

LEAVE A REPLY

Please enter your comment!
Please enter your name here