ಗಂಡನ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ- ಆರೋಪಿ ಬಂಧನ
PC: Parentune.com

ಬಿಹಾರ್‌ನ ಭಾಗಲ್ಪುರದ ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್‌ ತನ್ನ ಕೊರೊನಾ ಸೋಂಕಿತ ಪತಿ ಮತ್ತು ತಾಯಿಯನ್ನು ನೋಡಿಕೊಳ್ಳುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆ ಕುರಿತಾಗಿ ಸಂತ್ರಸ್ತ ಮಹಿಳೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪತ್ರಕರ್ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್ಐಆರ್ ದಾಖಲಿಸಲಾಗಿತ್ತು.

ಎಫ್‌ಐಆರ್ ದಾಖಲಾದ ಮರುದಿನವೇ ಆಸ್ಪತ್ರೆ ಸಿಬ್ಬಂದಿ ಆರೋಪಿ ಜ್ಯೋತಿ ಕುಮಾರ್ ಅವರನ್ನು ಬಂಧಿಸಲಾಗದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿರುವ ಬ್ಲಾಕ್ ಫಂಗಸ್ ಸೋಂಕು: ಮಹಾರಾಷ್ಟ್ರದಲ್ಲೇ 2000 ಮಂದಿ ಸೋಂಕಿತರು

“ಗ್ಲೋಕಲ್ ಆಸ್ಪತ್ರೆಯಲ್ಲಿ ಅಟೆಂಡೆಂಟ್ ಆಗಿರುವ ಜ್ಯೋತಿ ಕುಮಾರ್ ಎಂಬ ವ್ಯಕ್ತಿಯ ಬಳಿ ನನ್ನ ಕೊರೊನಾ ಸೋಂಕಿತ ಪತಿಗೆ ಕ್ಲೀನ್ ಬೆಡ್‌ಶೀಟ್‌ಗಳನ್ನು ನೀಡಲು ಸಹಾಯ ಮಾಡಬೇಕೆಂದು ವಿನಂತಿಸಿದೆ. ಸಹಾಯ ಮಾಡುತ್ತೇನೆಂದು ಹೇಳಿದ ಆ ವ್ಯಕ್ತಿ ನನ್ನ ದುಪ್ಪಟ್ಟಾ ಎಳೆದು, ಸೊಂಟಕ್ಕೆ ಕೈ ಹಾಕಿ ನಗುತ್ತಿದ್ದರು. ನಾನು ಯಾರಿಗೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ನನ್ನ ಪತಿ, ನನ್ನ ತಾಯಿ ಇಲ್ಲಿ ದಾಖಲಾಗಿದ್ದರು” ಎಂದು ಮಹಿಳೆ ಆರೋಪಿಸಿದ್ದರು.

“ಪ್ರಾಥಮಿಕ ವಿಚಾರಣೆಯಲ್ಲಿ ಮಹಿಳೆಯ ಆರೋಪವನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಆರೋಪಗಳು ನಿಜವೆಂದು ಸಾಬೀತಾದರೆ, ಖಂಡಿತವಾಗಿಯೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಆಸ್ಪತ್ರೆ ತಿಳಿಸಿತ್ತು. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗ್ಲೋಕಲ್ ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಹಿಳೆ, ಜೊತೆಗೆ ಮಾಯಗಂಜ್ ಮತ್ತು ಪಾಟ್ನಾದಲ್ಲಿ ವೈದ್ಯರ ನಿರ್ಲಕ್ಷ್ಯ ತನ್ನ ಪತಿಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದರು.

ಕಳೆದ ವಾರ ಇದೇ ರೀತಿಯ ಘಟನೆಯಲ್ಲಿ, ಕೊರೊನಾ ಸೋಂಕಿತ ರೋಗಿಗೆ ಕಿರುಕುಳ ನೀಡಿದ ಆರೋಪದಡಿ ಇಂದೋರ್ ಪೊಲೀಸರು ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಮೇ ತಿಂಗಳಲ್ಲಿ ಬಂಧಿಸಿದ್ದರು.


ಇದನ್ನೂ ಓದಿ: ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲಿಯೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ!

LEAVE A REPLY

Please enter your comment!
Please enter your name here