Homeಮುಖಪುಟಯಜ್ಞ ಮಾಡಿದರೆ ಕೊರೊನಾ 3ನೇ ಅಲೆ ಭಾರತವನ್ನು ಟಚ್ ಮಾಡಲ್ಲ ಎಂದ ಬಿಜೆಪಿ ಸಚಿವೆ!

ಯಜ್ಞ ಮಾಡಿದರೆ ಕೊರೊನಾ 3ನೇ ಅಲೆ ಭಾರತವನ್ನು ಟಚ್ ಮಾಡಲ್ಲ ಎಂದ ಬಿಜೆಪಿ ಸಚಿವೆ!

- Advertisement -
- Advertisement -

ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸಾಂಕ್ರಾಮಿಕ ವೈರಸ್‌ಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೊರೊನಾ ಮೂರನೇ ಅಲೆ ತಡೆಯಲು ಯಜ್ಞ ನಡೆಸುವಂತೆ ಸಲಹೆ ನೀಡಿದ್ದಾರೆ.

ಕೊರೊನಾ ಹಬ್ಬುತ್ತಿರುವ ಈ ಸಮಯದಲ್ಲಿ ಪರಿಸರವನ್ನು ಶುದ್ಧೀಕರಿಸಲು ಮತ್ತು ಮೂರನೇ ತರಂಗವನ್ನು ದೂರವಿಡಲು ಪ್ರತಿಯೊಬ್ಬರೂ ನಾಲ್ಕು ದಿನಗಳ ಕಾಲ ‘ಯಜ್ಞ ಚಿಕಿತ್ಸೆ’ ನಡೆಸುವಂತೆ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಹೇಳಿಕೆ ನೀಡಿದ್ದಾರೆ.

ಇಂದೋರ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪರಿಸರ ಶುದ್ಧೀಕರಣಕ್ಕಾಗಿ, ನಾಲ್ಕು ದಿನಗಳ ಕಾಲ ಯಜ್ಞವನ್ನು ಮಾಡಿ. ಇದು “ಯಜ್ಞ ಚಿಕಿತ್ಸಾ”. ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಯಜ್ಞ ಚಿಕಿತ್ಸೆ ಮಾಡುತ್ತಿದ್ದರು. ಇದು ಪರಿಸರವನ್ನು ಶುದ್ಧೀಕರಿಸುತ್ತದೆ ಇದರಿಂದ ಕೊರೊನಾ ಮೂರನೇ ಅಲೆ ಭಾರತವನ್ನು ಮುಟ್ಟುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲಿಯೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ!

ಭಾರತವು ಪ್ರಸ್ತುತ ವಿನಾಶಕಾರಿ ಎರಡನೇ ಕೋವಿಡ್ ಅಲೆಯನ್ನು ಎದುರಿಸುತ್ತಿದೆ, ಅದು ರಾಷ್ಟ್ರದಾದ್ಯಂತ ವ್ಯಾಪಿಸಿದೆ. ದೇಶದ ಆರೋಗ್ಯ ಮೂಲಸೌಕರ್ಯಗಳ ವ್ಯವಸ್ಥೆಯನ್ನೇ ಅಲುಗಾಡಿಸಿದ್ದು, ಕೊರೊನಾ ವಾರಿಯರ್ಸ್ ಆಗಿರುವ ವೈದ್ಯಕೀಯ ಕಾರ್ಯಕರ್ತರ ಮೇಲೆ ಹೊರೆಯಾಗಿದೆ. ನಾಲ್ಕು ದಿನಗಳ ಕಾಲ ಯಜ್ಞ ಚಿಕಿತ್ಸೆ ನಡೆಸಿದರೆ ಕೊರೊನಾ ಮೂರನೇ ಅಲೆ ಭಾರತವನ್ನು ತಲುಪಲು ಸಾಧ್ಯವಿಲ್ಲ ಎಂದು ಉಷಾ ಠಾಕೂರ್‌ ಹೇಳಿದ್ದಾರೆ.

“ತಜ್ಞರ ಪ್ರಕಾರ, ಈ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಿದೆ. ಇದಕ್ಕಾಗಿ ಮಧ್ಯಪ್ರದೇಶ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗವನ್ನು ನಾವು ಯಶಸ್ವಿಯಾಗಿ ನಿವಾರಿಸುತ್ತೇವೆ” ಎಂದು ಹೇಳಿದ್ದಾರೆ.

ಈ ಹಿಂದೆ, ಉಷಾ ಠಾಕೂರ್ ಇತ್ತೀಚೆಗೆ ಕೊರೊನಾ ನಿರ್ಮೂಲನೆ ಮಾಡಲು ಇಂದೋರ್ ವಿಮಾನ ನಿಲ್ದಾಣದಲ್ಲಿ ಪ್ರತಿಮೆಯ ಮುಂದೆ ಪೂಜೆ, ಹೋಮ ಆಚರಣೆಗಳನ್ನು ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ಕೊರೊನಾ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದಾಗ ಮಾಸ್ಕ್ ಕೂಡ ಧರಿಸಲಿಲ್ಲ ಎಂದು ಟೀಕಿಸಲಾಗಿತ್ತು.

ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಕಾಣುವ ಉಷಾ ಠಾಕೂರ್, ತಾವು ನಿಯಮಿತವಾಗಿ ಹನುಮಾನ್ ಚಾಲಿಸಾವನ್ನು ಪಠಿಸುವುದರಿಂದ ಮತ್ತು ಕಷಾಯ ಕುಡಿಯುವುದರಿಂದ ತನ್ನ ವೈದಿಕ ಜೀವನಶೈಲಿಯಿಂದಾಗಿ ತಮ್ಮ ಮೇಲೆ ಕೊರೊನಾ ಆಕ್ರಮಣ ಮಾಡುವುದಿಲ್ಲ ಎಂದು ಹೇಳಿದ್ದರು.


ಇದನ್ನೂ ಓದಿ: ಕೊರೊನಾ ಚಿಕಿತ್ಸೆಗೆ ಹಸುವಿನ ಸಗಣಿ ಬಳಕೆ ಅಪಾಯಕಾರಿ- ವೈದ್ಯರ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. 1, 2 ನೇ ಅಲೆಗೆ ಯಾಕೆ ಮಾಡಲಿಲ್ಲ…ಈ ಯಾಹಾಗ (ಯಾಗ)
    ಯಗ್ಗಣ (ಯಜ್ಞ) ಗಳೂ ..

  2. ಕೊರೋನಾ ಓಡಿಸ‌ಲಿಕ್ಕೆ ಪ್ರ‌ಧಾನಿಗ‌ಳು ದೀಪ‌ಹ‌ಚ್ಚಿ ತ‌ಟ್ಟೇ ಬಾರಿಸ‌ಲು ಹೇಳಿದ‌ರು. ಈ ಮೆಡ‌ಮ್ ಯ‌ಗ್ನ‌ ಮಾಡಿ ಅ0ತಾ ಹೇಳ್ತಾರೆ. ಮು0ದಿನ‌ವ‌ರು ಬ್ರಾಹ್ಮ‌ಣ‌ರಿಗೆ ಹ‌ಸುಗ‌ಳ‌ನ್ನು ದಾನ‌ಮಾಡಿ ಅ0ತಾ ಹೇಳ‌ಬ‌ಹುದು. ಒಟ್ಟಾರೆ ಜ‌ನ‌ ಸ‌ತ್ರೂ ಪ‌ರ‌ವಾಗಿಲ್ಲ‌ ವೈಧಿಕ‌ ಪ‌ರ‌0ಪ‌ರೆ ಉಳಿಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...