ಪ್ರಧಾನಿ ಮೋದಿ ಶುಕ್ರವಾರದಂದು ತಾವು ಲೋಕಸಭೆಯಲ್ಲಿ ಪ್ರತಿನಿಧಿಸುವ ವಾರಣಾಸಿಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೊ ಕಾನ್ಪರೆನ್ಸ್ ಮೂಲಕ ಮಾತನಾಡಿದ್ದಾರೆ. ಈ ವೇಳೆ ಸಾಂಕ್ರಮಿಕದಿಂದ ಮೃತಪಟ್ಟವರನ್ನು ನೆನೆದು ಭಾವುಕರಾಗಿದ್ದು, ನೆಟ್ಟಿಗರು ಇದನ್ನು ಮೊಸಲೆ ಕಣ್ಣೀರು ಎಂದು ಬಣ್ಣಿಸಿದ್ದು ಟ್ವಿಟರ್‌ನಲ್ಲಿ #CrocodileTears ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ‘ಕೊರೊನಾ ನಮ್ಮಿಂದ ಹಲವು ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ಕೊರೊನಾದಿಂದ ನಿಧನರಾದವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನೂ ಸೂಚಿಸುತ್ತೇನೆ’ ಎಂದು ಹೇಳಿದ್ದಾರೆ. ಈ ಮಾತಿನ ವೇಳೆ ಭಾವುಕರಾದ ಮೋದಿ, ಅಳುತಡೆಯಲು ಪ್ರಯತ್ನಿಸಿದಂತೆ ಕಂಡು ಬಂದರು.
ಇದನ್ನೂ ಓದಿ: ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ
ಆದರೆ ನೆಟ್ಟಿಗರು ಪ್ರಧಾನಿಯನ್ನು ಟೀಕಿಸಿದ್ದು, ಇದನ್ನು ಮೊಸಲೆ ಕಣ್ಣೀರು ಎಂದಿದ್ದಾರೆ. ದೇಶದಲ್ಲಿ ಕೊರೊನಾ ಹೆಚ್ಚಿರುವಾಗ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರಕ್ಕೆ ತೆರಳಿ, ‘ದೀದಿ ಓ ದೀದಿ’ ಎಂದವರು, ಕೊರೊನಾ ಹೆಚ್ಚಿದ್ದರೂ ಸಮಾವೇಶದಲ್ಲಿ ನೆರೆದ ಲಕ್ಷಾಂತರ ಜನರನ್ನು ನೋಡಿ ಖುಷಿ ಪಟ್ಟವರು ಇದೀಗ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#CrocodileTears
Real Crocodile with fake tears
??? pic.twitter.com/i1Jhp5e1T7— Shailesh_Patel (@shailesh_BBK) May 21, 2021
ಭಾರತದ ಚುನಾವಣಾ ಸಮೀಕ್ಷಾ ಸಂಸ್ಥೆ ಸಿವೊಟರ್ ಮೋದಿಯ ಜನಪ್ರಿಯತೆ ಒಂದು ವರ್ಷದಿಂದ ಸುಮಾರು 65% ರಿಂದ 37% ಕ್ಕೆ ಇಳಿದಿದೆ ಎಂದು ಕಂಡುಹಿಡಿದಿದೆ. ಈ ಮೊಸಳೆ ಕಣ್ಣೀರಿನಿಂದ ಅದನ್ನು ಹೆಚ್ಚಿಸಲು ಮೋದಿ ಬಯಸುತ್ತಿದ್ದಾರೆ ಎಂದು ಟ್ವಿಟರ್ ಬಳಕೆದಾದರಾದ @sk_traza98 ಅವರು ಹೇಳಿದ್ದಾರೆ.
Indian polling agency CVOTER found the number of respondents "very much satisfied" with Modi's performance had dropped to 37% from around 65% a year ago.
Modi Wants to raise the ratings again by #CrocodileTears ? pic.twitter.com/NJ5aqjA1v9
— ?????? توصيف रज़ा (@sk_traza98) May 21, 2021
ರಾಷ್ಟ್ರೀಯ ಟಿವಿಯಲ್ಲಿ ಭಾವುಕರಾವುದು 20 ದಿನಗಳ ಹಿಂದೆಯೆ ತಪ್ಪಿ ಹೋಗಿದೆಯೆ? ಎಂದು ನೀರಜ್ ಭಾಟಿಯ ಅವರು ಟ್ವೀಟ್ ಮಾಡಿದ್ದು, ದಿ ಟೆಲೆಗ್ರಾಫ್ ಪತ್ರಿಕೆಯ ಪೇಪರ್ ಕಟ್ಟಿಂಗ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮೋದಿ ತನಗೆ ನೋವಾಗಿದೆ ಎಂದು ಹೇಳಿಕೊಂಡಿರುವ ಹೇಳಿಕೆಗೆ, ಟೆಲಿಗ್ರಾಫ್ ಪತ್ರಿಕೆಯು, ಇದನ್ನು ನೋವು ಎನ್ನುವುದಾದರೆ, ಸೋಂಕಿನಿಂದಾಗಿ ತಮ್ಮವರ ಕಳೆದುಕೊಂಡು ಅಳುತ್ತಿರುವ ಚಿತ್ರವನ್ನು ಹಾಕಿ ಈ ನೋವಿಗೆ ಏನನ್ನನ್ನುತ್ತೀರಿ ಎಂದು ಪ್ರಶ್ನಿಸಿದೆ.
Missed being emotional on national TV 20 days back ?#CrocodileTears pic.twitter.com/WW2GLfDfPm
— Niraj Bhatia (@bhatia_niraj23) May 21, 2021
ಇದನ್ನೂ ಓದಿ: ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ಮತ್ತು ಕೆಲವು ಮುಖಂಡರ ನಡೆ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತಿದೆ
ಕೊಳದಲ್ಲಿ ಚೆಂಡನ್ನು ತೆಗೆದುಕೊಳ್ಳಲು ಹೋದಾಗ ಆ ಮೊಸಳೆಯಿಂದ ಮಗು ನರೇಂದ್ರ ಅಳುವುದನ್ನು ಕಲಿತನು. ಮೊಸಳೆ ಕಣ್ಣೀರು, ನಾಟಕ ಎಂದು ಮೊಹಮ್ಮದ್ ಅಝರ್ ಅವರು ಟ್ವೀಟ್ ಮಾಡಿದ್ದಾರೆ. ನದಿಯಲ್ಲಿ ಶವ ತೇಲುತ್ತಿರುವಾಗ ಮೊಸಳೆಯೊಂದು ಅಳುತ್ತಿರುವುದನ್ನು ಫೋಟೋಗ್ರಾಫರುಗಳು ಕ್ಲಿಕ್ ಮಾಡುತ್ತಿರುವಂತೆ ಇರುವ ವ್ಯಂಗ್ಯ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ.
What a great cry was learned by this child Narendra from that crocodile, when he went to take the ball in the pool.
#CrocodileTears #nautanki pic.twitter.com/hyQMio7yQH— Mohammed Azhar (@Mohammeazharman) May 21, 2021
‘ಮುಗ್ಧ ಜನರ ರಕ್ತವನ್ನು ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ ಎಂದು ಜಾವೀದ್ ಟ್ವೀಟ್ ಮಾಡಿದ್ದಾರೆ.
Tears never wipe out the blood of innocent people.
#CrocodileTears #Nautanki #Varanasi pic.twitter.com/2hZoA95ECW— Aj javed (@AjJaved_) May 21, 2021
ಜನರು ಸಾಯುತ್ತಿರುವಾಗ “ದೀದಿ ಒ ದೀದಿ” ಎಂದು ಜಪಿಸುವುದರಲ್ಲಿ ನಿರತರಾಗಿದ್ದ ಅದೇ ವ್ಯಕ್ತಿ ಈಗ ನಮ್ಮ ಸಹಾನುಭೂತಿಯನ್ನು ಪಡೆಯುತ್ತಿದ್ದಾನೆ? ಪಶ್ಚಾತ್ತಾಪ ಪಡುತ್ತಿರವುದು ತುಂಬಾ ತಡವಾಗಿದೆ ಎಂದು ಆನಂದ್ ಟ್ವೀಟ್ ಮಾಡಿದ್ದಾರೆ.
The same man who was once busy chanting “didi o didi” when people were dying, is now gaining our sympathy?
It’s too late to repent #CrocodileTears
pic.twitter.com/XJpa0YI330— Kaavas Anand (@KaavasAnand) May 21, 2021
ಕೆಲವರು, ಮೋದಿಗೆ ನೌಟಂಕಿ ಮತ್ತು ನಾಟಕ ಮಾಡಿದ್ದಕ್ಕೆ ಆಸ್ಕರ್ ಕೊಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
For Today's Nautanki & drama, he deserves an Oscar #CrocodileTears pic.twitter.com/FOdnGiFcK3
— Sheetal Kesharwani (@INCSheetal) May 21, 2021
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ



ಮೋದಿ 19 ವರ್ಷದವರಾಗಿದ್ದಾಗ ತಂದೆಯ ಮನೆ ಬಿಟ್ಟು ಓಡಿ ಗುಜರಾತಿ ನಾಟಕ ಕಂಪನಿ ಸೇರಿ ತಬಲಾ ವಾದಕ ಮತ್ತು ಜೂನಿಯರ್ ನಟರಾಗಿ 15 ವರ್ಷ ಕೆಲಸ ಮಾಡಿದ್ದಾರೆ. ಆ ನಾಟಕ ಕಂಪನಿಯ ದೀರ್ಘ ನಟನೆಯ ಅನುಭವ ಈಗ ಪ್ರಧಾನಿಯಾದ ಮೇಲೆ ಮೋದಿಗೆ ತುಂಬಾ ಉಪಯೋಗಕ್ಕೆ ಬರುತ್ತಿದೆ.