‘ಮುಗ್ಧ ಜನರ ರಕ್ತವು ಮೊಸಳೆ ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ - #CrocodileTears ಟ್ರೆಂಡ್‌! | NaanuGauri

ಪ್ರಧಾನಿ ಮೋದಿ ಶುಕ್ರವಾರದಂದು ತಾವು ಲೋಕಸಭೆಯಲ್ಲಿ ಪ್ರತಿನಿಧಿಸುವ ವಾರಣಾಸಿಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೊ ಕಾನ್ಪರೆನ್ಸ್‌ ಮೂಲಕ ಮಾತನಾಡಿದ್ದಾರೆ. ಈ ವೇಳೆ ಸಾಂಕ್ರಮಿಕದಿಂದ ಮೃತಪಟ್ಟವರನ್ನು ನೆನೆದು ಭಾವುಕರಾಗಿದ್ದು, ನೆಟ್ಟಿಗರು ಇದನ್ನು ಮೊಸಲೆ ಕಣ್ಣೀರು ಎಂದು ಬಣ್ಣಿಸಿದ್ದು ಟ್ವಿಟರ್‌ನಲ್ಲಿ #CrocodileTears ಹ್ಯಾಶ್‌‌ಟ್ಯಾಗ್‌ ಟ್ರೆಂಡ್ ಆಗಿದೆ.

ಇಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ, ‘ಕೊರೊನಾ ನಮ್ಮಿಂದ ಹಲವು ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ಕೊರೊನಾದಿಂದ ನಿಧನರಾದವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನೂ ಸೂಚಿಸುತ್ತೇನೆ’ ಎಂದು ಹೇಳಿದ್ದಾರೆ. ಈ ಮಾತಿನ ವೇಳೆ ಭಾವುಕರಾದ ಮೋದಿ, ಅಳುತಡೆಯಲು ಪ್ರಯತ್ನಿಸಿದಂತೆ ಕಂಡು ಬಂದರು.

ಇದನ್ನೂ ಓದಿ: ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ

ಆದರೆ ನೆಟ್ಟಿಗರು ಪ್ರಧಾನಿಯನ್ನು ಟೀಕಿಸಿದ್ದು, ಇದನ್ನು ಮೊಸಲೆ ಕಣ್ಣೀರು ಎಂದಿದ್ದಾರೆ. ದೇಶದಲ್ಲಿ ಕೊರೊನಾ ಹೆಚ್ಚಿರುವಾಗ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರಕ್ಕೆ ತೆರಳಿ, ‘ದೀದಿ ಓ ದೀದಿ’ ಎಂದವರು, ಕೊರೊನಾ ಹೆಚ್ಚಿದ್ದರೂ ಸಮಾವೇಶದಲ್ಲಿ ನೆರೆದ ಲಕ್ಷಾಂತರ ಜನರನ್ನು ನೋಡಿ ಖುಷಿ ಪಟ್ಟವರು ಇದೀಗ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಚುನಾವಣಾ ಸಮೀಕ್ಷಾ ಸಂಸ್ಥೆ ಸಿವೊಟರ್ ಮೋದಿಯ ಜನಪ್ರಿಯತೆ ಒಂದು ವರ್ಷದಿಂದ ಸುಮಾರು 65% ರಿಂದ 37% ಕ್ಕೆ ಇಳಿದಿದೆ ಎಂದು ಕಂಡುಹಿಡಿದಿದೆ. ಈ ಮೊಸಳೆ ಕಣ್ಣೀರಿನಿಂದ ಅದನ್ನು ಹೆಚ್ಚಿಸಲು ಮೋದಿ ಬಯಸುತ್ತಿದ್ದಾರೆ ಎಂದು ಟ್ವಿಟರ್‌ ಬಳಕೆದಾದರಾದ @sk_traza98 ಅವರು ಹೇಳಿದ್ದಾರೆ.

ರಾಷ್ಟ್ರೀಯ ಟಿವಿಯಲ್ಲಿ ಭಾವುಕರಾವುದು 20 ದಿನಗಳ ಹಿಂದೆಯೆ ತಪ್ಪಿ ಹೋಗಿದೆಯೆ? ಎಂದು ನೀರಜ್ ಭಾಟಿಯ ಅವರು ಟ್ವೀಟ್ ಮಾಡಿದ್ದು, ದಿ ಟೆಲೆಗ್ರಾಫ್ ಪತ್ರಿಕೆಯ ಪೇಪರ್‌ ಕಟ್ಟಿಂಗ್‌ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮೋದಿ ತನಗೆ ನೋವಾಗಿದೆ ಎಂದು ಹೇಳಿಕೊಂಡಿರುವ ಹೇಳಿಕೆಗೆ, ಟೆಲಿಗ್ರಾಫ್‌ ಪತ್ರಿಕೆಯು, ಇದನ್ನು ನೋವು ಎನ್ನುವುದಾದರೆ, ಸೋಂಕಿನಿಂದಾಗಿ ತಮ್ಮವರ ಕಳೆದುಕೊಂಡು ಅಳುತ್ತಿರುವ ಚಿತ್ರವನ್ನು ಹಾಕಿ ಈ ನೋವಿಗೆ ಏನನ್ನನ್ನುತ್ತೀರಿ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ಮತ್ತು ಕೆಲವು ಮುಖಂಡರ ನಡೆ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತಿದೆ

ಕೊಳದಲ್ಲಿ ಚೆಂಡನ್ನು ತೆಗೆದುಕೊಳ್ಳಲು ಹೋದಾಗ ಆ ಮೊಸಳೆಯಿಂದ ಮಗು ನರೇಂದ್ರ ಅಳುವುದನ್ನು ಕಲಿತನು. ಮೊಸಳೆ ಕಣ್ಣೀರು, ನಾಟಕ ಎಂದು ಮೊಹಮ್ಮದ್‌ ಅಝರ್‌ ಅವರು ಟ್ವೀಟ್ ಮಾಡಿದ್ದಾರೆ. ನದಿಯಲ್ಲಿ ಶವ ತೇಲುತ್ತಿರುವಾಗ ಮೊಸಳೆಯೊಂದು ಅಳುತ್ತಿರುವುದನ್ನು ಫೋಟೋಗ್ರಾಫರುಗಳು ಕ್ಲಿಕ್ ಮಾಡುತ್ತಿರುವಂತೆ ಇರುವ ವ್ಯಂಗ್ಯ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ.

‘ಮುಗ್ಧ ಜನರ ರಕ್ತವನ್ನು ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ ಎಂದು ಜಾವೀದ್‌ ಟ್ವೀಟ್ ಮಾಡಿದ್ದಾರೆ.

ಜನರು ಸಾಯುತ್ತಿರುವಾಗ “ದೀದಿ ಒ ದೀದಿ” ಎಂದು ಜಪಿಸುವುದರಲ್ಲಿ ನಿರತರಾಗಿದ್ದ ಅದೇ ವ್ಯಕ್ತಿ ಈಗ ನಮ್ಮ ಸಹಾನುಭೂತಿಯನ್ನು ಪಡೆಯುತ್ತಿದ್ದಾನೆ? ಪಶ್ಚಾತ್ತಾಪ ಪಡುತ್ತಿರವುದು ತುಂಬಾ ತಡವಾಗಿದೆ ಎಂದು ಆನಂದ್ ಟ್ವೀಟ್ ಮಾಡಿದ್ದಾರೆ.

ಕೆಲವರು, ಮೋದಿಗೆ ನೌಟಂಕಿ ಮತ್ತು ನಾಟಕ ಮಾಡಿದ್ದಕ್ಕೆ ಆಸ್ಕರ್‌ ಕೊಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಮೋದಿ 19 ವರ್ಷದವರಾಗಿದ್ದಾಗ ತಂದೆಯ ಮನೆ ಬಿಟ್ಟು ಓಡಿ ಗುಜರಾತಿ ನಾಟಕ ಕಂಪನಿ ಸೇರಿ ತಬಲಾ ವಾದಕ ಮತ್ತು ಜೂನಿಯರ್ ನಟರಾಗಿ 15 ವರ್ಷ ಕೆಲಸ ಮಾಡಿದ್ದಾರೆ. ಆ ನಾಟಕ ಕಂಪನಿಯ ದೀರ್ಘ ನಟನೆಯ ಅನುಭವ ಈಗ ಪ್ರಧಾನಿಯಾದ ಮೇಲೆ ಮೋದಿಗೆ ತುಂಬಾ ಉಪಯೋಗಕ್ಕೆ ಬರುತ್ತಿದೆ.

LEAVE A REPLY

Please enter your comment!
Please enter your name here