Homeಕರ್ನಾಟಕವೀರಪ್ಪನ್‌‌‌‌‌ ವಿರುದ್ದದ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದು 29 ವರ್ಷ ಬದುಕಿದ್ದ PSI ಹೃದಯಾಘಾತದಿಂದ ನಿಧನ

ವೀರಪ್ಪನ್‌‌‌‌‌ ವಿರುದ್ದದ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದು 29 ವರ್ಷ ಬದುಕಿದ್ದ PSI ಹೃದಯಾಘಾತದಿಂದ ನಿಧನ

ಗುಂಡಿನ ಚಕಮಕಿಯಲ್ಲಿ ಅವರ ತಲೆಗೆ ಹೊಕ್ಕಿದ್ದ ಮೂರು ಗುಂಡುಗಳು 29 ವರ್ಷ ಹಾಗೆ ಇದ್ದವು

- Advertisement -
- Advertisement -

ಕಾಡುಗಳ್ಳ ವೀರಪ್ಪನ್‌‌ ಜೊತೆ ನಡೆದಿದ್ದ ಗುಂಡಿನ ಚಕಮಕಿ ವೇಳೆ ತಲೆಗೆ ಗುಂಡೇಟು ತಿಂದು, ಆ ಗುಂಡುಗಳನ್ನು  ತಲೆಯಲ್ಲೆ ಇಟ್ಟಕೊಂಡು ಬದುಕುತ್ತಿದ್ದ ಸಬ್‌-ಇನ್ಸ್‌ಪೆಕ್ಟರ್‌ ಸಿದ್ದರಾಜ ನಾಯಕ್ ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

1992 ರಲ್ಲಿ ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಸಿದ್ದರಾಜ ನಾಯಕ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಅವರು ಎಸ್ಪಿ‌ ಹರಿಕೃಷ್ಣ ಹಾಗೂ ಎಸ್‌ಐ ಶಕೀಲ್ ಅಹಮದ್ ಅವರ ನೇತೃತ್ವದಲ್ಲಿ ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ಭಾಗಿಯಾಗಿದ್ದರು. ಆಗಸ್ಟ್ 14 ರಂದು ಮೀಣ್ಯಂನಲ್ಲಿ ನಡೆದಿದ್ದ ಈ ಗುಂಡಿನ ಕಾಳಗದಲ್ಲಿ ಸಿದ್ದರಾಜ ಅವರು ಗುಂಡೇಟು ತಿಂದಿದ್ದರು.

ಇದನ್ನೂ ಓದಿ: ಪ್ರಕರಣಗಳ ಸಂಖ್ಯೆ ಇಳಿಕೆಯಾದರೂ ಗದಗ ಸಂಪೂರ್ಣ ಲಾಕ್‌ಡೌನ್‌: ಸಚಿವ ಸಿ.ಸಿ ಪಾಟೀಲ್ ಆದೇಶ

ಈ ಗುಂಡಿನ ಚಕಮಕಿಯಲ್ಲಿ ಅವರ ದೇಹಕ್ಕೆ ಏಳು ಗುಂಡುಗಳು ಹೊಕ್ಕಿದ್ದವು. ನಂತರ, ಶಸ್ತ್ರಚಿಕಿತ್ಸೆ ಮಾಡಿ 04 ಗುಂಡುಗಳನ್ನು ಹೊರ ತೆಗೆಯಲಾಗಿತ್ತು. ಆದರೆ, 03 ಗುಂಡುಗಳು ಅವರ ತಲೆಗೆ ಹೊಕ್ಕಿದ್ದರಿಂದ ಅವುಗಳನ್ನು ತೆಗೆಯಲಾಗಿರಲಿಲ್ಲ. 29 ವರ್ಷಗಳ ಕಾಲ ತಲೆಯಲ್ಲಿ ಗುಂಡುಗಳನ್ನು ಇಟ್ಟುಕೊಂಡೇ ಬದುಕಿದ್ದ ಸಿದ್ದರಾಜ ಅವರು ಮಂಗಳವಾರ ಮೃತಪಟ್ಟಿದ್ದಾರೆ.

ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೆ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ನಿವೃತ್ತಿಗೆ 5 ದಿನಗಳು ಬಾಕಿಯಿರುವಾಗ ಹೃದಯಾಘಾತದಿಂದಾಗಿ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸಿಬಿಐ ಮುಖ್ಯಸ್ಥರಾಗಿ ಆಯ್ಕೆಯಾದ ಸುಬೋಧ್ ಕುಮಾರ್ ಜೈಸ್ವಾಲ್; ಕೇಂದ್ರಕ್ಕೆ ಹಿನ್ನಡೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...