ಸಾಂಕ್ರಾಮಿಕ ಪೂರ್ವದ ದಿನಗಳಿಗೆ ಹೋಲಿಸಿದರೆ ಈಗ ಹೆಚ್ಚಿನ ಜನರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಮಾನಸಿಕ ಆರೋಗ್ಯ ತಜ್ಞರು ಮತ್ತು ಮನೋವೈದ್ಯರು ಹೇಳುತ್ತಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಅಲ್ಲದೆ ಖಿನ್ನತೆ-ಶಮನಕಾರಿ ಔಷಧಿಗಳ ಮಾರಾಟವು ಕಳೆದ ಒಂದು ವರ್ಷದಲ್ಲಿ ಸುಮಾರು 23 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಫಾರ್ಮಾ ಉದ್ಯಮವು ಅಂಕಿಅಂಶಗಳನ್ನು ನೀಡಿದೆ.
ಭಾರತದಲ್ಲಿ 9 ಲಕ್ಷಕ್ಕೂ ಹೆಚ್ಚು ಔಷಧಿಕಾರರನ್ನು ಪ್ರತಿನಿಧಿಸುವ ಆಲ್ ಇಂಡಿಯನ್ ಒರಿಜಿನ್ ಕೆಮಿಸ್ಟ್ & ಡಿಸ್ಟ್ರಿಬ್ಯೂಟರ್ಸ್ (ಎಐಒಸಿಡಿ-ಎಡಬ್ಲ್ಯೂಎಸಿಎಸ್) ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಅಗ್ರ ಐದು ಖಿನ್ನತೆ-ನಿರೋಧಕ ಔಷಧಿಗಳ ಮಾರಾಟವು 2020ರಲ್ಲಿ 177 ಕೋಟಿ ರೂ. ಇದ್ದುದು ಏಪ್ರಿಲ್ 2021 ರಲ್ಲಿ 218 ಕೋಟಿ ರೂ.ಗೆ ಏರಿತು. ಇದು ಶೇಕಡಾ 23 ರಷ್ಟು ಏರಿಕೆಯಾಗಿದೆ. 2019 ರ ಏಪ್ರಿಲ್‌ನಲ್ಲಿ ಈ ಔಷಧಿಗಳ ಮಾರಾಟವು 186 ಕೋಟಿ ರೂ. ಮೌಲ್ಯದಾಗಿತ್ತು. ಇದರರ್ಥ ಏಪ್ರಿಲ್ 2019 ರಿಂದ 2020 ರ ಏಪ್ರಿಲ್ ವರೆಗೆ ಮಾರಾಟದಲ್ಲಿ ಶೇಕಡಾ ಐದು ರಷ್ಟು ಕುಸಿತ ಕಂಡುಬಂದಿತ್ತು.
AIOCD-AWACS ನಿಂದ ಉಲ್ಲೇಖಿಸಲ್ಪಡುವ ಔಷಧಿಗಳಲ್ಲಿ ಅಬಾಟ್‌ನ ಪ್ರೋಥಿಯಾಡೆನ್, ಫಿಜರ್‌ನ ಅಟಿವಾನ್, ಡಾ. ರೆಡ್ಡಿಸ್ ಲ್ಯಾಬ್‌ನ ಟ್ರಿಪ್ಟೋಮರ್ ಮತ್ತು ಸನ್ ಫಾರ್ಮಾದ ನೆಕ್ಸಿಟೊ ಮತ್ತು ನೆಕ್ಸಿಟೊ ಪ್ಲಸ್ ಸೇರಿವೆ.
ಸಾಂಕ್ರಾಮಿಕ ಪೂರ್ವದ ದಿನಗಳಿಗೆ ಹೋಲಿಸಿದರೆ ಹೆಚ್ಚಿನ ಜನರು ಈಗ ತಮ್ಮ ಜೊತೆ ಸಮಾಲೋಚಿಸುತ್ತಿದ್ದಾರೆ ಮತ್ತು ನಾವು ರೋಗಿಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸುತ್ತಿದ್ದೇವೆ ಎಂದು ಮಾನಸಿಕ ಆರೋಗ್ಯ ತಜ್ಞರು ಮತ್ತು ಮನೋವೈದ್ಯರು ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಪಡೆಯುವ ಜನರ ಮೊದಲ ವರ್ಗವೆಂದರೆ ಕೋವಿಡ್‌ನಿಂದ ಚೇತರಿಸಿಕೊಂಡವರು ಮತ್ತು ಖಿನ್ನತೆ ಮತ್ತು ಆತಂಕದಂತಹ ಚೇತರಿಕೆಯ ನಂತರದ ತೊಂದರೆಗಳನ್ನು ತೋರಿಸುತ್ತಿರುವ ಗುಂಪು.
ಎರಡನೆಯ ಗುಂಪಿನಲ್ಲಿ ಸಾಮಾನ್ಯ ಸಾಂಕ್ರಾಮಿಕ ಸನ್ನಿವೇಶದಿಂದ ಪ್ರಭಾವಿತರಾದವರು ಅಥವಾ ಪ್ರೀತಿಪಾತ್ರರ ಸಾವು, ಉದ್ಯೋಗ ನಷ್ಟ ಅಥವಾ ಸಂಬಂಧಗಳಲ್ಲಿನ ತೊಂದರೆಗಳನ್ನು ಎದುರಿಸುತ್ತಿರುವ ಜನ.
ಸಾಂಕ್ರಾಮಿಕ ಸಮಯದಲ್ಲಿ ಮದ್ಯದ ಲಭ್ಯತೆ ಅಥವಾ ಕಡಿಮೆ ಲಭ್ಯತೆಯಿಂದಾಗಿ ಖಿನ್ನತೆಯ ಲಕ್ಷಣಗಳನ್ನು ಪ್ರದರ್ಶಿಸುವವರು ಮಾನಸಿಕ ಆರೋಗ್ಯ ರೋಗಿಗಳ ಮೂರನೇ ವರ್ಗವಾಗಿದೆ,
ದೇಶದ ಉನ್ನತ ಮಾನಸಿಕ ಆರೋಗ್ಯ ಸಂಸ್ಥೆಯಾದ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ-ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವೈದ್ಯರು ಮೇ ಆರಂಭದ ವೇಳೆಗೆ ಸಹಾಯ ಪಡೆಯುವ ಜನರ ಸಂಖ್ಯೆಯಲ್ಲಿ ಇದೇ ರೀತಿಯ ಏರಿಕೆ ಕಂಡುಬಂದಿದೆ ಎಂದು ಒಪ್ಪಿಕೊಂಡರು.
ಮೇ ಮೊದಲ ವಾರದಲ್ಲಿ ಸಂಸ್ಥೆ ನಡೆಸುತ್ತಿರುವ ಸಹಾಯವಾಣಿಯಲ್ಲಿ ಸ್ವೀಕರಿಸಿದ ದೈನಂದಿನ ಯಾತನೆ ಕರೆಗಳಲ್ಲಿ 40 ಪ್ರತಿಶತದಷ್ಟು ಹೆಚ್ಚಳವನ್ನು ತೋರಿಸಿವೆ.
‘‘fear-o-demic’’
ಮಾನಸಿಕ ಆರೋಗ್ಯ ತಜ್ಞರು ದೇಶದ ಎರಡನೇ ಕೋವಿಡ್ ಅಲೆಯು ‘‘fear-o-demic’’
ಗೆ ಕಾರಣವಾಗಿದೆ ಎಂದು ನಂಬುತ್ತಾರೆ. ಅಂದರೆ, ಜನರು ಕೋವಿಡ್‌ಗೆ ಸಾಯುವ ಅಥವಾ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಅಥವಾ ಉದ್ಯೋಗ ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ.
ಈ ಭಯವು ಜನರಲ್ಲಿ ಆತಂಕ ಮತ್ತು ಖಿನ್ನತೆಗೆ ಮತ್ತಷ್ಟು ಕಾರಣವಾಗಿದೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಇತರ ಪ್ರಮುಖ ಅಂಶಗಳು ಹಣಕಾಸಿನ ಬಿಕ್ಕಟ್ಟು, ಸಂಬಂಧದ ಸಮಸ್ಯೆಗಳು ಮತ್ತು ಲಾಕ್‌ಡೌನ್ ಕಾರಣಕ್ಕೆ ಹಲವಾರು ತಿಂಗಳುಗಳ ಕಾಲ ಮನೆಯೊಳಗೆ ಇರುವಂತೆ ಆಗುವುದು….
ಹೀಗೆ ಖಿನ್ನತೆಯಿಂದ ನರಳುವವರು ಖಿನ್ನತೆ-ನಿರೋಧಕ ಶಮನಕಾರಿ ಔಷಧಿಗಳ ಮೊರೆ ಹೋಗುತ್ತಿದ್ದಾರೆ.
ಇದನ್ನೂ ಓದಿ: ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟ ತಾಳಲಾರದೇ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ


