ಯೂಟ್ಯೂಬ್ ಶೋ ಕಾರ್ಯಕ್ರವೊಂದಲ್ಲಿ ಪ್ರಧಾನಿ ಮೋದಿ ವಿರುದ್ದ ಕೆಲವು ಆರೋಪಗಳನ್ನು ಮಾಡಿದ್ದ ಕಾರಣಕ್ಕಾಗಿ ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹ ಮತ್ತು ಇತರ ಅಪರಾಧ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದೆ.
ಪತ್ರಕರ್ತ ವಿನೋದ್ ದುವಾ ಅವರು 2020 ಮೇ ತಿಂಗಳಿನಲ್ಲಿ ತಮ್ಮ ಯೂಟ್ಯೂನ್ ಚಾನೆಲ್‌ನಲ್ಲಿ ಪ್ರಧಾನಿ ಮೋದಿ ವಿರುದ್ದ ಕೆಲವು ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸ್ಥಳೀಯ ಮುಖಂಡ ಶ್ಯಾಮ್ ಅವರು ಕಳೆದ ವರ್ಷ ಮೇ 6 ರಂದು ಕುಮಾರ್ಸೇನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ ಅಲ್ಲಗೆಳೆದ ರಿಜಿಸ್ಟ್ರಾರ್
ಅವರ ದೂರಿನ ಆಧಾರದ ಮೇಲೆ ವಿನೋದ್ ದುವಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಕಳೆದ ವರ್ಷ ಜುಲೈನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ದುವಾ ವಿರುದ್ದ ಬಲವಂತವಾಗಿ ಯಾವುದೇ ಕ್ರಮಗಳನ್ನು ಜರುಗಿಸದಂತೆ ರಕ್ಷಣೆ ನೀಡಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದರುವ ಕೋರ್ಟ್, ದುವಾ ವಿರುದ್ದ ದಾಖಲಾಗಿದ್ದ ದೇಶದ್ರೋಹ ಮತ್ತು ಇತರ ಪ್ರಕರಣಗಳನ್ನು ರದ್ದು ಪಡಿಸಿದೆ.
ಅಲ್ಲದೆ, ಪತ್ರಕರ್ತ ಸಮಿತಿಯಿಂದ ತೆರವುಗೊಳಿಸದ ಹೊರತು 10 ವರ್ಷಗಳ ಅನುಭವ ಹೊಂದಿರುವ ಯಾವುದೇ ಪತ್ರಕರ್ತ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬಾರದು ಎಂದು ದುವಾ ಸಲ್ಲಿಸಿದ್ದ ಮನವಿಯನ್ನೂ ಕೂಡ ನ್ಯಾಯಾಲಯ ರದ್ದುಗೊಳಿಸಿದೆ.
ಇದನ್ನೂ ಓದಿ: ದೇವೇಗೌಡರು ಪ್ರಧಾನಿಯಾಗಿ 25 ವರ್ಷದ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯ ಸ್ಥಿತಿಗತಿ


