ಬೆಂಗಳೂರು ವಿಮಾನ ನಿಲ್ಧಾಣದ ಸಮೀಪ ಜೂನ್ 6 ರ ಭಾನುವಾರ ದೊಡ್ಡ ಸ್ಫೋಟವೊಂದು ಸಂಭವಿಸಿದೆ. ಈ ಸ್ಫೋಟದಲ್ಲಿ 6 ಜನ ಕೆಲಸಗಾರರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ವಿಮಾನ ನಿಲ್ಧಾಣ ಟರ್ಮಿನಲ್ ಪ್ರವೇಶಿಸುವ ರಸ್ತೆಯ ಸಿಗ್ನಲ್ ಸಮೀಪದ ನೆಲದಡಿಯ ಸುರಂಗದಲ್ಲಿ ಸಂಗ್ರಹಿಸಿಲಾಗಿದ್ದ ಅಪಾರ ಕೆಮಿಕಲ್‌ಗಳು ಸ್ಟೋಟಗೊಂಡು ಈ ಘಟನೆ ಸಂಭವಿಸಿದೆ. ಟರ್ಮಿನಲ್ ರಸ್ತೆಯ ಸಿಗ್ನಲ್‌ನ ಝೀಬ್ರಾ ಕ್ರಾಸ್‌ಗಳಿಗೆ ಬಣ್ಣ ಬಳಿಯುತ್ತಿದ್ದ ಕಾರ್ಮಿಕರು ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲಸಗಾರರ ಕಿರುಚಾಟವನ್ನು ಕೇಳಿ ವಿಮಾನ ನಿಲ್ಧಾಣದ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಫೋಟದ ಕಾರಣದಿಂದ ದೊಡ್ಡ ಬೆಂಕಿ ಹೊತ್ತಿಕೊಂಡ ಕಾರಣ ಅಗ್ನಿಶಾಮಕದಳ ಮತ್ತು ವಿಮಾನ ನಿಲ್ಧಾಣ ಸಿಬ್ಬಂದಿಗಳು ಸ್ಥಳಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ : ಹೊಸ ಪ್ರವಾಸೋದ್ಯಮ ನೀತಿ ವಿರೋಧಿಸಿ ಲಕ್ಷದ್ವೀಪ ನಿವಾಸಿಗಳಿಂದ ಉಪವಾಸ ಸತ್ಯಾಗ್ರಹ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದ ಎರಡನೇ ಟರ್ಮಿನಲ್ ನ ನಿರ್ಮಾಣ ಕಳೆದ 4 ವರ್ಷಗಳಿಂದ ನಡೆಯುತ್ತಿದೆ. ಆದರೆ ಇದೇ ಮೊದಲ ಭಾರಿಗೆ ಅವಘಡವೊಂದು ಸಂಭವಿಸಿದೆ. ಟರ್ಮಿನಲ್ ನ ರಸ್ತೆಗಳಿಗದೆ ಬಣ್ಣ ಹೊಡೆಯುವ ಗುತ್ತಿಗೆಯನ್ನು URC ಕನ್ಸ್‌ಟ್ರಕ್ಷನ್ ಕಂಪನಿಗೆ ನೀಡಲಾಗಿತ್ತು. ಕಂಪನಿಯ ನಿರ್ಲಕ್ಷ್ಯದಿಂದ ಸ್ಫೋಟ ಸಂಭವಿಸಿದೆ. ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 65 ಶಾಸಕರು ಯಡಿಯೂರಪ್ಪನವರ ಪರವಿದ್ದಾರೆ: ಎಂ.ಪಿ ರೇಣುಕಾಚಾರ್ಯ


