Homeಮುಖಪುಟಹೊಸ ಪ್ರವಾಸೋದ್ಯಮ ನೀತಿ ವಿರೋಧಿಸಿ ಲಕ್ಷದ್ವೀಪ ನಿವಾಸಿಗಳಿಂದ ಉಪವಾಸ ಸತ್ಯಾಗ್ರಹ

ಹೊಸ ಪ್ರವಾಸೋದ್ಯಮ ನೀತಿ ವಿರೋಧಿಸಿ ಲಕ್ಷದ್ವೀಪ ನಿವಾಸಿಗಳಿಂದ ಉಪವಾಸ ಸತ್ಯಾಗ್ರಹ

- Advertisement -
- Advertisement -

ಲಕ್ಷದ್ವೀಪ ನಿವಾಸಿಗಳು ಸೋಮವಾರ ಅಂದರೆ ಇಂದು ಜೂನ್‌ 7, 2021 ರಂದು 12 ಗಂಟೆಗಳ ನಿರಂತರ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಲಕ್ಷದ್ವೀಪದಲ್ಲಿ ಸರ್ಕಾರ ಜಾರಿಗೆ ತರಲು ಹೊರಟಿರುವ 3 ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ವಿರೋಧಿಸಿ ಲಕ್ಷದ್ವೀಪ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಜನ ಜೀವನವನ್ನು ನಾಶಮಾಡುವ ಭೀತಿಯನ್ನು ಹೊಸ ಯೋಜನೆಗಳು ಉಂಟುಮಾಡಿವೆ. ಸುಮಾರು 70,000 ಜನಸಂಖ್ಯೆಯನ್ನು ಹೊಂದಿರುವ ಲಕ್ಷದ್ವೀಪ ಭಿನ್ನವಾದ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಹೊಂದಿವೆ. ಹಾಗೇ ಲಕ್ಷದ್ವೀಪದ ಕಾಡುಗಳಲ್ಲಿ ಅನೇಕ ಬುಡಕಟ್ಟುಗಳು ನೂರಾರು ವರ್ಷಗಳಿಂದ ನೆಲೆ ಕಂಡುಕೊಂಡಿವೆ.

ಲಕ್ಷದ್ವೀಪ ಉಳಿಸಿ ಸಂಘಟನೆ ಈ ಒಂದು ದಿನ ದ ಉಪವಾಸ ಸತ್ಯಾಗ್ರಹಕ್ಕೆ ಕರೆಕೊಟ್ಟಿದೆ. ಜೂನ್‌ 7ರ ಸೋಮವಾರ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮುಚ್ಚಿರಲಿವೆ. ನಗರ, ಹಳ್ಳಿ ಎಲ್ಲಾಕಡೆಯಲ್ಲೂ ಜನ ಲಕ್ಷದ್ವೀಪ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಉಪವಾಸವನ್ನು ಆಚರಿಸಲಿದ್ದಾರೆ. ಅಗತ್ಯ ಸೇವೆಗಳು ಮತ್ತು ಅಗತ್ಯ ಸೇವೆಗಳು ಮಾತ್ರ ಜನರಿಗೆ ತೆರೆದಿರಲಿವೆ.

ಇನ್ನೊಂದು ಕಡೆ ವಿವಾದಾತ್ಮಕ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಲಕ್ಷದ್ವೀಪದ ಲೆಫ್ಟಿನೆಂಟ್‌ ಗೌವರ್ನರ್‌ ಪ್ರಫುಲ್‌ ಖೋಡಾ ಪಟೇಲ್‌ ಅವರು ಕೊರೋನಾ ಲಾಕ್‌ಡೌನ್‌ ಜಾರಿಯಿರುವುದರಿಂದ ಬಹಿರಂಗವಾಗಿ ಜನ ಸೇರುವುದನ್ನು ಲಕ್ಷದ್ವೀಪದಲ್ಲಿ ನಿಷೇಧಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಯಾರಾದರೂ ಬೀದಿಗಿಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಲಕ್ಷದ್ವೀಪದಲ್ಲಿ ಉಪವಾಸ ಸತ್ಯಾಗ್ರಹವನ್ನು ಆಚರಿಸಲಾಗುತ್ತಿದೆ. ನಾವು ಮೊದಲಿನಿಂದಲೂ ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಡಬೇಕು ಮತ್ತು ಸ್ಥಳೀಯರ ಸಮಸ್ಯೆಗಳನ್ನು ಆಲಿಸಬೇಕೆಂದು ಲೆಫ್ಟಿನೆಂಟ್‌ ಗೌರ್ನರ್‌ ಅವರನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಎಲ್‌ಜೆ ಪ್ರಫುಲ್‌ ಪಟೇಲ್ ತಮ್ಮ ಏಕಪಕ್ಷೀಯ ನಿರ್ಧಾರಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಲಕ್ಷದ್ವೀಪದ ಸ್ಥಳೀಯ ಜನಜೀವನಕ್ಕೆ ತೊಂದರೆಯಾಗಲಿದೆ ಎಂದು ಲಕ್ಷದ್ವೀಪ ಉಳಿಸಿ ಹೋರಾಟ ಸಂಘಟನೆಯ ಮುಖ್ಯಸ್ಥ ಯುಸಿಕೆ ಥಂಗಲ್‌ ಹೇಳುತ್ತಾರೆ.

37 ದ್ವೀಪಗಳನ್ನು ಒಳಗೊಂಡ ಲಕ್ಷದ್ವೀಪ ಒಂದು ದ್ವೀಪ ಸಮೂಹವಾಗಿದ್ದು ಸುಮಾರು 97% ದಟ್ಟವಾದ ಕಾಡಿನಿಂದ ಆವರಿಸಿದೆ. ಹಾಗೇ ಲಕ್ಷದ್ವೀಪದ 95% ಜನಸಂಖ್ಯೆ ಭಾರತ ಸಂವಿಧಾನದ ಅಡಿಯಲ್ಲಿ ಸಂರಕ್ಷಿಸಲಾದ ಬುಡಕಟ್ಟುಗಳಿಗೆ ಸೇರಿವೆ. ಹಾಗೇ ಲಕ್ಷದ್ವೀಪದ 37 ದ್ವೀಪಗಳಲ್ಲಿ ಕೇವಲ 11 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಲಕ್ಷದ್ವೀಪ ಡೆವಲಪ್‌ಮೆಂಟ್‌ ಅಥಾರಿಟಿ ರೆಗ್ಯುಲೇಶನ್‌ ದ್ವೀಪವಾಸಿಗಳ ಜನ ಜೀವನವನ್ನು ಮತ್ತು ಸಾಂಪ್ರದಾಯಿಕ ಕಸುಬುಗಳನ್ನು ನಾಶ ಮಾಡಲಿದೆ ಎಂದು ಜನರು ಕಳವಳಗೊಂಡಿದ್ದಾರೆ. ಹೊಸ ಲಕ್ಷದ್ವೀಪ ಡೆವಲಪ್‌ಮೆಂಟ್‌ ಅಥಾರಿಟಿಯು ದ್ವೀಪವನ್ನು ದೇಶದ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ಉದ್ಧೇಶವನ್ನು ಹೊಂದಿದೆ. ಬಹುತೇಕ ಕಾಡುಗಳನ್ನು ಕಡಿದು ಮಾಲ್ಡೀವ್ಸ್‌ ಮಾದರಿಯ ಕಡಲು ದಂಡೆಗಳನ್ನು ನಿರ್ಮಿಸುವ ಉದ್ಧೇಶವನ್ನು ಹೊಂದಿದೆ ಎಂದು ಜನರು ಹೇಳುತ್ತಾರೆ.

ಉದ್ಧೇಶಿತ ಲಕ್ಷದ್ವೀಪ ಡೆವಲಪ್‌ಮೆಂಟ್‌ ಅಥಾರಿಟಿ ರೆಗ್ಯುಲೇಶನ್‌ (2021) ಕಾನೂನು ಈಗ ಕೇಂದ್ರ ಗೃಹ ಸಚಿವಾಲಯದ ಅಂಗಳವನ್ನು ತಲುಪಿದ್ದು ಗೃಹ ಸಚಿವಾಲಯದ ಅನುಮತಿಯೆಂದೇ ಬಾಕಿಯಿದೆ. ಲಕ್ಷದ್ವೀಪ ಎಲ್‌ಜೆ ಪ್ರಫುಲ್‌ ಪಟೇಲ್‌ ಇದು ಪ್ರವಾಸೋದ್ಯಮವನ್ನು ಹೆಚ್ಚಿಸುವುದರಿಂದ ದ್ವೀಪವಾಸಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಕೂಡ ಸಿಗುತ್ತವೆ ಎಂದು ಉದ್ಧೇಶಿತ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಮಲಯಾಳಂ ನಿಷೇಧದ ಆದೇಶ ಹಿಂಪಡೆದ ದೆಹಲಿಯ ಆಸ್ಪತ್ರೆ

ದೇಶದ ಅನೇಕ ನಿವೃತ್ತ ಅಧಿಕಾರಿಗಳು. ಸಂಸದರು ಹಾಗೂ ಚಲನಚಿತ್ರ ಗಣ್ಯರು ಕೂಡ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಉದ್ದೇಶಿತ ಯೋಜನೆಯಿಂದ ಲಕ್ಷದ್ವೀಪದ ಮೂಲ ಸ್ವರೂಪವೇ ಬದಲಾಗಲಿದೆ. ಬುಡಕಟ್ಟು ಮತ್ತು ಅವರ ನೆಲೆ ಅರಣ್ಯ ನಾಶವಾಗುತ್ತದೆ. ಇದು ಲಕ್ಷದ್ವೀಪದ ಜನಜೀವನವನ್ನು ಸಂಪೂರ್ಣ ನಾಶಮಾಡಲಿದೆ. ಹಾಗಾಗಿ ಉದ್ಧೇಶಿತ ಯೋಜನೆಯನ್ನು ಕೈಬಿಡುವಂತೆ ಮನವಿಯನ್ನು ಮಾಡಿದ್ದಾರೆ.

ದ್ವೀಪವಾಸಿಗಳ ಹೋರಾಟ, ಗಣ್ಯರ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದ ಅತ್ಯಂತ ಅಪರೂಪದ ಮತ್ತು ಅಪಾರ ವನ್ಯ ಸಂಪತ್ತಿನ  ತಾಣವಾದ ಲಕ್ಷದ್ವೀಪವನ್ನು ಬಲಿಕೊಡಲು ಮುಂದಾಗಿರುವ ಎಲ್‌ಜೆ ಪ್ರಫುಲ್‌ ಪಟೇಲ್‌, ಕೇಂದ್ರ ಸರ್ಕಾರ ದ್ವೀಪವಾಸಿಗಳ ಹಿತಾಸಕ್ತಿಯನ್ನು ರಕ್ಷಿಸಲು ತಕ್ಷಣವೇ ಮುಂದಾಗಬೇಕಿದೆ. ಇಲ್ಲವಾದರೆ ಲಕ್ಷದ್ವೀಪದ ಜನರ ಆಕ್ರೋಶ ಇನ್ನಷ್ಟು ಭುಗಿಲೇಳುವ ಸಾಧ್ಯತೆ ಕೂಡ ಇದೆ.


ಇದನ್ನೂ ಓದಿ: ಹಸುವಿನೊಂದಿಗೆ ಪ್ರತಿಭಟನೆಗೆ ಮಣಿದ ಹರಿಯಾಣ ಪೊಲೀಸರು: ಇಬ್ಬರು ರೈತರ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...