Homeಮುಖಪುಟ'ಮೋದಿ ಉಪನಾಮ' ಟೀಕೆ ಕೇಸ್‌ನಲ್ಲಿ ರಾಹುಲ್‌ಗೆ 2 ವರ್ಷ ಜೈಲು: ಬಿಜೆಪಿಯ ಪಿತೂರಿ ಎಂದ ಪ್ರತಿಪಕ್ಷಗಳು

‘ಮೋದಿ ಉಪನಾಮ’ ಟೀಕೆ ಕೇಸ್‌ನಲ್ಲಿ ರಾಹುಲ್‌ಗೆ 2 ವರ್ಷ ಜೈಲು: ಬಿಜೆಪಿಯ ಪಿತೂರಿ ಎಂದ ಪ್ರತಿಪಕ್ಷಗಳು

- Advertisement -
- Advertisement -

‘ಮೋದಿ ಉಪನಾಮ’ದ ಟೀಕೆಗಾಗಿ ರಾಹುಲ್ ಗಾಂಧಿ ವಿರುದ್ಧ 2019ರಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಗುರುವಾರ ತೀರ್ಪು ನೀಡಿದ ಗುಜರಾತ್‌ನ ಸೂರತ್ ನ್ಯಾಯಾಲಯವು ರಾಹುಲ್ ತಪ್ಪಿತಸ್ಥ ಎಂದು ಹೇಳಿದೆ. ಈ ಸಂಬಂಧ 2 ವರ್ಷ ಜೈಲು ಅಥವಾ ದಂಡ ಪಾವತಿಯ ಶಿಕ್ಷೆಯನ್ನು ವಿಧಿಸಿದೆ.

ಗುಜರಾತ್ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಆದರೆ ಪ್ರತಿಪಕ್ಷಗಳು ಇದನ್ನು ಪಿತೂರಿ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ತ್ವರಿತವಾಗಿ ಟ್ವೀಟ್ ಮಾಡಿದ ರಾಹುಲ್‌ ಗಾಂಧಿ ಅವರು, ಮಹಾತ್ಮ ಗಾಂಧಿಯವರ ಸಾಲುಗಳನ್ನು ಬರೆದಿದ್ದಾರೆ. ”ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು, ಅದನ್ನು ಪಡೆಯುವ ಸಾಧನ ಅಹಿಂಸೆ” ಎಂದು ರಾಹುಲ್‌ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ತಮ್ಮ ಸಹೋದರ ರಾಹುಲ್ ಗಾಂಧಿ ಭಯಪಡುವುದಿಲ್ಲ ಮತ್ತು “ಸತ್ಯವನ್ನು ಮಾತನಾಡುತ್ತಾರೆ” ಎಂದು ಹೇಳಿದ್ದಾರೆ.

”ಇಡೀ ಆಡಳಿತ ಯಂತ್ರ ಎಲ್ಲಾ ವಿಧಾನಗಳಿಂದ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ, ನನ್ನ ಸಹೋದರ ಎಂದಿಗೂ ಹೆದರುವುದಿಲ್ಲ, ಅವನು ಎಂದಿಗೂ ಹೆದರುವುದಿಲ್ಲ. ಸತ್ಯದಿಂದ ಬದುಕಿದ್ದಾನೆ ಮತ್ತು ಸತ್ಯವನ್ನು ಹೇಳುವುದನ್ನು ಮುಂದುವರಿಸುತ್ತಾನೆ. ದೇಶದ ಜನರ ಧ್ವನಿಯಾಗಿ ಅವನು ಮಾತನಾಡುತ್ತಲೇ ಇರುತ್ತಾನೆ. ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವನೊಂದಿಗಿದೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

“ರಾಹುಲ್ ಗಾಂಧಿಯನ್ನು ಪದೇ ಪದೇ ಕರೆಸುತ್ತಿರುವುದನ್ನು ನೋಡಿದಾಗ ನಮಗೆ ಸುಳಿವು ಸಿಕ್ಕಿದೆ. ಬಿಜೆಪಿ ಇತರರತ್ತ ಬೆರಳು ತೋರಿಸಿದರೆ, ಉಳಿದ ನಾಲ್ಕು ಬೆರಳುಗಳು ತನ್ನತ್ತ ತೋರಿಸುತ್ತವೆ” ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

”ಹೇಡಿ, ಸರ್ವಾಧಿಕಾರಿ ಬಿಜೆಪಿ ಸರಕಾರದ ಕರಾಳ ಕೃತ್ಯಗಳನ್ನು ನಾವು ಬಯಲು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದೆ. ನಿಮಗೆ ಪ್ರತಿಪಕ್ಷಗಳಿಂದ ಧಿಕ್ಕಾರ, ಮೋದಿ ಸರಕಾರ ರಾಜಕೀಯ ದಿವಾಳಿತನಕ್ಕೆ ಬಲಿಯಾಗಿದೆ. ಪೊಲೀಸರನ್ನು ಕಳುಹಿಸಿ, ರಾಜಕೀಯ ಭಾಷಣಗಳ ಮೇಲೆ ಕೇಸುಗಳನ್ನು ಹಾಕುತ್ತಾರೆ. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

”ಮೋದಿ” ಈ ಉಪನಾಮವನ್ನು ಯಾರಾದರೂ ಪುನರುಚ್ಚರಿಸಿದರೂ ಅದು ಮಾನನಷ್ಟ ಸಮಸ್ಯೆಯಾಗುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಹೇಳಿದ್ದಾರೆ.

ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ”ಇದು ಪ್ರತಿಪಕ್ಷಗಳನ್ನು ಮುಗಿಸಲು ”ಪಿತೂರಿ”ಯಾಗಿದೆ ಎಂದು ಆರೋಪಿಸಿದ್ದಾರೆ.

”ಬಿಜೆಪಿಯೇತರ ನಾಯಕರು ಹಾಗೂ ಪಕ್ಷಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಷಡ್ಯಂತ್ರ ನಡೆಯುತ್ತಿದೆ. ನಮಗೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯವಿದೆ, ಆದರೆ ಈ ರೀತಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸಿಲುಕಿಸುವುದು ಸರಿಯಲ್ಲ. ಪ್ರಶ್ನೆ ಕೇಳುವುದು ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ಕೆಲಸ. ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ ಆದರೆ ನಿರ್ಧಾರವನ್ನು ಒಪ್ಪುವುದಿಲ್ಲ”ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇದು 2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಹೊಸ ಸಮೀಕರಣವನ್ನು ಸೂಚಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...