ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುಚ್ಛಕ್ತಿ ಪೂರೈಕೆ ದರಗಳ ಪರಿಷ್ಕರಣೆಗೆ ಅನುಮೋದನೆ ನೀಡಿದ್ದು, ಪ್ರತಿ ಯೂನಿಟ್‌ಗೆ 30 ಪೈಸೆಗಳ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಕೋವಿಡ್ ಲಾಕ್‌ಡೌನ್‌ನಿಂದ ಜನ ಸಂಕಷ್ಟದಲ್ಲಿರುವ ಸಮಯದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕವು ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಹೊಂದಿದೆ. ಆದರೂ ಸಹ ಸೆಂಟ್ರಲ್ ಗ್ರಿಡ್, ಅದಾನಿ ಮತ್ತು ಇತರರಿಂದ ಹೆಚ್ಚಿನ ವೆಚ್ಚದಲ್ಲಿ ವಿದ್ಯುತ್ ಖರೀದಿಸುವುದನ್ನು ಬಿಜೆಪಿ ಸರ್ಕಾರ ಮುಂದುವರೆಸಿದೆ. ಆದರೆ ಹೆಚ್ಚುವರಿ ಬೆಲೆಯನ್ನು ರಾಜ್ಯದ ಜನರು ಭರಿಸಬೇಕಾಗಿದೆ. ಮೋದಿ, ಅದಾನಿಯೆದರು ತೆಲೆಯೆತ್ತಲು ಬಿಎಸ್‌ವೈಗೆ ಧೈರ್ಯವಿಲ್ಲದಿರುವುದು ದುರದೃಷ್ಟಕರ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Ktaka has surplus power & yet @BJP4Karnataka continues to purchase power from Central grid, Adani & others at higher cost.
Price for which our people have to pay.
It's unfortunate that Ktaka CM @BSYBJP cannot keep his head high in front of @narendramodi &Adani#BJPShockToKtaka pic.twitter.com/YisG6UnnS7
— Siddaramaiah (@siddaramaiah) June 9, 2021
ಮುಖ್ಯಮಂತ್ರಿಗಳು ವಿದ್ಯುತ್ ದರ ಏರಿಕೆ ನಿರ್ಧಾರ ಮಾಡಿರುವುದು ಪ್ರತಿಯೊಬ್ಬರ ಪಾಲಿಗೂ ದುರಂತ. ಸಾಮಾನ್ಯ ಜನರು, ಕೈಗಾರಿಕೋದ್ಯಮಿಗಳು ಸೇರಿ ಪ್ರತಿಯೊಬ್ಬರೂ ಸಹ ಕೋವಿಡ್ ನಿಂದ ಬಸವಳಿದಿದ್ದಾರೆ. ಇಂತಹ ಸಂಧರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ; ಜೂನ್ 14 ರಿಂದ ಹಲವು ಹಂತಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭ: ಆರ್ ಅಶೋಕ್ ಮಾಹಿತಿ


