ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ್ ತಮ್ಮ ವಿಡಿಯೋ ಮತ್ತು ಬರಹಗಳಲ್ಲಿ ’ಬ್ರಾಹ್ಮಣ್ಯ’ ಎಂಬ ಪದ ಬಳಸಿರುವುದರ ವಿರುದ್ಧ ವಿಶ್ವ ಯುವ ವೇದಿಕೆಯ ಪವನ್ ಕುಮಾರ್ ಎಂಬುವವರು ದೂರು ನೀಡಿರುವುದರ ಹಿನ್ನೆಲೆಯಲ್ಲಿ ಬಸವನಗುಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್‌ಗೆ ನೋಟಿಸ್ ನೀಡಿದ್ದಾರೆ.
ನಟ ಚೇತನ್‌ರವರು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋಗಳಿಗೆ ಸಂಬಂಧಿಸಿದಂತೆ ಯಾವ ಐಟಿಯಿಂದ ಅಪ್‌ಲೋಡ್ ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತು ನಟ ಚೇತನ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿ “ಬ್ರಾಹ್ಮಣ್ಯದ ವಿರುದ್ಧದ ನನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಕುರಿತು ತನಿಖೆಗಾಗಿ ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಇಂದು ನೋಟಿಸ್ ಸ್ವೀಕರಿಸಿದ್ದೇನೆ. ನಾಳೆ ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋಗುತ್ತೇನೆ ಮತ್ತು ಸಂವಿಧಾನದ ಮೌಲ್ಯಗಳಾದ ಸಮಾನತೆ ಮತ್ತು ನ್ಯಾಯಕ್ಕಾಗಿನ ಹೋರಾಟ ಮುಂದುವರೆಯುತ್ತದೆ” ಎಂದು ತಿಳಿಸಿದ್ದಾರೆ.
Today, I received a notice from the Basavanagudi Police Station, Bengaluru, to appear for inquiry about my social media posts against #Brahminism
I will go the police station tomorrow morning
Our fight for #equality & #justice in accordance with Constitutional values continues! pic.twitter.com/Tw6HsBFXEO
— Chetan Kumar / ಚೇತನ್ (@ChetanAhimsa) June 15, 2021
‘ಚಿತ್ರನಟ ಚೇತನ್ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ಅವಮಾನ ಮಾಡಿರುತ್ತಾರೆ. ಇದರಿಂದ ಸಮುದಾಯ ಮಾನಸಿಕವಾಗಿ ನೊಂದಿದ್ದು, ರಾಜ್ಯಾದ್ಯಂತ ವಿವಿಧ ಸಂಘ ಸಂಸ್ಥೆಗಳು ನನಗೆ ಮನವಿ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಎಂಬುವವರು ಸಹ ನಗರ ಪೊಲೀಸ್ ಆಯುಕ್ತರಿಗೆ ಈ ಹಿಂದೆ ದೂರು ಸಲ್ಲಿಸಿದ್ದಾರೆ.
ನಟ ಚೇತನ್ ಪೋಸ್ಟ್‌ನಲ್ಲಿ ಇದ್ದದ್ದು ಏನು…?
ಜೂನ್ 6 ರಂದು ನಟ ಚೇತನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಹೇಳಿಕೆಗಳನ್ನು ಕೋಟ್ ಮಾಡಿ, ಪೋಸ್ಟ್ ಮಾಡಿದ್ದರು.
‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ… ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ — ಅಂಬೇಡ್ಕರ್
‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪ್ರಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ’- ಪೆರಿಯಾರ್
ಇಬ್ಬರ ಹೇಳಿಕೆಗಳ ಜೊತೆಗೆ #Brahminism #Ambedkar #Periyar ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು.
’ಚೇತನ್ ಅವರು ತಮ್ಮ ಹೋರಾಟ ಬ್ರಾಹ್ಮಣ್ಯದ ವಿರುದ್ಧ ಹೊರತು ಬ್ರಾಹ್ಮಣರ ವಿರುದ್ಧ ಅಲ್ಲ ಅಂತ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಅವರೆಲ್ಲೂ ಜನಾಂಗದ ನಿಂದನೆ ಮಾಡಿಲ್ಲ. ಅವರ ಮೇಲಿನ ಈ ದಾಳಿ ನಿಲ್ಲಬೇಕು ಎಂದು ಹಲವರು ಚೇತನ್ ಬೆಂಬಲಕ್ಕೆ ನಿಂತಿದ್ದಾರೆ.
ಇದನ್ನೂ ಓದಿ; ನಟ, ಹೋರಾಟಗಾರ ಚೇತನ್ ವಿರುದ್ಧ ದೂರು: IStandWithChetanAhimsa ಎಂದ ನೆಟ್ಟಿಗರು



Dear sir nimma joothe Namma Jai Bheem naa Abimanigalu sada erute munduvarasi nimma ee horatta Namma bembala sada erute Jai Bheem
Hi chethan sir nima bembalake navideve nim horata munduvarisi nimge jayavagali jai bhagvan bhuda. Basava.ambedkar bless you sir
ಚೇತನ ಸರ್ ಸರಿಯಾದ ಉತ್ತರ ಸರಿಯಾದ ಮಾರ್ಗ