ಅರಳಿ ಮರದ ಕೊಂಬೆಯಿಂದ ನೇತಾಡುತ್ತಿರುವ ಮಾವಿನ ಕಾಯಿಗಳು ಎಂಬ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಾ, ಹೃಷೀಕೇಶದಲ್ಲಿ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಮುಖ ತೆಲುಗು ಸುದ್ದಿ ಚಾನೆಲ್ ಎಬಿಎನ್ ಕೂಡ ಇದೇ ವಿಡಿಯೋವನ್ನು ಪ್ರಸಾರ ಮಾಡಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಈ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕುತ್ತಿರುವಾಗ, ಈ ವೀಡಿಯೊದ ಬಗ್ಗೆ ವಿವರಿಸುವ ಆಜ್ ತಕ್ ಲೇಖನವೊಂದು ಕಂಡುಬಂದಿದೆ. ಲೇಖನದ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ಹೋರ್ಡಿಂಗ್‌ಗಳಲ್ಲಿನ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಆಜ್ ತಕ್ ಅಲ್ಲಿನ ಜನರನ್ನು ಸಂಪರ್ಕಿಸಿದೆ. ವಿಡಿಯೋದಲ್ಲಿರುವ ಹಾಗೆ ಮಾವಿನ ಮರದ ರೆಂಬೆಗಳು ಅರಳಿ ಮರದ ಮೇಲೆ ಬಿದ್ದಿವೆ ಎಂದು ಅಲ್ಲಿನ ಜನ ತಿಳಿಸಿದ್ದಾರೆ.

ನಂತರ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ, ಅರಳಿ ಮರವು ಮಾವಿನ ಹಣ್ಣನ್ನು ಬಿಟ್ಟಿಲ್ಲ. ಇತ್ತೀಚೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಪಕ್ಕದಲ್ಲಿರುವ ಮಾವಿನ ಮರದ ಕೊಂಬೆಗಳು ಮುರಿದು ಅರಳಿ ಮರದ ಮೇಲೆ ಬಿದ್ದಿವೆ ಎಂದು ಅವರು ಸ್ಪಷ್ಟಪಡಿಸಿದರು. ಕೆಲವರು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೀಡಿಯೊದಲ್ಲಿ ತೋರಿಸಿರುವಂತೆ ಅರಳಿ ಮರದ ಮೇಲೆ ಮಾವಿನಹಣ್ಣು ಬೆಳೆಯುವುದಿಲ್ಲ ಎಂದು ಡೈನಿಕ್ ಭಾಸ್ಕರ್ ಬರೆದ ಲೇಖನ ಇಲ್ಲಿದೆ.

ಒಟ್ಟಿನಲ್ಲಿ ಈ ವೀಡಿಯೊದಲ್ಲಿ ತೋರಿಸಿರುವಂತೆ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬುದು ಸುಳ್ಳು..
ಇದನ್ನೂ ಓದಿ; ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ



ನಿಮ್ಮ ಪತ್ರಿಕೆಯ ಚಂದಾದಾರರಾಗಲು ಇಚ್ಚಿಸುತ್ತೇನೆ..
ನ್ಯಾಯಪಥ ಪತ್ರಿಕೆಯ ಚಂದಾದಾರರಾಗಲು 9353666821 ಗೆ ವಾಟ್ಸಪ್ ಮೇಸೇಜ್ ಮಾಡಿ ಅಥವಾ ಈ ಕಳಗಿನ ಲಿಂಕ್ ಒತ್ತಿ….
https://bit.ly/2X4JmnB