ಪ್ರಧಾನಿ ಮೋದಿ ಕೊರೊನಾ ಸಾಂಕ್ರಮಿಕವನ್ನು ನಿರ್ವಹಿಸುವಲ್ಲಿ ಆಗಿರುವ ತನ್ನ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆದಾಗ ನಮ್ಮ ದೇಶದ ಪುನರ್‌ನಿರ್ಮಾಣ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಸಮಯ ಜಾಗತಿಕ ಬಡತನದ ಹೆಚ್ಚಳದಲ್ಲಿ ಭಾರತವು 57.3% ರಷ್ಟು ಪಾಲನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್ ವರದಿ ನೀಡಿತ್ತು. ಈ ಅಂಕಿ ಅಂಶಗಳನ್ನು ಅವರು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಭ್ರಷ್ಟಾಚಾರಿಗಳ ಮೇಲೆ ನಂಬಿಕೆಯೆ ಹೊರತು ರಾಮನ ಮೇಲಲ್ಲ: AAP ಸಂಸದ
ತನ್ನ ಟ್ವೀಟ್‌ನಲ್ಲಿ, ವಿಶ್ವಬ್ಯಾಂಕ್ ಬಡನದ ಕುರಿತು ನೀಡಿದ್ದ ವರದಿಯ ಚಿತ್ರವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “ಇದು ಭಾರತ ಸರ್ಕಾರವು ಸಾಂಕ್ರಮಿಕವನ್ನು ಕೆಟ್ಟದಾಗಿ ನಿರ್ವಹಿಸಿರುವುದರ ಫಲಿತಾಂಶವಾಗಿದೆ. ಆದರೆ ನಾವೀಗ ಭವಿಷ್ಯದತ್ತ ಗಮನ ಹರಿಸಬೇಕಾಗಿದೆ. ಪ್ರಧಾನಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆದಾಗ ನಮ್ಮ ದೇಶದ ಪುನರ್‌ನಿರ್ಮಾಣ ಪ್ರಾರಂಭವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
This is the result of GOI’s pandemic mismanagement.
But we must look at the future now. Rebuilding our country will begin when PM acknowledges his mistakes & seeks help from the experts.
Living in denial will not solve anything. pic.twitter.com/JhBfmTd41w
— Rahul Gandhi (@RahulGandhi) June 17, 2021
ರಾಹುಲ್ ಗಾಂಧಿ, “ಎಲ್ಲವನ್ನೂ ನಿರಾಕರಿಸಿ ಬದುಕುವುದರಿಂದ ಯಾವ ಸಮಸ್ಯೆಯು ಪರಿಹಾರವಾಗುವುದಿಲ್ಲ” ಎಂದು ಹೇಳಿದ್ದಾರೆ.
ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ, ಜಾಗತಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಮಧ್ಯಮ ಆದಾಯದ ಗುಂಪಿನಿಂದ ಹೊರಗುಳಿದ ಜನರ ಅಂದಾಜು ಅಂಕಿ ಅಂಶವನ್ನು ನೀಡಿದೆ. ಇದರಲ್ಲಿ ಹೆಚ್ಚಿನ ಕೊಡುಗೆ ಭಾರತದ್ದೆ ಆಗಿದೆ ಎಂದು ಅದು ಉಲ್ಲೇಖಿಸಿದೆ.
ವರದಿಯ ಪ್ರಕಾರ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 13.1 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದು, ಇದರಲ್ಲಿ 7.5 ಕೋಟಿ ಜನರು ಭಾರತದ ಜನರೆ ಆಗಿದ್ದಾರೆ(57.3%). ಹಾಗೆಯೆ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 5.4 ಕೋಟಿ ಜನರು ಮಧ್ಯಮ ಆದಾಯದ ಗುಂಪಿನಿಂದ ಹೊರಹೋಗಿದ್ದಾರೆ. ಇದರಲ್ಲಿ 3.5 ಕೋಟಿ ಜನರು ಭಾರತೀಯರಾಗಿದ್ದಾರೆ(59.3%).
ಇದನ್ನೂ ಓದಿ: ಕೋವಿಡ್ 2ನೇ ಅಲೆಯಿಂದ ಆರ್ಥಿಕತೆಗೆ 2 ಲಕ್ಷ ಕೋಟಿ ರೂ ನಷ್ಟ: RBI ವರದಿ


