Homeಕರೋನಾ ತಲ್ಲಣಕೋವಿಡ್ 2ನೇ ಅಲೆಯಿಂದ ಆರ್ಥಿಕತೆಗೆ 2 ಲಕ್ಷ ಕೋಟಿ ರೂ ನಷ್ಟ: RBI ವರದಿ

ಕೋವಿಡ್ 2ನೇ ಅಲೆಯಿಂದ ಆರ್ಥಿಕತೆಗೆ 2 ಲಕ್ಷ ಕೋಟಿ ರೂ ನಷ್ಟ: RBI ವರದಿ

- Advertisement -
- Advertisement -

ಸಾಂಕ್ರಾಮಿಕದ ಎರಡನೇ ಕೋವಿಡ್ ಅಲೆಯು ಪ್ರಸ್ತುತ ಹಣಕಾಸು ವರ್ಷದಲ್ಲಿ ಒಟ್ಟು 2 ಲಕ್ಷ ಕೋಟಿ ರೂ. ನಷ್ಟಕ್ಕೆ ಕಾರಣವಾಗಬಹುದು ಎಂದು ಭಾರತದ ರಿಸರ್ವ್ ಬ್ಯಾಂಕ್ ( RBI) ವರದಿ ಹೇಳಿದೆ.

ಭಾರತೀಯ ಆರ್ಥಿಕತೆಯು ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯೊಂದಿಗೆ ಕುಸ್ತಿಯಾಡುತ್ತಿದೆ ಎಂದು RBI ಅಭಿಪ್ರಾಯಪಟ್ಟಿದೆ. ಅದು ತನ್ನ ಮಾಸಿಕ ಜೂನ್‍ ಬುಲೆಟಿನ್‍ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.

ಸಾಂಕ್ರಾಮಿಕ ಪ್ರೋಟೋಕಾಲ್‍ಗಳ ನಡುವೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರವಾಗಿಲ್ಲ ಎಂದು ವರದಿ ಅಶಾವಾದವನ್ನು ವ್ಯಕ್ತಪಡಿಸಿದೆ.

“ವ್ಯಾಕ್ಸಿನೇಷನ್ ವೇಗ ಮತ್ತು ಪ್ರಮಾಣವು ಚೇತರಿಕೆಯ ಮಾರ್ಗವನ್ನು ರೂಪಿಸುತ್ತದೆ. ಆರ್ಥಿಕತೆಯ ಹಿನ್ನಡೆಯನ್ನು ತಡೆಯಲು ಲಸಿಕಾ ಅಭಿಯಾನ ನೆರವಾಗುತ್ತದೆ” ಎಂದು ವರದಿ ಹೇಳಿದೆ.

RBI ಮೊದಲಿನಿಂದಲೂ ಕೊರೊನಾ ಸಾಂಕ್ರಾಮಿಕ ಆರ್ಥಿಕತೆಗೆ ಅಡ್ಡ ಮಾಡುತ್ತಿದೆ ಎಂದು ಹೇಳುತ್ತ ಬಂದಿದೆ. ಆದರೆ ಆರ್ಥಿಕ ತಜ್ಞರು ಮತ್ತು ಸಾಂಕ್ರಾಮಿಕ ತಜ್ಞರು ಸರ್ಕಾರದ ವಿಫಲ ನಿರ್ವಹಣೆಯೇ ಈ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಲಸಿಕೆಯಿಂದ ದೇಹದಲ್ಲಿ ಅಯಸ್ಕಾಂತೀಯ ಗುಣ ಸಾಬೀತುಪಡಿಸಿದರೆ 1 ಲಕ್ಷ ಬಹುಮಾನ: ಪ್ರೊ.ನರೇಂದ್ರ ನಾಯಕ್ ಸವಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...