Homeನ್ಯಾಯ ಪಥಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 14/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಜಾಕೊ ವಂಡೊಮಾಲ್

ಮಿಸ್ಟರ್ ನೋಬಡಿ (MR. Nobody, ಇಂಗ್ಲಿಷ್, 2009)

ವಿಚ್ಛೇದನೆಗೊಂಡಿರುವ ತಂದೆತಾಯಿಗಳು ಬೇರೆಯಾಗುತ್ತಿದ್ದಾರೆ. ಅವರ ಹತ್ತು ವರ್ಷದ ಮಗ ನಿಮೋ ನೋಬಡಿ ಯಾರೊಂದಿಗೆ ಹೋಗಬೇಕೆನ್ನುವ ಗೊಂದಲದಲ್ಲಿರುತ್ತಾನೆ. ರೈಲ್ವೆ ನಿಲ್ದಾಣದಲ್ಲಿ ತಾಯಿ ಮಾತ್ರ ರೈಲು ಹತ್ತುತ್ತಾಳೆ. ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ, ತಾಯಿ ಮಗನನ್ನು ತನ್ನೊಂದಿಗೆ ಬರಲು ಕರೆಯುತ್ತಾಳೆ. ರೈಲಿನ ಹಿಂದೆ ಓಡುತ್ತಿರುವ ಬಾಲಕನನ್ನು ನಿಲ್ದಾಣದಲ್ಲಿ ನಿಂತಿರುವ ತಂದೆಯೂ ಅವನ ಬಳಿಗೆ ಬರಲು ಕರೆಯುತ್ತಾನೆ. ಈಗ ಯಾರ ಜೊತೆ ಹೋಗಬೇಕೆಂಬ ಆಯ್ಕೆಯಿಂದ ಪ್ರಾರಂಭವಾಗಿ, ಭವಿಷತ್ತಿನ ವಿವಿಧ ಸಂಭವನೀಯ ಬದುಕುಗಳೇ ಈ ಸಿನಿಮಾ.

ಸಿನಿಮಾದ ಮೊದಲ ದೃಶ್ಯ: ಅದು 2092ನೇ ಇಸವಿ, ಮನುಕುಲ ಸಾವನ್ನು ಜಯಿಸಿರುತ್ತದೆ. ಆಗ ಭೂಮಿಯ ಮೇಲೆ ಕೊನೆಯದಾಗಿ ಸಾಯುವವನು ನೂರ ಹದಿನೆಂಟು ವರ್ಷಗಳು ತುಂಬಿದ ವೃದ್ಧ ನೋಬಡಿ. ಕೋಮಾದಿಂದ ಹೊರಬಂದ ಮಿಸ್ಟರ್ ನೋಬಡಿಯ ಬದುಕಿನ ಬಗ್ಗೆ ಅಲ್ಲಿಗೆ ಬಂದ ಯುವ ಪತ್ರಕರ್ತನೊಬ್ಬ ಕೇಳುತ್ತಾನೆ. ಬಾಲಕನ ವಾಯ್ಸ್ ಓವರ್‌ನಿಂದ ಮುಂದುವರಿಯುವ ಕಥೆಯಲ್ಲಿ ಬಟರ್‌ಫ್ಲೈ ಎಫೆಕ್ಟ್
ಕುರಿತು ಹೇಳುತ್ತಾನೆ. ಚಿಟ್ಟೆಯೊಂದು ಹಾರುವಾಗ ಒಣಗಿದ ಎಲೆಯೊಂದು ಹಾರಿ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ನಡೆದುಬರುತ್ತಿರುವ ಇಬ್ಬರು ಭೇಟಿಯಾಗಲು ಸಹಾಯ ಮಾಡುತ್ತದೆ. ಹೀಗೆ ಒಂದಾದ ಜೋಡಿಗೆ ಮಗನಾಗಿ ನಿಮೋ ಹುಟ್ಟುತ್ತಾನೆ.

ಹತ್ತು ವರ್ಷವಿರುವಾಗ ಸಿಹಿ ತಿಂಡಿಯ ಅಂಗಡಿಗೆ ಹೋಗುವ ನಿಮೋ ಎರಡು ಬಗೆಯ ತಿಂಡಿಯನ್ನು ನೋಡಿ ಆಯ್ಕೆ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ವಾಪಸ್ಸಾಗುತ್ತಾನೆ. ಬರುವ ದಾರಿಯಲ್ಲಿ ನಿಮೋ ತನ್ನ ಮೂವರು ಗೆಳತಿಯರನ್ನು ನೋಡುತ್ತಾನೆ. ಅವರು ಅನ್ನಾ, ಎಲ್ಲಿಸ್ಸಾ ಮತ್ತು ಜೀನ್. ಅವರಲ್ಲಿ ಅನ್ನಾ ಅವನಿಗೆ ಅತಿ ಅಚ್ಚು ಮೆಚ್ಚು.

ಒಂದು ಕಥಾ ಎಳೆಯಲ್ಲಿ ತಾಯಿಯೊಂದಿಗೆ ಹೋದ ನಿಮೋ ಬೇರೆ ಊರಿನಲ್ಲಿ ಬೆಳೆದು ಹದಿನಾಲ್ಕು ವಯಸ್ಸಿನವನಾಗುತ್ತಾನೆ. ಅವನ ಶಾಲೆಗೆ ಅನ್ನಾ ಬರುತ್ತಾಳೆ. ಅನ್ನಾಳತ್ತ ಆಕರ್ಷಿತಗೊಳ್ಳುತ್ತಾನೆ. ಒಮ್ಮೆ ನದಿಯ ದಡದಲ್ಲಿ ಕುಳಿತಿರುವ ನಿಮೋನನ್ನು ಈಜಲು ಅನ್ನಾ ಕರೆಯುತ್ತಾಳೆ. ತನಗೆ ಈಜು ಬಾರದನ್ನು ಮುಚ್ಚಿಡಲು ಅವಳಿಗೆ ಕೋಪದಿಂದ ಬರುವುದಿಲ್ಲವೆನ್ನುತ್ತಾನೆ. ಅಲ್ಲಿಂದ ಅವನು ಒಂಟಿಯಾಗಿಯೇ ಬದುಕುತ್ತಾನೆ. ಇನ್ನೊಂದು ಆಯ್ಕೆಯಲ್ಲಿ ತನಗೆ ಈಜು ಬಾರದ ವಿಷಯವನ್ನು ಅನ್ನಾಗೆ ಹೇಳುತ್ತಾನೆ. ಅನ್ನಾ ನಿಮೋನ ನಡುವೆ ಪ್ರೀತಿಯಾಗುತ್ತದೆ. ಇಲ್ಲಿಂದ ಕಥೆ ಎರಡು ಭಾಗಗಳಾಗುತ್ತದೆ. ಮೊದಲನೆಯದು ಇಬ್ಬರು ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿ ಬದುಕುತ್ತಿರುವಾಗ, ನಿಮೋನ ಕಾರು ನದಿಗೆ ಹಾರಿ ಬಾಗಿಲು ತೆಗೆಯಲಾಗದೆ ನಿಮೋ ಸಾಯುವುದು ಕಥೆಯ ಕೊನೆ.

ಇನ್ನೊಂದು ಕಥಾ ಎಳೆಯಲ್ಲಿ ನಿಮೋನ ತಾಯಿಯ ಹೊಸ ಗಂಡನ ಮುಂಚಿನ ಮದುವೆಯಿಂದ ಹುಟ್ಟಿರುವ ಮಗಳು ಅನ್ನಾ ನಿಮೋನ ಮನೆಗೆ ಬರುತ್ತಾಳೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅವರಿಬ್ಬರೂ ಪರಸ್ಪರ ಹತ್ತಿರವಾಗುತ್ತಾರೆ. ಸಮಯ ಕಳೆದಂತೆ ನಿಮೋ ತಾಯಿಗೂ, ಅನ್ನಾಳ ತಂದೆಗೂ ಹೊಂದಾಣಿಕೆಯಾಗದೆ, ಅವರಿಬ್ಬರೂ ಬೇರೆಯಾಗುತ್ತಾರೆ. ನಿಮೋ ಬೆಳೆದು ಯುವಕನಾಗಿ ಅನ್ನಾಳ ಕಾಯುವಿಕೆಯಲ್ಲೇ ಇರಬೇಕಾದಾಗ, ಆಕಸ್ಮಿಕವಾಗಿ ಅನ್ನಾಳನ್ನು ಭೇಟಿಯಾಗುತ್ತಾನೆ. ಆಗ ಅನ್ನಾ ತನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟು ಅಲ್ಲಿಂದ ಹೋಗುತ್ತಾಳೆ. ಆಕಾಶದಿಂದ ಬಿದ್ದ ಮೊದಲ ಮಳೆ ಹನಿ ಅನ್ನಾಳ ದೂರವಾಣಿ ಸಂಖ್ಯೆಯನ್ನು ಅಳಿಸಿಬಿಡುತ್ತದೆ. ಅವಳಿಗಾಗಿ ಜೀವನಪೂರ್ತಿ ಕಾದರೂ ಅನ್ನಾ ಬರದಿರುವುದು ಈ ಕಥೆಯ ಕೊನೆ.

ಮತ್ತೊಂದು ಎಳೆಯಲ್ಲಿ ತಂದೆಯೊಂದಿಗೆ ಹೋದಾಗ ತಂದೆ ಅಪಘಾತವೊಂದರಿಂದ ಅಂಗವಿಕಲನಾಗುತ್ತಾನೆ. ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮೋಗೆ ಬರುತ್ತದೆ. ಇಲ್ಲಿ ಇನ್ನೊಬ್ಬ ಗೆಳತಿಯಾದ ಎಲ್ಲಿಸ್ಸಾಳನ್ನು ಪ್ರೀತಿಸಿ ಅವಳಿಗೆ ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಹೋಗುತ್ತಾನೆ. ಎಲ್ಲಿಸ್ಸಾ ಬೇಡವೆಂದಾಗ ಈ ಕಥೆ ಇನ್ನೆರಡಾಗಿ ಸೀಳುತ್ತದೆ. ಒಂದರಲ್ಲಿ ಬೈಕ್ ಅಪಘಾತವಾಗಿ ಆತ ಕೋಮಾಕ್ಕೆ ಹೋದರೆ. ಇನ್ನೊಂದರಲ್ಲಿ ಜೀನ್‌ಳನ್ನು ಮದುವೆಯಾಗಿ ಶ್ರೀಮಂತನಾಗಿ ಬದುಕಿದರೂ ನಿರುತ್ಸಾಹದಲ್ಲಿದ್ದು, ಕೊಲೆಯಾಗುತ್ತಾನೆ. ಎಲ್ಲಿಸ್ಸಾ ಒಪ್ಪಿಕೊಂಡಾಗ ಇಲ್ಲಿಂದ ಕಥೆ ಇನ್ನೆರಡು ಭಾಗಗಳಾಗುತ್ತವೆ. ಎಲ್ಲಿಸ್ಸಾಳನೊಂದಿಗೆ ಮದುವೆಯಾಗಿ ಕಾರು ಅಪಘಾತದಲ್ಲಿ ಎಲ್ಲಿಸ್ಸಾ ಸಾಯುತ್ತಾಳೆ. ಇನ್ನೊಂದು ಕಥಾಭಾಗದಲ್ಲಿ ಎಲ್ಲಿಸ್ಸಾ ಮದುವೆಯಾದರೂ ಸುಖವಾಗಿರದೆ ಎಲ್ಲಿಸ್ಸಾ ನಿಮೋನನ್ನು ಬಿಟ್ಟುಹೋಗುತ್ತಾಳೆ.

ಹೀಗೆ ಅನೇಕ ಕಥೆಗಳನ್ನು ಕೇಳಿದ ಪತ್ರಕರ್ತ, ವೃದ್ಧ ನಿಮೋನನ್ನು ನಿಜವಾಗಿ ನಡೆದ
ಕಥೆಯಾವುದೆಂದು ಕೇಳಿದಾಗ, ವೃದ್ಧ ನಿಮೋ ಇದೆಲ್ಲ ಹತ್ತು ವರ್ಷದ ಬಾಲಕನ ಕಲ್ಪನೆ ಎನ್ನುತ್ತಾನೆ. ತಂದೆ ಅಥವಾ ತಾಯಿಯ ಜೊತೆ ಹೋಗುವ ಆಯ್ಕೆಯಲ್ಲಿರುವ ಬಾಲಕ ನಿಮೋ ಬೇರೆಯದ್ದೇ ದಾರಿ ಆರಿಸಿಕೊಳ್ಳುವುದರ ಮೂಲಕ ಸಿನಿಮಾ ಮುಗಿಯುತ್ತದೆ.

ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟ್ (The Brand New Testament,, ಫ್ರೆಂಚ್, 2015):

ಸಾಮಾನ್ಯವಾಗಿ ಬದುಕುತ್ತಿರುವ ಜನರ ಮೊಬೈಲ್ ಫೋನ್‌ಗಳಿಗೆ ಅವರವರ ಸಾವಿನ ದಿನಾಂಕ ಬಂದು, ಬದುಕು ಕೊನೆಯಾಗುವ ದಿನ ಖಚಿತವಾಗಿಬಿಟ್ಟರೆ? ಸಾವಿನ ಭಯವೇ ಇಲ್ಲವಾದರೆ ದೇವರ ಮೌಲ್ಯವೇನಾಗುತ್ತದೆ?
ದೇವರಾದವನು ಬ್ರಸಲ್ಸ್ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಿಧೇಯಳಾಗಿರುವ ಹೆಂಡತಿ ಮತ್ತು ಒಂಭತ್ತು ವರ್ಷಗಳ ಮಗಳೊಂದಿಗೆ ವಾಸವಾಗಿರುತ್ತಾನೆ. ದೇವರು ಜಗಳಗಂಟ, ಸ್ಯಾಡಿಸ್ಟ್ ಆಗಿರುತ್ತಾನೆ. ದೇವರ ಹೆಂಡತಿ ಮುಗ್ಧೆ. ಸದಾ ಮೌನವಾಗಿ ಮನೆ ಕೆಲಸಗಳನ್ನು ಮಾಡುತ್ತಾ ತನ್ನ ಹೊಲಿಗೆ ಕೆಲಸದಲ್ಲಿ ನಿರತಳಾಗಿರುತ್ತಾಳೆ ಮತ್ತು ಅವಳಿಗೆ ಸುಂದರ ಹೂಗಳ ಚಿತ್ತಾರ ಬಿಡಿಸುವುದೆಂದರೆ ಅತಿ ಇಷ್ಟದ ಕೆಲಸ. ದೇವರು ಅವನ ರೂಮಿನ ಕಂಪ್ಯೂಟರಿನ ಮೂಲಕ ಮನುಷ್ಯರ ಹಣೆಬರಹವನ್ನು ನಿರ್ಧಾರಿಸುತ್ತಾನೆ. ಮನುಷ್ಯರು ದೇವರು ಮಾಡಿರುವ ನಿಯಮಗಳಿಂದ ಒದ್ದಾಡುವಾಗ ದೇವರು ನೋಡಿ ಖುಷಿ ಪಡುತ್ತಾನೆ. ರೈಲು, ವಿಮಾನ ಅಪಘಾತಗಳನ್ನು ಅವನ ಮನೋರಂಜನೆಗೋಸ್ಕರ ಅವನು ಮಾಡುತ್ತಿರುತ್ತಾನೆ.

ದೇವರ ಮಗಳಾದ ಈಯಾ ತಂದೆಯ ನಡತೆಯಿಂದ ಬೇಸತ್ತು, ದೇವರ ಕಂಪ್ಯೂಟರ್‌ನಿಂದ ಭೂಮಿಯಲ್ಲಿರುವ ಎಲ್ಲ ಮನುಷ್ಯರಿಗೆ ಅವರವರ ಸಾವಿನ ದಿನಾಂಕವನ್ನು ಅವರುಗಳ ಮೊಬೈಲ್ ಫೋನ್‌ಗಳಿಗೆ ಕಳುಹಿಸಿಬಿಡುತ್ತಾಳೆ. ದೇವರ ಹೆಂಡತಿ ಕಂಪ್ಯೂಟರಿನ ರೂಮನ್ನು ಒರೆಸುವಾಗ ಕಂಪ್ಯೂಟರಿನ ವೈರ್‌ಅನ್ನು ತೆಗೆದುಬಿಡುತ್ತಾಳೆ. ಸಾವಿನ ದಿನಾಂಕ ತಿಳಿದ ಜನರೆಲ್ಲ ಇಷ್ಟವಿಲ್ಲದ ಸಂಗಾತಿಗಳಿಂದ, ಕೆಲಸಗಳಿಂದ ದೂರವಾಗಿ ಅವರವರಿಗೆ ಇಷ್ಟದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ದೇವರ ಬಗ್ಗೆ ನೆನೆಯುವರೇ ಇರುವುದಿಲ್ಲ. ಇತ್ತ ಈಯಾ ಮನೆಯಿಂದ ಹೊರಬಂದು ನಿಜವಾದ ಪ್ರಪಂಚಕ್ಕೆ ಹೋಗಿ, ಅತಿ ನವೀನ ಒಡಂಬಡಿಕೆಯನ್ನು ಮಾಡುವುದಕ್ಕಾಗಿ, ಅಣ್ಣಾ ಜೆಸಿಯ (ಜೀಸಸ್ ಕ್ರೈಸ್ತ್) ಬಳಿ ಸಲಹೆ ಕೇಳುತ್ತಾಳೆ. ಶಿಲೆಯಾಗಿರುವ ಜೆಸಿ, ಈಯಾಳಿಗೆ ವಾಷಿಂಗ್ ಮಿಷನಿನಿಂದ ಹೊರ ಪ್ರಪಂಚಕ್ಕೆ ಹೋಗಿ, ಈಗಿರುವ ಹನ್ನೆರಡು ಮಂದಿ ಧರ್ಮ ಪ್ರಚಾರಕರ (ಅಪೊಸ್ತಲ್) ಜೊತೆಗೆ, ಹೆಚ್ಚುವರಿ ಆರು ಜನರನ್ನು ಹುಡುಕಾಟ ಮಾಡಿ, ಅವರಿಂದಲೇ ಬರೆಸುವಂತೆ ಹೇಳುತ್ತಾನೆ.

ಕೋಪಗೊಂಡ ತನ್ನ ತಂದೆ/ದೇವರ ಕೈಗೆ ಸಿಗದಂತೆ ಈಯಾ ವಾಷಿಂಗ್ ಮಿಷನಿನಿಂದ ನಿಜವಾದ ಪ್ರಪಂಚಕ್ಕೆ ಹೋಗುತ್ತಾಳೆ. ವಿವಿಧ ಬಗೆಯ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ವಿಭಾಗಗಳಲ್ಲಿ ಆರು ಮಂದಿಯನ್ನು ಹುಡುಕಲು ಈಯಾ ಮುಂದಾಗುತ್ತಿರುವಾಗಲೇ, ಅತ್ತ ಅದೇ ವಾಷಿಂಗ್ ಮಿಷನಿನಿಂದ ದೇವರು ತಾನು ಸೃಷ್ಟಿಸಿದ ಪ್ರಪಂಚಕ್ಕೆ ಮಗಳನ್ನು ಹುಡುಕಿಕೊಂಡು ಕೋಪದಲ್ಲಿ ಬರುತ್ತಾನೆ.

ಇಲ್ಲಿ ದೇವರು ಮಾಡಿದ ಎಲ್ಲ ರೀತಿ ರಿವಾಜುಗಳು ಮತ್ತು ನಿಯಮಗಳು ಅವನಿಗೂ ಅನ್ವಯವಾಗುತ್ತದೆ. ಅವನು ಸಾಮಾನ್ಯ ಮನುಷ್ಯನಂತೆ ಒದ್ದಾಡುತ್ತಾನೆ. ಚರ್ಚಿನಲ್ಲಿ ಊಟಕ್ಕಾಗಿ ಕಾಯುವಾಗ ಏಸುವಿನ ಬಗ್ಗೆ ಅವಹೇಳನಕಾರಿ ಟಿಪ್ಪಣಿ ಮಾಡಿ, ಅಲ್ಲಿ ಒದೆಯನ್ನೂ ತಿನ್ನುತ್ತಾನೆ. ದೇವರಿಗೆ ಗುರುತಿನ ಚೀಟಿ ಇಲ್ಲದ ಕಾರಣ ಅವನನ್ನು ಬೇರೆ ದೇಶಕ್ಕೆ ಕಳುಹಿಸಲಾಗುತ್ತದೆ. ದೇವರು ವಾಷಿಂಗ್ ಮಿಷನಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಮತ್ತೆ ತನ್ನ ಮನೆಗೆ ವಾಪಸಾಗುವ ದಾರಿಯನ್ನು ಹುಡುಕುತ್ತಾನೆ.

ಇತ್ತ ಪ್ರಪಂಚವೇ ಮುಗಿಯುವ ಹಂತಕ್ಕೆ ಬಂದಾಗ ದೇವರ ಹೆಂಡತಿ ಕಂಪ್ಯೂಟರಿನ ವೈರ್‌ಅನ್ನು ಮತ್ತೆ ಕನೆಕ್ಟ್ ಮಾಡಿ, ಆಗುವ ಅನಾಹುತವನ್ನು ನಿಲ್ಲಿಸುತ್ತಾಳೆ. ನೀಲಿ ಆಕಾಶ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ವಿವಿಧ ಬಗೆಯ ಹೂಗಳ ವಿನ್ಯಾಸಗಳು ಭೂಮಿಯಲ್ಲೆಲ್ಲಾ ಕಾಣುತ್ತವೆ. ಅದನ್ನೆಲ್ಲ ನೋಡಿ ಈಯಾ ಇದು ತಾಯಿಯ ಕೆಲಸವೆಂದು ನಗುತ್ತಾಳೆ.

ಈ ಸಿನಿಮಾ ಕಾಮಿಡಿಯಾಗಿದ್ದು, ಬದುಕಿನ ವಿವಿಧ ಹಂತಗಳಲ್ಲಿರುವ ಜನಗಳ ಕಥೆಗಳನ್ನು ಹೇಳಿದರೂ ಎಲ್ಲರೂ ಪ್ರೀತಿಗಾಗಿ ಹಂಬಲಿಸುವವರೇ ಆಗಿರುತ್ತಾರೆ.

ಜಾಕೊ ವಂಡೊಮಾಲ್ (Jaco Van Dormel)

ಜಾಕೊರ ಕಥಾವಸ್ತುಗಳು ವಿಚಿತ್ರ ಮತ್ತು ವಿಭಿನ್ನವಾದವು. ಇವರ ಒಂದು ಸಿನಿಮಾದಲ್ಲಿ ಒಂದೇ ಕಥೆಯನ್ನು ಹೇಳದೆ ಕಥೆಯೊಳಗೆ ಹಲವಾರು ಕಥೆಗಳನ್ನು ಹೆಣೆದು ಹೇಳುತ್ತಾ, ವಿವಿಧ ಬಗೆಯ ಭಾವನೆಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಾರೆ.

ಮಿಸ್ಟರ್ ನೋಬಡಿ ಸಿನಿಮಾದಲ್ಲಿ ಒಬ್ಬ ಬಾಲಕನ ಬದುಕಿನ ಹಲವಾರು ಆಯ್ಕೆಗಳು ಮತ್ತು ಆ ಆಯ್ಕೆಗಳಿಂದ ಹೊರಬರುವ ಬದುಕುಗಳನ್ನು ಚಿತ್ರಿಸಿದರೆ, ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟಿನಲ್ಲಿ ಬದುಕಿನ ವಿವಿಧ ಹಂತಗಳಲ್ಲಿರುವ ಜನರ ಕಥೆಗಳನ್ನು ಹಿಡಿದಿಟ್ಟಿದ್ದಾರೆ.

ಇವರು ಮೊದಲು ಬೆಲ್ಜಿಯಂನಲ್ಲಿ ಸಿನಿಮಾ ಮಾಡುತ್ತಾ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಅವಕಾಶಗಳನ್ನು ಗಳಿಸಿಕೊಂಡು ಬಂದವರು. ಇವರ ’ದಿ ಶೇಪ್ (2019) ಎನ್ನುವ ಕಿರುಚಿತ್ರ ಎಲ್ಲರೂ ನೋಡಲೇಬೇಕಾದದ್ದು. ಇದರಲ್ಲಿ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ಮಿಡಿಯಾ ಪ್ಲೂರಲಿಸಂನ (ಮಾಧ್ಯಮ ಬಹುತ್ವ) ಕುರಿತು ಸ್ಫುಟವಾಗಿ ಮತ್ತು ಅತಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ನಿರಂಕುಶ ಪ್ರಭುತ್ವಗಳು ಹೇಗೆ ವ್ಯಕ್ತಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಹವಣಿಸುತ್ತವೆ ಹಾಗೂ ನಂತರದಲ್ಲಿ ಎಲ್ಲ ಸುದ್ದಿವಾಹಿನಿಗಳು ಸರ್ಕಾರದ ಕೈಗೊಂಬೆಗಳಾದಾಗ, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಜೆಗಳೇ ಧ್ವನಿ ಎತ್ತಿ ಬಲಿಷ್ಟ ಸರ್ಕಾರಗಳ ವಿರುದ್ಧ ಹೋರಾಡಬಹುದೆಂಬುದನ್ನು ದಿ ಶೇಪ್ ಕಿರುಚಿತ್ರದಲ್ಲಿ ಜಾಕೋ ಕಟ್ಟಿಕೊಟ್ಟಿದ್ದಾರೆ. ವಿಶ್ವದೆಲ್ಲೆಡೆ ಹಲವು ನಿರಂಕುಶ ಪ್ರಭುತ್ವಗಳ ಜೊತೆ ಸೆಣೆಸುತ್ತಿರುವ ಸಾಮಾನ್ಯ ಜನರ ಕಥೆಯಾಗಿದೆ ಇದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...