ಇಸ್ರೇಲ್ ನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ಅವರು ಇರಾನ್ ರೈಸಿ ಅವರು ದೇಶದ ಅಧ್ಯಕ್ರರಾಗಿ ಆಯ್ಕೆಗೊಂಡಿದ್ದಾರೆ. ಆ ಮೂಲಕ ಹಿಂದಿನ ಅಧ್ಯಕ್ಷ ಹಸನ್ ರುಬಾನಿ ಅವರ 8 ವರ್ಷಗಳ ಆಡಳಿತಕ್ಕೆ ತೆರೆಬಿದ್ದಿದೆ. ಇಬ್ರಾಹಿಮ್ ರೈಸಿ ಅವರು ಇರಾನ್‌ನ ಶಿಯಾ ಪಂಗಡಕ್ಕೆ ಸೇರಿದ್ದು ಅಲ್ಲಿನ ಕನ್ಸರ್ವೇಟಿವ್ ಪತ್ರಿಕೆ ರೈಸಿ ಅವರ ಆಯ್ಕೆಯನ್ನು ‘ನ್ಯೂ ಎರಾ ಆಫ್ ಇರಾನ್’ ಎಂದು ಕೊಂಡಾಡಿದೆ. ಇಬ್ರಾಹಿಮ್ ರೈಸಿ ಅವರು ತೀವ್ರ ಸಂಪ್ರದಾಯವಾದಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಇಬ್ರಾಹಿಂ ರೈಸಿ ಅವರು ಇರಾನ್‌ನ ಸುಪ್ರೀಂ ಲೀಡರ್ 81 ವರ್ಷದ ಆಯತುಲ್ಲಾ ಅಲಿ ಖಮನೇಯಿ ಅವರ ಗುಂಪಿಗೆ ಸೇರಿದವರಾಗಿದ್ದಾರೆ. ಈ ಹಿಂದೆ ಇಬ್ರಾಹಿಂ ರೈಸಿ ಅವರು ಇರಾನ್‌ನ ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇರಾನ್ ಚುನಾವಣೆಯಲ್ಲಿ ಚಲಾವಣೆಯಾದ 62 ಪ್ರತಿಶತ ಮತವನ್ನು ಪಡೆದು ರೈಸಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಿಂದಿನ ಅಧ್ಯಕ್ಷ ಹುಸೇನ್ ರುಬಾನಿ ಅವರಿಂದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ಇರಾನ್‌ನ ನೂತನ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಭಾರತ ಮತ್ತು ಇರಾನ್ ದೀರ್ಘಕಾಲದ ಸ್ನೇಹಿತರಾಗಿದ್ದು ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವೃದ್ಧಿಸುವ ವಿಶ್ವಾಸವನ್ನು ಪ್ರಧಾನಿಗಳು ವ್ಯಕ್ತಪಡಿಸಿದ್ದಾರೆ. ಇರಾನ್ ಭಾರತದ ಅತ್ಯಂತ ಆಪ್ತ ರಾಷ್ಟ್ರವಾಗಿದ್ದು ಇರಾನ್‌ನ ಹೊಸ ಸರ್ಕಾರದ ಜೊತೆ ಸಂಪೂರ್ಣ ಸಹಕಾರದೊಂದಿಗೆ ಭಾರತ ಜೊತೆ ಜೊತೆಗೆ ಹೆಜ್ಜೆಹಾಕಲಿದೆ. ಭಾರತ ಮತ್ತು ಇರಾನ್ ಅಭಿವೃದ್ಧಿಯ ಪಾಲುದಾರರಾಗಿದ್ದು ಹೊಸ ಅಧ್ಯಕ್ಷರ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟುಗಟ್ಟಿಗೊಳಿಸುವ ಇಂಗಿತವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ನಿರ್ವಹಣೆ ಬಗ್ಗೆ ಭಾರಿ ಟೀಕೆ: ವರ್ಚಸ್ಸು ಹೆಚ್ಚಿಸಿಕೊಳ್ಳಲು ಮೋದಿ ಸರ್ಕಾರದ ಪ್ರಯತ್ನ
Congratulations to His Excellency Ebrahim Raisi on his election as President of the Islamic Republic of Iran. I look forward to working with him to further strengthen the warm ties between India and Iran.
— Narendra Modi (@narendramodi) June 20, 2021
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ, ಟರ್ಕಿ ಪ್ರಧಾನಿ ತಯ್ಯೀಪ್ ಇರ್ಡೋಗನ್ ಗಲ್ಫ್ ದೇಶದ ನಾಯಕರು, ವಿಶ್ವದ ಅನೇಕ ಗಣ್ಯರು ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಆಯ್ಕೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Congratulations to Excellency brother Ibrahim Raisi @raisi_com on his landmark victory in the Islamic Republic of Iran’s 13th Presidential elections. Look forward to working with him for further strengthening of our fraternal ties and for regional peace, progress and prosperity.
— Imran Khan (@ImranKhanPTI) June 19, 2021
UAE leaders congratulate Ebrahim Raisi on winning Iran's presidential election#WamNewshttps://t.co/d44qtkRkJQ
— WAM English (@WAMNEWS_ENG) June 19, 2021
ನೂತನ ಅಧ್ಯಕ್ಷ ಇಬ್ರಾಹಿಂ ರೈಸಿಯವರ ಮುಂದಿದೆ ಇರಾನ್‌ಅನ್ನು ಆರ್ಥಿಕ ಸಂಕಟಗಳಿಂದ ಪಾರುಮಾಡುವ ಹೊಣೆಗಾರಿಕೆ
ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಮುಂದಿನ ಆಡಳಿತ ಅವಧಿ ಅಷ್ಟು ಸುಲಭವಾಗಿಲ್ಲ. ಏಕೆಂದರೆ, ಇರಾನ್ ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕ ವಿಧಿಸಿದ ಆರ್ಥಿಕ ನಿರ್ಬಂಧಗಳ ಪರಿಣಾಮ ಅಮೆರಿಕಾದ ಮಿತ್ರರಾಷ್ಟ್ರಗಳು ಇರಾನ್ ಜೊತೆ ವ್ಯಾಪರ ವಹಿವಾಟನ್ನು ನಡೆಸುತ್ತಿಲ್ಲ. ತೈಲ ಸಂಪದ್ಭರಿತರಾಷ್ಟ್ರವಾದ ಇರಾನ್‌ನಲ್ಲಿ ಪೆಟ್ರೋಲಿಯಂ ರಫ್ತು ಕಳೆದು ಕೆಲವು ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಅಮೆರಿಕಾ ನಿರ್ಬಂಧದ ಪರಿಣಾಮವಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಈಗ ಸೌದಿ ಅರೇಬಿಯಾ, ಕುವೈತ್ ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.
ಕಳೆದ ಒಂದೆರಡು ವರ್ಷಗಳಿಂದ ದೇಶದಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟು ಅಮೆರಿಕಾ ವಿರುದ್ಧದ ನಡುವಿನ ಸಂಘರ್ಷ, ಯುದ್ಧ ಪರಿಸ್ಥಿತಿ, ಕೊರೊನಾ ಸಾಂಕ್ರಾಮಿಕ, ಪಕ್ಕದ ಇರಾಕ್ ನಡುವಿನ ಗಡಿ ವಿವಾದಗಳಿಂದ ಇರಾನ್ ದೇಶದ ಆರ್ಥಿಕತೆ ನೆಲಕಚ್ಚಿದೆ. ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ 10% ಕ್ಕಿಂತಲೂ ಕಡಿಮೆಯಾಗಿದೆ. ಜಗತ್ತಿನ ದೊಡ್ಡ ದೊಡ್ಡ ತೈಲ ತಯಾರಿಕಾ ಕಂಪನಿಗಳೂ ಇರಾನ್ ತೊರೆದು ಇತರ ಗಲ್ಫ್ ರಾಷ್ಟ್ರಗಳ ಕಡೆ ಮುಖ ಮಾಡಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಇಬ್ರಾಹಿಂ ರೈಸಿ ಇರಾನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇರಾನ್ ದೇಶವನ್ನು ಮಹಾನ್ ಆರ್ಥಿಕ ಸಂಕಟಗಳಿಂದ ಪಾರುಮಾಡುವ ಹೊಣೆಗಾರಿಕೆ ಇಬ್ರಾಹಿಂ ರೈಸಿ ಹೆಗಲಮೇಲಿದೆ.
ಹಳಸಿದ ವಿದೇಶಿ ಸಂಬಂಧ, ಅಮೆರಿಕಾ ನಡುವಿನ ಶೀತಲ ಸಮರ
ಇರಾನ್ ಮತ್ತು ಅಮೆರಿಕಾ ನಡುವೆ ಕಳೆದ ವರ್ಷ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು ಇರಾನಿನ ಮಿಲಿಟರಿ ಜನರಲ್ ಕಾಸಿಮ್ ಸೊಲೆಮನಿ ಅವರನ್ನು ಅಮೆರಿಕಾದ ಪಡೆಗಳು ಇರಾಕ್‌ನ ಬಾಗ್ದಾದ್ ವಿಮಾನ ನಿಲ್ಧಾಣದ ಸಮೀಪ 2020 ರ ಜನವರಿ 3 ರಂದು ಹೊಡೆದುರುಳಿಸಿದ್ದವು. ಇದಾದ ಮೇಲೆ ಇರಾನ್ ಅಮೆರಿಕಾ ಮೇಲೆ ಪ್ರತಿಧಾಳಿ ನಡೆಸಿತ್ತು. 2020 ರ ಜನವರಿ 8 ರಂದು ಇರಾನ್ ಸಶಸ್ತ್ರ ಪಡೆಗಳು ಅಮೆರಿಕಾದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯ 1 ಗಂಟೆಯ ನಂತರ ಇರಾಕ್ ಪಡೆಗಳು ಅಮೆರಿಕಾ ವಿಮಾನವೆಂದು ತಿಳಿದು ಉಕ್ರೇನ್ ಇಂಟರ್‌ನ್ಯಾಷನಲ್‌ನ ವಿಮಾನವನ್ನು ಹೊಡೆದುರುಳಿಸಿ 176 ಜನರ ಸಾವಿಗೆ ಕಾರಣರಾಗಿದ್ದರು. ಅಮೆರಿಕಾ ಮತ್ತು ಇರಾನ್ ನಡುವಿನ ಸಂಬಂಧ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಅವಧಿಯಲ್ಲಿ ತೀವ್ರ ಹಳಸಿತ್ತು. ಕಳೆದ ಕೆಲ ವರ್ಷಗಳಿಂದ ಅಮೆರಿಕ ಮತ್ತು ಇರಾನ್ ಪರಸ್ಪರ ಶೀತಲ ಸಮರವನ್ನು ನಡೆಸುತ್ತಲೇ ಬಂದಿವೆ. ಬಿಡೆನ್ ಮತ್ತು ಇಬ್ರಾಹಿಂ ರೈಸಿ ಅವಧಿಯಲ್ಲಿ ಅಮೆರಿಕಾ ಸಂಬಂಧ ಸುಧಾರಿಸುವ ನಿರೀಕ್ಷೆಯನ್ನು ಇರಾನಿನ ಜನರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಅನ್‌ಲಾಕ್ 2.0: ಸಾರಿಗೆ ಸಂಚಾರ, ಸಂಜೆ 5 ರವರೆಗೆ ಅಂಗಡಿ, ಬಾರ್, ಹೋಟೆಲ್ ಓಪನ್
ಇನ್ನು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಮತ್ತಷ್ಟು ಹಳಸುವ ಸೂಚನೆಗಳು ವ್ಯಕ್ತವಾಗಿವೆ . ಇದುವರೆಗೆ ಇಸ್ರೇಲ್ ಮತ್ತು ಇರಾನ್ ಶೀತಲ ಸಮರವನ್ನು ನಡೆಸುತ್ತಲೇ ಬಂದಿವೆ. ಇಸ್ರೇಲ್‌ನಲ್ಲಿ ಜೂವಿಷ್ ತೀವ್ರ ಸಂಪ್ರದಾಯವಾದಿ ಪ್ರಧಾನಿ ನಫ್ತಾಲಿ ಬನೆಟ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿದೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ತಮ್ಮ ಕ್ಯಾಬಿನೇಟ್ ಸಭೆಯಲ್ಲಿ ಇಬ್ರಾಹಿಂ ರೈಸಿ ಆಯ್ಕೆಯ ಕುರಿತು ಜಗತ್ತಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮಾನವೀಯತೆಯನ್ನು ರಕ್ಷಿಸುವ ಕೊನೆಯ ಆಯ್ಕೆ ನಮ್ಮ ಮುಂದಿದೆ. ನಾವು ಯಾರ ಜೊತೆ ವ್ಯವಹರಿಸುತ್ತಿದ್ದೇವೆ ಎಂದು ಎಚ್ಚರಿಕೆಯಿಂದ ಗಮನಿಸಬೇಕು. ಜಗತ್ತು ಇರಾನಿನ ಬೆಳವಣಿಗೆ ಕುರಿತು ಎಚ್ಚರಿಕೆಯನ್ನು ವಹಿಸಬೇಕು ಎಂದು ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಜಗತ್ತಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಇಂತಹ ಬಿಕ್ಕಟ್ಟಿನಲ್ಲಿ ಇಬ್ರಾಹಿಂ ರೈಸಿ ಆಡಳಿತ ಇಸ್ರೇಲ್ ಕುರಿತು ಯಾವ ನಿಲುವು ತಾಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇಬ್ರಾಹಿಂ ರೈಸಿ ಆಡಳಿತದಲ್ಲಿ ಭಾರತ ಮತ್ತು ಇಸ್ರೇಲ್ ಸಂಬಂಧ
ಇರಾನ್ ಹಾಗೂ ಭಾರತ ದೀರ್ಘಕಾಲದ ಮಿತ್ರ ರಾಷ್ಟ್ರಗಳಾಗಿದ್ದು ಭಾರತ ಇತ್ತೀಚಿನ ವರ್ಷಗಳಲ್ಲಿ ಬಹುಪಾಲು ಪೆಟ್ರೋಲಿಯಂ ಅನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಹಾಗೇ ಭಾರತ ಇರಾನ್‌ನ ಚಹಾಬರ್ ಬಂದರನ್ನು ಅಭಿವೃದ್ಧಿಪಡಿಸಿದ್ದು ಗಲ್ಫ್ ವಲಯದಲ್ಲಿ ಭಾರತದ ಸ್ಟ್ರಾಟಜಿಕ್ ತಾಣವನ್ನಾಗಿ ಚಹಾಬರ್ ಅನ್ನು ಬಳಸಿಕೊಳ್ಳಲು ಮುಂದಾಗಿದೆ. ಮಿಲಿಟರಿ ಮತ್ತು ವಾಣಿಜ್ಯ ಉದ್ಧೇಶಗಳಿಂದ ಇರಾನ್ ಭಾರತಕ್ಕೆ ಅತ್ಯಂತ ಬಹುಮುಖ್ಯ ರಾಷ್ಟ್ರವಾಗಿದ್ದು ಪಾಕಿಸ್ತಾನ ಮತ್ತು ಅಫಘಾನಿಸ್ಥಾನದೊಂದಿಗೆ ಭಾರತಕ್ಕೆ ನೇರವಾಗಿ ಭೂಮಾರ್ಗದ ಮೂಲಕ ಸಂಪರ್ಕ ಸಾಧ್ಯವಾಗಿದೆ. ಈ ಎಲ್ಲ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಆಡಳಿತದಲ್ಲಿ ಭಾರತ ಮತ್ತು ಇರಾನ್ ಇನ್ನಷ್ಟು ನಿಕಟವಾಗುವ ಕುರಿತು ಮಾತನಾಡಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ
ಇರಾನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ರಾಹಿಂ ರೈಸಿ ಅವರ ವಿರುದ್ಧ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವಿದೆ. 2019 ರಿಂದ ಇರಾನ್‌ನ ನ್ಯಾಯಂಗದ ಮುಖ್ಯಸ್ಥರಾಗಿದ್ದ ರೈಸಿ ಅನೇಕ ಏಕಪಕ್ಷೀಯ ತನಿಖೆ, ಕಗ್ಗೊಲೆಗಳನ್ನು ನಡೆಸಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಇಬ್ರಾಹಿಂ ರೈಸಿ ವಿರುದ್ಧದ ಆರೋಪಗಳನ್ನು ತನಿಖೆ ನಡೆಸುತ್ತಿದೆ.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ರೈಸಿ ಇಬ್ರಾಹಿಂ ರೈಸಿ ಆಯ್ಕೆಯು ಮಾನವ ಹಕ್ಕುಗಳ ರಕ್ಷಣೆಗೆ ದೊಡ್ಡ ತೊಡಕು ಎಂದು ಅಭಿಪ್ರಾಯ ಪಟ್ಟಿವೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಗ್ನೆಸ್ ಕಾಲಮಾರ್ಡ್ ಇಬ್ರಾಹಿಂ ರೈಸಿ ಆಯ್ಕೆ ಕುರಿತು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
The outcome of #Iran "election" was predictable. But nevertheless, that #EbrahimRaisi has risen to the presidency instead of being investigated for the crimes against humanity of murder, enforced disappearance and torture, is a grim reminder that impunity reigns supreme in Iran
— Agnes Callamard (@AgnesCallamard) June 19, 2021
ಹಾಗೇ ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ಅತ್ಯಾಚಾರ ಪ್ರಕರಣ: ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂಠನ್ ಬಂಧನ


