ಜಗತ್ತಿನ ಅತ್ಯಂತ ಶೀತ ರಾಷ್ಟ್ರಗಳಲ್ಲಿ ಕೆನಡಾ, ನ್ಯೂಜಿಲೆಂಡ್ ಮತ್ತು ನಾರ್ವೆಯನ್ನು ಪರಿಗಣಿಸಲಾಗುತ್ತದೆ. ಎಂತಹ ಬಿರುಬೇಸಿಗೆಯಲ್ಲೂ ಈ ದೇಶಗಳಲ್ಲಿ ಚಳಿಯ ವಾತಾವರಣವಿರುತ್ತದೆ. ಭಾರತ ಮುಂತಾದ ದೇಶಗಳಿಂದ ಕೆನಡಾದಲ್ಲಿ ನೆಲೆಸಿರುವವರಿಗೆ ಬೇಸಿಗೆಯಲ್ಲೂ ಚಳಿಗಾಲದ ಅನುಭವವಾಗುತ್ತದೆ. ಜೂನ್-ಜುಲೈ ಬೇಸಿಗೆಯ ತಿಂಗಳುಗಳಲ್ಲೂ ಉಷ್ಣಾಂಶ ಅತಿಯೆನಿಸುವುದಿಲ್ಲ.
ಜಾಗತಿಕ ತಾಪಮಾನ ಏರಿಕೆಯಿಂದ ಇತ್ತೀಚಿನ ದಶಕಗಳಲ್ಲಿ ಯುರೋಪ್, ಅಮೆರಿಕಾ ಮತ್ತು ಉತ್ತರ ದಕ್ಷಿಣ ದ್ರುವಗಳ ತಾಪಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವರ್ಷದಿಂದ ವರ್ಷಕ್ಕೆ 1-2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚುತ್ತಲೇ ಇದೆ. ಉತ್ತರ ದ್ರುವದ ತುದಿಯಲ್ಲಿಯಲ್ಲಿರುವ ಕೆನಡಾ ದೇಶದ ಹವಮಾನದಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು ವಿಪರೀತ ಉಷ್ಣಾಂಶ ದಾಖಲಾಗುತ್ತಿದೆ.
ಇದನ್ನೂ ಓದಿ: ಉದ್ಯೋಗ ಕೇಳಿದ ಯುವಜನರ ಮೇಲೆ ಲಾಠಿ ಪ್ರಯೋಗಿಸಿದ ಬಿಹಾರ ಸರ್ಕಾರ
ಕಳೆದ ಮೂರುದಿನಗಳಿಂದ ಕೆನಡಾ ದೇಶದಲ್ಲಿ ಒಣ ಹವೆ ಮುಂದುವರೆದಿದ್ದು ಉಷ್ಣಾಂಶ ಮಟ್ಟದಲ್ಲಿ ತೀವ್ರ ಏರಿಕೆಯಾಗಿದೆ. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಮಾತ್ರ ಈ ಬಗೆಯ ತಾಪಮಾನವನ್ನು ಕಾಣುತ್ತಿದ್ದ ಕೆನಡಾ ದೇಶ ಈ ವರ್ಷ ಜೂನ್ ಅತ್ಯಂತ ವೇಳೆಗೆ 50 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನ ಉಷ್ಣತೆಯಲ್ಲಿ ಬೇಯತೊಡಗಿದೆ. ನಿನ್ನೆ ಸಂಜೆ 4:20 ರ ಸಮಯದಲ್ಲಿ ಕೆನಡಾ ದೇಶದ ಲಿಟ್ಟೊನ್ ಕ್ಲೈಮೇಟ್ ಸ್ಟೇಷನ್‌ನಲ್ಲಿ 49.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ಇದುವರೆಗಿನ ಎಲ್ಲಾ ದಾಖಲೆಗಳು ಮುರಿದಿವೆ.
ಕೆನಡಾದ ವಾತಾವರಣ ಮತ್ತು ಪರಿಸರ ಬದಲಾವಣೆ ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಿ ಸತತ ಮೂರುದಿನಗಳಿಂದ ದೇಶದ ಹವಮಾನದಲ್ಲಿ ತೀವ್ರ ಉಷ್ಣತೆ ದಾಖಲಾಗಿದ್ದು ಇದು ಆತಂಕಕಾರಿ ಬೆಳವಣಿಗೆ ಎಂದಿದೆ.
ಪಶ್ಚಿಮ ಕೆನಡಾ, ವಾಯುವ್ಯ ಕೆನಡಾ ಮತ್ತು ಅಮೆರಿಕ ಪೆಸಿಫಿಕ್ ಭಾಗಗಳು ಬಿರು ಬೇಸಿಗೆಯ ಬೇಗೆಯಲ್ಲಿ ಬೇಯುತ್ತಿದ್ದು ಬ್ರಿಟಿಷ್ ಕೊಲಂಬಿಯಾದ ಲಿಟನ್ ನಗರದಲ್ಲಿ ಇದುವರೆಗಿನ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಇದನ್ನೂ ಓದಿ: ಉದ್ಯೋಗ ಕೇಳಿದ ಯುವಜನರ ಮೇಲೆ ಲಾಠಿ ಪ್ರಯೋಗಿಸಿದ ಬಿಹಾರ ಸರ್ಕಾರ


