Homeಅನುವಾದಿತ ಲೇಖನರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯಲ್ಲಿ ಬಿಜೆಪಿ ಜಾಹೀರಾತು: ವಿವಿಗಳಿಗೆ ಪುಸ್ತಕ ಖರೀದಿಸುವಂತೆ ತಾಕೀತು

ರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯಲ್ಲಿ ಬಿಜೆಪಿ ಜಾಹೀರಾತು: ವಿವಿಗಳಿಗೆ ಪುಸ್ತಕ ಖರೀದಿಸುವಂತೆ ತಾಕೀತು

'ನವ ಭಾರತ ನಿರ್ಮಾಣದ ಅಭಿಯಾನ ಬೆಂಬಲಿಸೋಣ, ಪಕ್ಷ ಸೇರಿ ಮತ್ತು ಈ ಅಭಿಯಾನದಲ್ಲಿ ಕೈಜೋಡಿಸಿ. ಒಂದೇ ಭಾರತ ಶ್ರೇಷ್ಠ ಭಾರತ' ಎಂಬ ಸಾಲುಗಳು ಜಾಹೀರಾತಿನಲ್ಲಿವೆ.

- Advertisement -
- Advertisement -

ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರ ಜೀವನಚರಿತ್ರೆ ‘ನಿಮಿತ್ತ ಮಾತ್ರ ಹೂಂ ಮೇ’ ಪುಸ್ತಕವು ಜುಲೈ 1 ರಂದು ಅವರ 80 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನ ಸ್ಪೀಕರ್ ಸಿ.ಪಿ.ಜೋಶಿಯವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮವೇನೋ ಚೆನ್ನಾಗಿ ನಡೆಯಿತು. ಅತಿಥಿಗಳು ಕಲ್ರಾಜ್ ಮಿಶ್ರಾ ಜೀವನದ ಪುಟಗಳನ್ನೊಮ್ಮೆ ತಿರುವಿಹಾಕಿದರು. ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಬರಹಕ್ಕೆ ಇಳಿದ ಮಿಶ್ರಾ ಸಾಹೇಬರ ಬದುಕನ್ನು ಕೊಂಡಾಡಿದರು. ಕಾರ್ಯಕ್ರಮ ಇಷ್ಟಕ್ಕೆ ಮುಗಿಯಲಿಲ್ಲ.

ಕಾರ್ಯಕ್ರಮದಲ್ಲಿ ನೆರೆದಿದ್ದ ವಿಶ್ವವಿದ್ಯಾಲಯದ ಕುಲಪತಿಗಳು ಕಾರ್ಯಕ್ರಮದಿಂದ ಹೊರಡುವ ಹೊತ್ತಿಗೆ ಅವರಿಗೆಲ್ಲ ಆಶ್ಚರ್ಯ ಕಾದಿತ್ತು. ಸುಮಾರು 27 ವಿಶ್ವವಿದ್ಯಾಲಯಗಳ ಕುಲಪತಿಗಳು ಒಮ್ಮೆಲೆ ಚಕಿತರಾದರು. ಕಾರಣವಿಷ್ಟೆ ರಾಜಭವನದ ಸಿಬ್ಬಂದಿಯೊಬ್ಬರು ಕುಲಪತಿಗಳ ಕಾರಿಗೆ ರಾಜ್ಯಪಾಲರ ಜೀವನಚರಿತ್ರೆ ಪುಸ್ತಕಗಳ 2 ದೊಡ್ಡ ಬಾಕ್ಸ್‌ಗಳನ್ನು ತಂದಿಟ್ಟರು. ಜೊತೆಗೆ 68,383 ರೂಪಾಯಿ ಮೊತ್ತದ ಬಿಲ್‌ಗಳನ್ನು ಕೂಡ. ಹೀಗೆ ಆ ಪುಸ್ತಕಗಳನ್ನು ಖರೀದಿಸುವಂತೆ ತಾಕೀತು ಮಾಡಲಾಗಿದೆ.

ಇದನ್ನೂ ಓದಿ: 3 ನೇ ಬಾರಿ ಸದನ ನಡೆಸುವ ಪ್ರಸ್ತಾಪ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ!

ರಾಜ್ಯಪಾಲರ ಜೀವನ ಚರಿತ್ರೆಯನ್ನು ಗೋವಿಂದ ರಾಮ್ ಜೈಸ್ವಾಲ್ ಮತ್ತು IIME ಜೈಪುರದ ಸಂಶೋದಕ ಡಾ.ಡಿ.ಕೆ. ಟಕ್ನೆಟ್ ರಚಿಸಿದ್ದಾರೆ.

ರಾಜ್ಯಪಾಲರ ಸಿಬ್ಬಂದಿ ನೀಡಿದ ಬಿಲ್‌ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಲಭ್ಯವಾಗಿದ್ದು 5 ವಿವಿಧ ಶೀರ್ಷಿಕೆಗಳ ಪುಸ್ತಕದ ಹೆಸರನ್ನು ಬಿಲ್‌ನಲ್ಲಿ ನಮೂದಿಸಲಾಗಿತ್ತು. 10% ರಿಯಾಯತಿ ಜೊತೆಗೆ ಹೆಚ್ಚುವರಿ ಉಚಿತ ಪ್ರತಿಗಳನ್ನು ನೀಡಿರುವ ಮಾಹಿತಿ ರಶೀದಿಯಲ್ಲಿದೆ. ಕುಲಪತಿಗಳೆಲ್ಲ ತಮ್ಮ ನಿವಾಸವನ್ನು ಸೇರಿದ ಮೇಲೆ ಇನ್ನೂ ಒಂದು ಆಶ್ಚರ್ಯ ಅವರಿಗೆ ಕಾದಿತ್ತು. ಅದೇನೆಂದರೆ ರಾಜ್ಯಪಾಲರ ಜೀವನ ಚರಿತ್ರೆಯನ್ನು ಹೊರತುಪಡಿಸಿ ಬಿಲ್‌ನಲ್ಲಿ ನಮೂದಿಸಲಾದ ಯಾವ ಪುಸ್ತಕವೂ ಬಾಕ್ಸ್‌ನಲ್ಲಿ ಇರಲಿಲ್ಲ. 3999/- ಬೆಲೆಯ ಕಲರಾಜ್‌ ಮಿಶ್ರಾ ಜೀವನ ಚರಿತ್ರೆಯ ಪ್ರತಿಗಳು ಮಾತ್ರ ಕಾರ್ಟ್‌ನಲ್ಲಿ ಇದ್ದವು.

ಇದನ್ನೂ ಓದಿ: ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…

ರಾಜಸ್ಥಾನ ಪಬ್ಲಿಕ್‌ ಪ್ರೊಕ್ಯುರ್‌ಮೆಂಟ್‌ (RTPP) ಆಕ್ಟ್‌, 2012 ಪುಸ್ತಕ ಖರೀದಿಗೆ ಸ್ಪಷ್ಟ ಮಾರ್ಗಸೂಚಿ ಮತ್ತು ನಿಬಂಧನೆಗಳನ್ನು ವಿಧಿಸಿದೆ. ಹಾಗಿದ್ದರೆ ಏಕಪಕ್ಷೀಯವಾಗಿ ಹೇಗೆ ವಿಶ್ವವಿದ್ಯಾಲಯಗಳು ರಾಜ್ಯಪಾಲರ ಪುಸ್ತಕವನ್ನು ನೇರವಾಗಿ ಖರೀದಿಸಲು ಸಾಧ್ಯ? ತಂತ್ರಜ್ಞಾನ, ವೈದ್ಯಕೀಯ, ಸಂಗೀತ, ಕೃಷಿ ಸೇರಿದಂತೆ ಭಿನ್ನ ಭಿನ್ನ ವಿಷಯಗಳಿಗೆ ಸ್ಥಾಪಿತವಾದ ಈ ವಿಶ್ವವಿದ್ಯಾಲಯಗಳು ದೊಡ್ಡ ಪ್ರಮಾಣದಲ್ಲಿ ರಾಜ್ಯಪಾಲರ ಜೀವನಚರಿತ್ರೆಯನ್ನು ಏಕೆ ಖರೀದಿಸಬೇಕು ಎಂಬ ಚರ್ಚೆ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಆರಂಭವಾಗಿದೆ.

ರಾಜಭವನ ಅಧಿಕಾರಿಗಳು ಮತ್ತು ಕಲರಾಜ್ ಮಿಶ್ರಾ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಪುಸ್ತಕ ಮಾರಾಟದಿಂದ ಬಂದ ಹಣವನ್ನು ಸಂಶೋಧನೆಗೆ ವಿನಿಯೋಗಿಸಲಾಗುತ್ತದೆಯೇ ಹೊರತು ವಯಕ್ತಿಕ ಬಳಕೆಗಾಗಿ ಅಲ್ಲ ಎಂದು ರಾಜ್ಯಪಾಲರು ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕಲರಾಜ್‌ ಮಿಶ್ರಾ ಅವರ ಜೀವನ ಚರಿತ್ರೆಯ ಪುಸ್ತಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗಿನ ಸುದೀರ್ಘ ಜೀವನ ಪ್ರಯಾಣವನ್ನು ಕಲರಾಜ್‌ ಮಿಶ್ರಾ ಅವರು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಮತ್ತು ಭಾರತೀಯ ಜನಸಂಘದ ಅಧ್ಯಾಯಗಳು ಅಲ್ಲಲ್ಲಿ ಬಂದು ಹೋಗುತ್ತವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುಸ್ತಕದ ಕುರಿತಾಗಿ ಮೆಚ್ಚುಗೆಯ ವಿಮರ್ಶೆಯನ್ನು ಬರೆದಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಶಾಂದಾರ್‌ ಕೃತಿ (wonderful book) ಎನ್ನುವ ಮೂಲಕ ಪುಸ್ತಕದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ರಾಜ್ಯಪಾಲರ ಜೀವನ  ಕೃತಿ ರಾಜಕೀಯದಿಂದ ಹೊರತಾಗಿಲ್ಲ. ಅವರ ಜೀವನದ ಅನುಭವಗಳಿಗೆ ಮಾತ್ರ ಸೀಮಿತಿವಾಗಿಲ್ಲ. ಪುಸ್ತಕದ 116 ನೇ ಪುಟದಲ್ಲಿ ಬಿಜೆಪಿಯ ಜಾಹೀರಾತನ್ನು ಸೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಯಾಗಿ ನಿಂತು ನವ ಭಾರತ ಕಟ್ಟಲು ಕೈಜೋಡಿಸಿ ಎಂದು ಮನವಿ ಮಾಡುವ ಚಿತ್ರದಲ್ಲಿ ಬಿಜೆಪಿಯ ಕಮಲದ ಗುರುತು ದೊಡ್ಡದಾಗಿ ಅಚ್ಚಾಗಿದೆ.

‘ನವ ಭಾರತ ನಿರ್ಮಾಣದ ಅಭಿಯಾನ ಬೆಂಬಲಿಸೋಣ, ಪಕ್ಷ ಸೇರಿ ಮತ್ತು ಈ ಅಭಿಯಾನದಲ್ಲಿ ನಮ್ಮ ಕೈಜೋಡಿಸಿ. ಒಂದೇ ಭಾರತ ಶ್ರೇಷ್ಠ ಭಾರತ’ ಎಂಬ ಸಾಲುಗಳು ಜಾಹೀರಾತಿನಲ್ಲಿ ಕಂಡು ಬರುತ್ತದೆ.

ರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯ ಪುಟ ಸಂಖ್ಯೆ 116 ರಲ್ಲಿ ನೀಡಲಾದ ಬಿಜೆಪಿ ಜಾಹೀರಾತು

ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವ ವ್ಯಕ್ತಿ ರಾಜ್ಯಪಾಲರ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ ಎಂಬ ಆರೋಪ ವಿಶ್ವವಿದ್ಯಾಲಯಗಳಿಂದ ಕೇಳಿಬಂದಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಯದ್ದು ಅಸ್ಥಿರ ಮತ್ತು ಅಪಕ್ವ ಗುಣ: ಆತ್ಮಚರಿತ್ರೆಯಲ್ಲಿ ಒಬಾಮ

ರಾಜ್ಯಪಾಲರಿಗೆ ಹಿಂದೆ ಬಿಜೆಪಿ, RSS ಜೊತೆ ದೀರ್ಘ ಒಡನಾಟವಿರಬಹದು. ರಾಜ್ಯಪಾಲರ ಸ್ಥಾನಕ್ಕೇರಿದ ಮೇಲೆ ತಮ್ಮ ರಾಜಕೀಯ ನಂಟನ್ನು ಮುಂದುವರೆಸುವುದು ಒಂದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಚಾರ ಮತ್ತು ಕರ್ತವ್ಯಲೋಪ. ರಾಜ್ಯಪಾಲರಾದವರು ವಿಶ್ವವಿದ್ಯಾಲಯಗಳ ಗೌರವ ಕುಲಪತಿಗಳಾಗಿರುತ್ತಾರೆ. ತಮ್ಮ ಈ ಪುಸ್ತಕದ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಗೌರವ ಕುಲಪತಿಗಳು ಯಾವ ಸಂದೇಶವನ್ನು ನೀಡ ಬಯಸುತ್ತಾರೆ? ಎಂಬ ಪ್ರಶ್ನೆಯನ್ನು ಮತ್ತೊಬ್ಬ ಕುಲಪತಿಗಳು ಕೇಳಿದ್ದಾರೆ.

ಇಂಟರ್‌ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಎಂಟರ್‌ಪ್ರೇನರ್‌ಶಿಪ್ (IIME) ಜೈಪುರದ ಖಾತೆಗೆ ಪುಸ್ತಕದ ಹಣ ಸಂದಾಯ ಮಾಡುವಂತೆ ರಾಜಭವನದ ಅಧಿಕಾರಿಗಳು ಕುಲಪತಿಗಳಿಗೆ ಸೂಚಿಸಿದ್ದಾರೆ. IIME ಜೈಪುರ ವಿಜ್ಞಾನ ತಂತ್ರಜ್ಞಾನ ಇಲಾಖೆಯಡಿಯ ಸ್ವಾಯತ್ತ ಶಿಕ್ಷಣ ಸಂಸ್ಥೆ. ಜೀವನ ಚರಿತ್ರೆಯ ಸಹ ಬರಹಗಾರ ಡಾ. ಡಿ.ಕೆ. ಟಕ್ನೆಟ್ ಹಿಂದೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಡಿ.ಕೆ. ಟಕ್ನೆಟ್‌ ಪತ್ನಿ ಸುಜಾತಾ ಟಕ್ನೆಟ್‌ IIME ಯಲ್ಲಿಯೇ ಮುಖ್ಯ ಸಂಶೋಧಕರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಲಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಗೆ ರಾಜ್ಯಪಾಲರ ಜೀವನ ಚರಿತ್ರೆಯನ್ನು ಪ್ರಕಟಿಸಲು ಸಾಧ್ಯ ಎಂಬುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸ್ವಾರಸ್ಯವೆಂದರೆ ರಾಜಭವನದ ಸಿಬ್ಬಂದಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ನೀಡಿದ ಪುಸ್ತಕದ ರಶೀದಿಯಲ್ಲಿ ಇನ್ನೂ ಎರಡು ಪುಸ್ತಕಗಳು ಸೇರಿವೆ. ಅವು IIME ಜೈಪುರ ಸಂಸ್ಥೆ 2020 ರಲ್ಲಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಿದ್ದ ಪುಸ್ತಕಗಳು. ಒಂದು ಜೈಪುರ್ ಜೆಮ್‌ ಆಫ್ ಇಂಡಿಯಾ ಮತ್ತು ಮಾರ್ವಾಡಿ ಹೆರಿಟೇಜ್ ಪುಸ್ತಕಗಳು ಅವು. ಈ ಪುಸ್ತಕಗಳು 4,950 ರೂಪಾಯಿ ಮತ್ತು 3,200 ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದ್ದು ರಾಜ್ಯಪಾಲರ ಜೀವನಚರಿತ್ರೆಯ ಜೊತೆಗೆ ಉಳಿದ ಪುಸ್ತಕಗಳ ಹಣವನ್ನೂ ಪಾವತಿಸುವಂತೆ ವಿಶ್ವವಿದ್ಯಾಲಯಗಳಿಗೆ ಹೇಳಲಾಗಿದೆ.

ಮೂಲ: ದಿ ವೈರ್‌

ಅನುವಾದ : ರಾಜೇಶ್‌ ಹೆಬ್ಬಾರ್


ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...