Homeಮುಖಪುಟ3 ನೇ ಬಾರಿ ಸದನ ನಡೆಸುವ ಪ್ರಸ್ತಾಪ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ!

3 ನೇ ಬಾರಿ ಸದನ ನಡೆಸುವ ಪ್ರಸ್ತಾಪ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ!

- Advertisement -
- Advertisement -

ಮೊನ್ನೆ ತಾನೇ 3 ಷರತ್ತುಗಳೊಂದಿಗೆ ರಾಜಸ್ಥಾನ ವಿಧಾನಸಭಾ ಅಧಿವೇಶನ ನಡೆಸಲು ಅನುಮತಿ ನೀಡಿದ್ದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಇಂದು ಉಲ್ಟಾ ಹೊಡೆದಿದ್ದು ಮೂರನೇ ಬಾರಿಗೆ ಅಧಿವೇಶನ ನಡೆಸಲು ನಿರಾಕರಿಸಿದ್ದಾರೆ.

ಇಂದು ಸಿಎಂ ಅಶೋಕ್ ಗೆಹ್ಲೋಟ್‌ ರಾಜ್ಯಪಾಲರನ್ನು ಅವರ ನಿವಾಸದಲ್ಲಿ ಭೇಟಿಯಾದಾಗ  ಮೂರನೇ ಬಾರಿಗೆ ಅಧಿವೇಶನ ನಡೆಸುವಂತೆ ಅವರು ಸಲ್ಲಿಸಿದ್ದ ಮನವಿಯನ್ನು ವಾಪಸ್ ಕಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ವಿಧಾನಸಭಾ ಅಧಿವೇಶನ ಕರೆಯಲು ಶಾಸಕರಿಗೆ 21 ದಿನಗಳ ಮುಂಚೆಯೇ ನೋಟಿಸ್ ನೀಡಬೇಕು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದಿಂದ ಸದನ ನಡೆಸುವುದು ಸರಿಯಲ್ಲ ಎಂಬುದು ರಾಜ್ಯಪಾಲರು ವಾದವಾಗಿದೆ.

ರಾಜ್ಯಪಾಲರು ಮನವಿ ತಿರಸ್ಕರಿಸಿದ ಕೂಡಲೇ ಪ್ರತಿಕ್ರಿಯಿಸಿರುವ ಗೆಹ್ಲೋಟ್ “ಅವರನ್ನು ಇಂದು ಭೇಟಿಯಾಗುತ್ತೇನೆ. ಅವರಿಗೆ ಏನು ಬೇಕೆಂದು ಕೇಳುತ್ತೇನೆ. 21 ದಿನಗಳ ಅಥವಾ 31 ದಿನಗಳ ನೋಟಿಸ್ ಬೇಕೆ ಎಂದು ವಿಚಾರಿಸುತ್ತೇನೆ” ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ತಾನೇ ರಾಜ್ಯಪಾಲರು ಅಧಿವೇಶನ  ನಡೆಸಲು ಅನುಮತಿ ನೀಡಿದ್ದರು. ವಿಶ್ವಾಸಮತ ಯಾಚನೆ ಮಾಡುತ್ತೀರಾ? ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳುತ್ತೀರಿ ಎಂಬ ಮೂರು ಷರತ್ತುಗಳನ್ನು ವಿಧಿಸಿದ್ದರು.


ಇದನ್ನೂ ಓದಿ: ಪ್ರಧಾನಿ ಮೋದಿಗೆ ದೂರು ನೀಡಿದ ಗೆಹ್ಲೋಟ್: ಅಧಿವೇಶನ ಕರೆದ ರಾಜ್ಯಪಾಲರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...