Homeಸಿನಿಮಾಕ್ರೀಡೆಒಲಂಪಿಯಾದಿಂದ ಟೋಕಿಯೋದವರೆಗೆ; ಇತಿಹಾಸದ ಕಣ್ಣೋಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ

ಒಲಂಪಿಯಾದಿಂದ ಟೋಕಿಯೋದವರೆಗೆ; ಇತಿಹಾಸದ ಕಣ್ಣೋಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ

- Advertisement -
- Advertisement -

ಜಗತ್ತಿನಲ್ಲಿ ಕ್ರೀಡೆಗಳು ಅನಾದಿಕಾಲದಿಂದಲೂ ನಡೆಯುತ್ತಲೇ ಇದ್ದವು. ಈ ಹಲವು ಕ್ರೀಡೆಗಳನ್ನು ಒಂದುಗೂಡಿಸಿ ಒಂದೇ ಛಾವಣಿಯಡಿ ತಂದ ಕೀರ್ತಿ ಒಲಿಂಪಿಕ್ಸ್‌ಗೆ ಸಲ್ಲುತ್ತದೆ. ಆರಂಭದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದ ಈ ಕ್ರೀಡಾ ಜಾತ್ರೆ ದಿನಕಳೆದಂತೆ ಬೆಳೆಯುತ್ತಾ ಸಾಗಿದೆ. ಬೇರೆ ಬೇರೆ ದೇಶಗಳು ಈ ವಿಶ್ವ ಕ್ರೀಡಾಕೂಟಕ್ಕೆ ಆತಿಥ್ಯ ನೀಡಿದ್ದು, ಈ ಕ್ರೀಡಾಕೂಟದ ಸಂದರ್ಭದಲ್ಲಿ ತಮ್ಮ ಸಂಸ್ಕೃತಿಯನ್ನು ವಿಶ್ವದ ಮುಂದೆ ಅನಾವರಣಗೊಳಿಸುತ್ತವೆ ಕೂಡ.

ಗ್ರೀಕರು ಜಗತ್ತಿಗೆ ನೀಡಿದ ಹಲವು ಅಪೂರ್ವ ಸಾಂಸ್ಕೃತಿಕ ಕಾಣಿಕೆಗಳಲ್ಲಿ ಒಲಿಂಪಿಕ್ಸ್ ಮಹತ್ವದ್ದು. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಆಗಲೂ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಒಲಿಂಪಿಕ್ಸ್ ಕ್ರೀಡಾಕೂಟಗಳು ನಡೆಯುತ್ತಿದ್ದವು. ಆರಂಭದಲ್ಲಿ ಕೆಲವೇ ಕೆಲವು ಕ್ರೀಡೆಗಳು ಮಾತ್ರ ಒಲಿಂಪಿಕ್ಸ್‌ನ ಒಂದು ದಿನದ ಕ್ರೀಡಾ ಜಾತ್ರೆಯಲ್ಲಿ ನಡೆಯುತ್ತಿದ್ದವು.

ಗ್ರೀಸ್‌ನ ಒಲಂಪಿಯಾ ಬಯಲು ಪ್ರದೇಶ ಧಾರ್ಮಿಕ ಕೇಂದ್ರ. ಅಲ್ಲಿನ ಜ್ಯೂ ಧರ್ಮೀಯರ ದೇವಸ್ಥಾನ ಜಗತ್ತಿನ ಪ್ರಾಚೀನ ಏಳು ಅದ್ಭುತಗಳಲ್ಲಿ ಒಂದು. ಈ ಸ್ಥಳದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಏರ್ಪಡಿಸುತ್ತಿದ್ದ ಕ್ರೀಡೆಗಳಿಗೆ ಒಲಿಂಪಿಕ್ಸ್ ಎಂದು ಹೆಸರಿಸಲಾಯಿತು. ಒಲಿಂಪಿಕ್ಸ್‌ನಿಂದ ಮುಂದಿನ ಒಲಿಂಪಿಕ್ಸ್ ತನಕ ನಾಲ್ಕು ವರ್ಷಗಳ ಅವಧಿಗೆ “ಒಲಿಂಪಿಯಾಡ್” ಎಂದು ಹೆಸರು. ಈ ಕ್ರೀಡಾಕೂಟದಲ್ಲಿ ಆಗಿನ ರಾಜ ಮಹರಾಜರು ಸಹ ಸ್ಪರ್ಧಿಸುತ್ತಿದ್ದರು. ಈ ಕ್ರೀಡಾಕೂಟದಲ್ಲಿ ಆಗ ಪುರುಷರಿಗಷ್ಟೇ ಅವಕಾಶವಿತ್ತು.

PC : ThoughtCo, (ಬೇರನ್ ಪಿಯರಿ ಕೂಬರ್ತಿ)

19ನೇ ಶತಮಾನದಲ್ಲಿ ಫ್ರಾನ್ಸಿನ ಬೇರನ್ ಪಿಯರಿ ಕೂಬರ್ತಿ ಆಧುನಿಕ ಒಲಿಂಪಿಕ್ಸ್ ನಡೆಯಲು ಕಾರಣಿಕರ್ತರು. ವಸ್ತುಪ್ರದರ್ಶನವೊಂದರಲ್ಲಿ ಒಲಿಂಪಿಕ್ಸ್‌ನಲ್ಲಿ ಬಳಸುತ್ತಿದ್ದ ಪರಿಕರಣಗಳನ್ನು ನೋಡಿದ ಇವರು ಇದಕ್ಕೆ ಮರುಜೀವ ನೀಡಬೇಕೆಂದು ಕನಸು ಕಂಡರು. ಪರಿಣಾಮ, ಅವರ ಹಲವು ವರ್ಷಗಳ ಪ್ರಯತ್ನ ಯಶಸ್ಸು ಕಂಡಿತು. ಇವರೇ 1984ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹುಟ್ಟುಹಾಕಿದರು. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಫ್ರಾನ್ಸ್‌ನಲ್ಲಿ ನಡೆಸುವ ಯೋಜನೆ ಇವರದ್ದಾಗಿತ್ತು. ಆದರೆ, ಗ್ರೀಸ್ ಜನರ ಒತ್ತಾಯದ ಮೇರೆಗೆ ಈ ಕ್ರೀಡಾಕೂಟವು ಗ್ರೀಸ್‌ನಲ್ಲಿ 1896ರಲ್ಲಿ ನಡೆಯಿತು.

ಬಿಳಿಬಣ್ಣದ ಒಲಿಂಪಿಕ್ ಧ್ವಜದಲ್ಲಿ ಐದು ವರ್ತುಲಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಕೆಂಪು, ನೀಲಿ, ಹಸಿರು, ಹಳದಿ ಹಾಗೂ ಕಪ್ಪು ವರ್ಣಗಳ ಐದು ವೃತ್ತಗಳು ಕೂಡಿರುತ್ತವೆ. ಈ ಐದು ವರ್ತುಲಗಳು ಜಗತ್ತಿನ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ.

ಪ್ರತಿ ಒಲಿಂಪಿಕ್ಸ್ ಕ್ರೀಡಾಕೂಟದ ಸ್ವಲ್ಪ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೀಪ ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳನ್ನು ದಾಟಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು.

1896ರಲ್ಲಿ ಮೊಟ್ಟಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ಆಯೋಜಿಸುವ ಮೂಲಕ ಮತ್ತೆ ಜಾಗತಿಕ ಮಟ್ಟದ ಕ್ರೀಡಾಕೂಟದ ಪರಂಪರೆ ಪುನರುತ್ಥಾನಗೊಂಡಿತು. ಮೊದಲ ಆಧುನಿಕ ಒಲಿಂಪಿಕ್ಸ್ ಕೂಟದಲ್ಲಿ 14 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

PC : Indiatimes, (ನಾರ್ಮನ್ ಪ್ರಿಚರ್ಡ್)

ಪ್ಯಾರಿಸ್‌ನಲ್ಲಿ 1900ರಲ್ಲಿ ಒಲಿಂಪಿಕ್ಸ್ ನಡೆಯಿತು. ಆದರೆ ಅಥೆನ್ಸ್‌ನಂತಹ ಉತ್ಸಾಹ ಈ ಕ್ರೀಡಾಕೂಟದಲ್ಲಿ ಇರಲಿಲ್ಲ. ನಂತರ ನಡೆದ ಒಲಿಂಪಿಕ್ಸ್‌ಗಳಲ್ಲಿ ಅಮೆರಿಕ ಪ್ರಾಬಲ್ಯ ಮೆರೆಯಿತು. 1900ರ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ತನ್ನ ರಜೆ ಕಳೆಯಲೆಂದು ಪ್ಯಾರೀಸ್‌ಗೆ ತೆರಳಿದ್ದ ಆಂಗ್ಲೋ-ಇಂಡಿಯನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಭಾರತವನ್ನು ಪ್ರತಿನಿಧಿಸಿ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು. ಮುಂದಿನ ದಿನಗಳಲ್ಲಿ ಈ ಸಾಧನೆಯನ್ನು ಅವರ ಮಾತೃದೇಶಕ್ಕೆ ಅರ್ಪಿಸಲಾಯಿತು. 1908 ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಆಟಗಾರರು ತಮ್ಮ ದೇಶದ ಧ್ವಜದೊಂದಿಗೆ ಕ್ರೀಡಾಂಗಣದಲ್ಲಿ ಮೆರವಣಿಗೆ ನಡೆಸಿದರು.

1912ರಲ್ಲಿ ಸ್ಟಾಕ್ಹೋಮ್‌ನಲ್ಲಿ ಒಲಿಂಪಿಕ್ಸ್ ನಡೆಯಿತು ಮತ್ತು ವಿಶ್ವ ಯುದ್ಧದ ನೆರಳು ಸಹ ಈ ಆಟಗಳ ಮೇಲೆ ಬಿದ್ದಿತು. ಹೀಗಾಗಿ ಮೊದಲನೆಯ ಮಹಾಯುದ್ಧದ ನಂತರ 1920 ರಲ್ಲಿ ಬೆಲ್ಜಿಂಯ್‌ನ ಏಂಟ್ವರ್ಪ್‌ನಲ್ಲಿ ಒಲಿಂಪಿಕ್ಸ್ ನಡೆಯಿತು.

ಒಲಿಂಪಿಕ್ಸ್ ಕ್ರೀಡಾಕೂಟವು ಕಂಡಿರುವ ಯಶಸ್ಸು ಮತ್ತು ಮೆಚ್ಚುಗೆಗಳ ಜೊತೆಗೆ, ಅದು ಹಲವು ಮಿತಿಗಳನ್ನೂ ಹೊಂದಿದೆ. ಇದುವರೆಗೂ ನಡೆದಿರುವ ಒಲಿಂಪಿಕ್ಸ್ ಕ್ರೀಡಾಕೂಟಗಳ ಪೈಕಿ ಹೆಚ್ಚಿನವು ಉತ್ತರ ಅಮೆರಿಕ ಅಥವಾ
ಯುರೋಪ್‌ನಲ್ಲಿಯೇ ಆಯೋಜಿಸಲ್ಪಟ್ಟಿವೆ. ಕೆಲವೇ ಕೆಲವು ಬಾರಿ ಮಾತ್ರ ವಿಶ್ವದ ಇತರ ಭಾಗದ ದೇಶಗಳಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಒದಗಿದೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಇದುವರೆಗೆ ಒಂದು ಬಾರಿಯೂ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸಲಾಗಿಲ್ಲ. ಭಾರತವೂ ಇದಕ್ಕೆ ಹೊರತಾಗಿಲ್ಲ.

ಅಲ್ಲದೆ, ಹಲವು ಬಾರಿ ನಾನಾ ದೇಶಗಳು ಹಲವು ಕಾರಣಗಳಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸಿವೆ. ಮಾನವ ಭ್ರಾತೃತ್ವವೇ ನಮ್ಮ ಧ್ಯೇಯ ಎಂದು ಹೇಳಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ರಾಜಕೀಯ ಪ್ರಭಾವದಿಂದ ಹೊರಗುಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಇಂತಹದ್ದೇ ರಾಜಕೀಯ ಕಾರಣಗಳಿಂದಾಗಿ ಸುಮಾರು ಬಾರಿ ಕೆಲವು ದೇಶಗಳು ಕ್ರೀಡಾಕೂಟವನ್ನು ಬಹಿಷ್ಕರಿಸಿದವು. 1956ರ ಮೆಲ್ಬರ್ನ್ ಕೂಟ, 1972ರ ಮ್ಯೂನಿಕ್ ಕೂಟ, 1976ರ ಮಾಂಟ್ರಿಯಲ್ ಕೂಟ, 1980ರ ಮಾಸ್ಕೋ ಕೂಟ ಮತ್ತು 1984ರ ಲಾಸ್ ಎಂಜಲಿಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಗಳನ್ನು ಹಲವು ದೇಶಗಳು ಬಹಿಷ್ಕರಿಸಿದ್ದವು.

ವರ್ಷಗಳು ಕಳೆದಂತೆ ಒಲಿಂಪಿಕ್ಸ್‌ನಲ್ಲಿ ಗೆಲುವು ಸಾಧಿಸುವುದು ಹಲವು ದೇಶಗಳಿಗೆ ಪ್ರತಿಷ್ಠೆಯ ಸಂಗತಿಯಾಗಿ ಮಾರ್ಪಟ್ಟಿತು. ಇದು ಹಲವು ಕ್ರೀಡಾಪಟುಗಳನ್ನು ಅಡ್ಡದಾರಿಗೆ ದೂಡಿತು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು Stimulation materialಗಳನ್ನು (ಉದ್ದೀಪನ ವಸ್ತು) ಬಳಸಲು ಆರಂಭಿಸಿದರು. ಇದರಿಂದ ಬೇಸತ್ತ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿತು. ಆದರೂ, ಕ್ರೀಡಾಪಟುಗಳು ಅಡ್ಡದಾರಿ ಹಿಡಿಯುವುದನ್ನು ಸಂಪೂರ್ಣವಾಗಿ ತಡೆಯಲಾಗಿಲ್ಲ. 1988ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೆನಡದ ಬೆನ್ ಜಾನ್ಸನ್ ಎಂಬಾತ ಪುರುಷರ 100 ಮೀ. ಓಟದಲ್ಲಿ ಸ್ವರ್ಣಪದಕವನ್ನು ಗೆದ್ದಿದ್ದ. ಆದರೆ, ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆತ Stimulation materialಗಳನ್ನು ಬಳಸಿದ್ದ ಎಂದು ಗೊತ್ತಾಯಿತು.

PC : Olympics, (ಭಾರತದ ಹಾಕಿ ತಂಡ)

ಬಳಿಕ ಆತನಿಂದ ಪದಕವನ್ನು ಹಿಂಪಡೆದುಕೊಂಡು, ಆತನನ್ನು ಕ್ರೀಡೆಯಿಂದ ಬಹಿಷ್ಕರಿಸಲಾಯಿತು. ಇಂತಹ ಅಡ್ಡದಾರಿ ಹಿಡಿಯುವ ವಿಚಾರದಲ್ಲಿ ಭಾರತೀಯ ಕ್ರೀಡಾಪಟುಗಳೂ ಹೊರತಾಗಿರುವುದಿಲ್ಲ.ಭಾರತ ಪ್ರತಿ ಒಲಿಂಪಿಕ್ಸ್‌ಗೂ ತಯಾರಿ ಮಾಡಿಕೊಳ್ಳುತ್ತಾ ಆಟಗಾರರ ಸಂಖ್ಯೆಯನ್ನು ವೃದ್ಧಿಸುತ್ತಾ ಸಾಗಿತು. ಆರಂಭದಲ್ಲಿ ಭಾರತದ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಭಾರಿ ಚಿನ್ನದ ಪದಕದ ಸಾಧನೆ ಮಾಡಿದೆ. 1928, 1932, 1936, 1948, 1952, 1956, 1964ರಲ್ಲಿ ಸ್ವರ್ಣದ ನಗೆ ಬೀರಿದೆ.

1960ರಲ್ಲಿ ಭಾರತ ಹಾಕಿ ತಂಡ ಫೈನಲ್‌ನಲ್ಲಿ ಸೋತು ರಜತ ಪದಕವನ್ನು ತನ್ನದಾಗಿಸಿಕೊಂಡಿದೆ. 1952ರ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಭಾರತದ ಕೆ.ಡಿ ಜಾಧವ ಕಂಚು ಗೆದ್ದ ಸಾಧನೆ ಮಾಡಿದ್ದಾರೆ. 1968, 1972ರಲ್ಲಿ ಬೆಳ್ಳಿ ಗೆದ್ದಿದ್ದ ಭಾರತ ಹಾಕಿ ತಂಡ, 1980ರಲ್ಲಿ ಚಿನ್ನದ ನಗೆ ಬೀರಿತು.

ಬಹು ವರ್ಷಗಳ ಕಾಯುವಿಕೆ ಬಳಿಕ ಭಾರತ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕವನ್ನು 1996ರ ಒಲಿಂಪಿಕ್ಸ್‌ನಲ್ಲಿ ಪಡೆಯಿತು. ಟೆನಿಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಕಂಚು ಗೆದ್ದರು. ಸಿಡ್ನಿಯಲ್ಲಿ ನಡೆದ 2000ದ ಒಲಿಂಪಿಕ್ಸ್ ಭಾರತೀಯ ಪಾಲಿಗೆ ಹೆಮ್ಮೆಯ ಕ್ಷಣ. ಈ ಒಲಿಂಪಿಕ್ಸ್ ಭಾರತದ ಹೆಮ್ಮೆಯ ವೇಟ್ ಲಿಫ್ಟರ್ ಕಣಂ ಮಲ್ಲೇಶ್ವರಿ 69 ಕೆ.ಜಿ ವಿಭಾಗದಲ್ಲಿ ಕಂಚಿಗೆ ಕೊರಳೊಡ್ಡಿ, ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವವನ್ನು ಪಡೆದರು. ಬಳಿಕ ಅಥೆನ್ಸ್‌ನಲ್ಲಿ ನಡೆದ ಕ್ರೀಡಾಕೂಟದ ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ರಾಜವರ್ಧನ್ ಸಿಂಗ್ ರಾಥೋಡ್ ಅವರು ಬೆಳ್ಳಿ ನಗೆ ಬೀರಿದರು.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ಎಂದೂ ಮಾಡದ ಸಾಧನೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮಾಡಿದರು. ಇಷ್ಟು ಒಲಿಂಪಿಕ್ಸ್‌ನಲ್ಲಿ ಭಾರತ ಭಾಗವಹಿಸಿದರೂ, ಒಂದೇ ಬಾರಿ ಎರಡು ಪದಕಗಳನ್ನು ಗೆದ್ದಿರಲಿಲ್ಲ. ಆದರೆ, ಇದೇ ಒಲಿಂಪಿಕ್ಸ್‌ನಲ್ಲಿ ಭಾರತ ಮೂರು ಪದಕ ತನ್ನದಾಗಿಸಿಕೊಂಡಿತು. ಅದರಲ್ಲಿ ಖ್ಯಾತ ಶೂಟರ್ ಅಭಿನವ್ ಬಿಂದ್ರಾ ಅವರು ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಬಂಗಾರ ಪಡೆದು ಬೀಗಿದರು. ವೈಯಕ್ತಿಕ ವಿಭಾಗದಲ್ಲಿ ಭಾರತೀಯ ಕ್ರೀಡಾ ಪಟು ಮೊದಲ ಬಾರಿಗೆ ಸ್ವರ್ಣ ಸಾಧನೆ ಮಾಡಿದರು. ಇದೇ ಒಲಿಂಪಿಕ್ಸ್‌ನಲ್ಲಿ ವಿಜೇಂದ್ರ ಸಿಂಗ್ (ಬಾಕ್ಸಿಂಗ್) ಹಾಗೂ ಸುಶೀಲ್ ಕುಮಾರ್ (ಕುಸ್ತಿ) ಕಂಚು ಪಡೆದರು.

ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕಗಳನ್ನು ಮಡಿಲಿಗೆ ಹಾಕಿಕೊಂಡಿತು. ಇದೇ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ 66 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪಡೆದು, ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ದಾಖಲೆ ಬರೆದರು.

ಲಂಡನ್ ಒಲಿಂಪಿಕ್ಸ್‌ಗೆ ಹೋಲಿಸಿದರೆ, ರಿಯೋ-ಡಿ-ಜನೈರೋದಲ್ಲಿ ಭಾರತದ ಪ್ರದರ್ಶನ ನೀರಸವಾಗಿತ್ತು. ಆದರೆ ಆಸೆಯ ಕಿರಣಗಳು ಹೊತ್ತಿದವು. ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಬೆಳ್ಳಿ ಹಾಗೂ ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಕಂಚು ಗೆದ್ದು ವಿಜೃಂಭಿಸಿದರು.

ವರ್ಷಗಳು ಕಳೆದಂತೆ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಿಕೆ ಹೆಚ್ಚಾಯಿತು. ಇದುವರೆಗೂ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟಾರೆ 9 ಚಿನ್ನ, 7 ಬೆಳ್ಳಿ, 12 ಕಂಚು ಪಡೆದಿದ್ದು ಒಟ್ಟು 28 ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

2020ರಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಎಲ್ಲ ದೇಶಗಳು ಭರದ ಸಿದ್ಧತೆ ನಡೆಸಿರುವಾಗಲೇ, ಕೋವಿಡ್-19 ಎಲ್ಲ ದೇಶಗಳನ್ನು ಬಹುವಾಗಿ ಕಾಡಿತು. ಅಲ್ಲದೆ ವಿಶ್ವದ ಪ್ರಸಿದ್ಧ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು. ಇದೇ ಸಾಲಿಗೆ ಒಲಿಂಪಿಕ್ಸ್ ಸಹ ಸೇರಿತು.

PC : Olymoics (ಕರ್ಣಂ ಮಲ್ಲೇಶ್ವರಿ)

ಈ ಬಾರಿಯೂ ಕೊರೊನಾ ಕರಿನೆರಳಿನ ಮಧ್ಯ ಒಲಿಂಪಿಕ್ಸ್ ಆಯೋಜಿಸುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಮೆಟ್ಟಿ ನಿಲ್ಲಲು ಸಂಘಟನಾ ಸಮಿತಿ ಹಲವು ಯೋಜನೆಗಳನ್ನು ಹಮ್ಮಿಕೊಂಡರೂ, ಕ್ರೀಡಾ ಗ್ರಾಮದಲ್ಲಿ ಕೊರೊನಾ ಪ್ರಕರಣ ಬೆಳಕಿಗೆ ಬಂದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ಭಯಾನಕ ರೋಗದ ಭಯದಿಂದ ಈಗಾಗಲೇ ಹಲವು ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ.

ಈ ಬಾರಿಯೂ ಭಾರತ ಹಲವು ವಿಭಾಗಗಳಲ್ಲಿ ಪದಕದ ಕನಸು ಕಾಣುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂಸಿ ಮೇರಿ ಕೋಮ್ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳು. ಆಗಸ್ಟ್ 8ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ 2018ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಮತ್ತು ಭಾರತದ ಪರ ಪದಕ ಭರವಸೆ ಹುಟ್ಟಿಸಿರುವ ಭಜರಂಗ್ ಪುನಿಯಾ ಅವರು ಧ್ವಜ ಹಿಡಿಯಲಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಸ್ಟಾರ್ ಆಟಗಾರರು ಅಖಾಡ ಪ್ರವೇಶಿಸಲಿದ್ದು, ಯಾರು ಪೋಡಿಯಂ ಹತ್ತುತ್ತಾರೆ ಎಂದು ಕಾದುನೋಡಬೇಕು. ಅಲ್ಲದೆ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಭಾರತದ ಹಾಕಿ ತಂಡ ಬಲಾಢ್ಯವಾಗಿದ್ದು, ಪದಕದ ಬರವನ್ನು ನೀಗಿಸುತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

ಸುನಿಲ್ ಸಿರಸಂಗಿ

ಸುನಿಲ್ ಸಿರಸಂಗಿ
ಹಿರಿಯ ಪತ್ರಕರ್ತ ಸುನಿಲ್ ಅವರು ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದವರು. ಕ್ರೀಡೆ, ಸಿನೆಮಾ ಮತ್ತಿತರ ವಲಯಗಳ ವರದಿಗಾರಿಕೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಒಲಂಪಿಕ್ ಅಂಗಳಕ್ಕೆ ಟಿಕೆಟ್‌ ಕಲೆಕ್ಟರ್‌ : ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...