- Advertisement -
- Advertisement -
ಇಂದು ನಡೆದ ಟೋಕಿಯೋ ಒಲಂಪಿಕ್ಸ್ ಪೂಲ್ ‘ಎ’ ಹಾಕಿ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವು ಅತಿಥೆಯ ಜಪಾನ್ ವಿರುದ್ಧ 5-3 ಅಂತರದಲ್ಲಿ ಸುಲಭ ಜಯ ಸಾಧಿಸಿತು.
ಪಂದ್ಯದ ಆರಂಭದಿಂದಲೂ ಹಿಡಿತ ಹೊಂದಿದ್ದ ಭಾರತ ಒಲಪಿಂಕ್ಸ್ ಪೂಲ್ ‘ಎ’ ನಲ್ಲಿ ಸತತ ಮೂರನೇ ಜಯ ದಾಖಲಿಸಿತು. ಈಗಾಗಲೇ ಕ್ವಾಟರ್‌ಫೈನಲ್ ಪ್ರವೇಶಿಸಿರುವ ಭಾರತವು ಈ ಗೆಲುವಿನೊಂದಿಗೆ ಪೂಲ್ ಎ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ.
ಇಂದಿನ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತದ ಪರವಾಗಿ ಗುರ್ಜಂತ್ ಎರಡು ಗೋಲು ಗಳಿಸಿದರೆ ನೀಲಕಂಠ ಶರ್ಮಾ, ಹರ್ಮನ್ ಪ್ರೀತ್ ಸಿಂಗ್, ಸಿಮ್‌ರಂಜಿತ್ ತಲಾ ಒಂದು ಗೋಲು ಗಳಿಸಿದರು.
ನ್ಯೂಜಿಲೆಂಡ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಭಾರತ ನಂತರ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತ್ತು. ತದನಂತರ ಅರ್ಜೇಂಟೀನಾ, ಸ್ಪೇನ್ ಮತ್ತು ಜಪಾನ್ ವಿರುದ್ಧ ಜಯಭೇರಿ ಬಾರಿಸಿ ಕ್ವಾಟಲ್ ಫೈನಲ್‌ಗೆ ಸಿದ್ದವಾಗಿದೆ.
ಇದನ್ನೂ ಓದಿ; ಟೋಕಿಯೊ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ತಾರೆ ‘ಪಿವಿ ಸಿಂಧು’ ಸೆಮಿಫೈನಲ್‌ಗೆ ಲಗ್ಗೆ!


