Homeರಂಜನೆಕ್ರೀಡೆಟೋಕಿಯೊ ಒಲಿಂಪಿಕ್ಸ್‌‌: ಬ್ಯಾಡ್ಮಿಂಟನ್‌ ತಾರೆ ‘ಪಿವಿ ಸಿಂಧು’ ಸೆಮಿಫೈನಲ್‌ಗೆ ಲಗ್ಗೆ!

ಟೋಕಿಯೊ ಒಲಿಂಪಿಕ್ಸ್‌‌: ಬ್ಯಾಡ್ಮಿಂಟನ್‌ ತಾರೆ ‘ಪಿವಿ ಸಿಂಧು’ ಸೆಮಿಫೈನಲ್‌ಗೆ ಲಗ್ಗೆ!

- Advertisement -
- Advertisement -

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಉತ್ತಮವಾಗಿ ಆಡುತ್ತಿದ್ದು, ಶುಕ್ರವಾರ(ಇಂದು) ನಡೆದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿಯನ್ನು 21-13, 22-20 ಅಂತರದಲ್ಲಿ ಸೋಲಿಸಿದ್ದಾರೆ.

ಈ ಮೂಲಕ ಅವರು ಸೆಮಿಫೈನಲ್‌ಗೆ  ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಬ್ಯಾಡ್ಮಿಂಟನ್‌‌ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ಸೋಲಿಸಿದ್ದರು.

ಇಂದು ಭಾರತದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಅವರು ಈ ಹಿಂದಿನ ವಿಶ್ವ ಚಾಂಪಿಯನ್‌ ಚೀನಾದ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಸೋಲಿಸಿ ಮಹಿಳಾ ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಅವರು ಭಾತರಕ್ಕೆ ಕಂಚಿನ ಪದಕವನ್ನು ಖಾತ್ರಿ ಪಡಿಸಿದ್ದಾರೆ. ಲವ್ಲಿನಾ ಅವರಿಗೆ ಚಿನ್ನದ ಪದಕ ಪಡೆಯಲು ಇನ್ನು ಎರಡು ಪಂದ್ಯಗಳು ಬಾಕಿಯಿವೆ. ಸಮೀಫೈನಲ್‌ ಪ್ರವೇಶಿಸಿರುವ ಅವರು ಒಂದು ಪಂದ್ಯವನ್ನು ಗೆದ್ದರೆ ಚಿನ್ನಕ್ಕಾಗಿ ಸೆಣಸಲಿದ್ದಾರೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಭಾರತಕ್ಕೆ 2 ನೇ ಪದಕ ಖಚಿತ!

ಏತನ್ಮಧ್ಯೆ, ಭಾರತದ ಮನು ಭಾಕರ್ ಮತ್ತು ರಾಹಿ ಸರ್ನೋಬತ್ ಅವರು 25 ಮೀಟರ್ ಪಿಸ್ತೂಲ್ ಮಹಿಳಾ ಅರ್ಹತಾ ಸ್ಪರ್ಧೆಯಿಂದ ಹೊರಬಿದ್ದರು. ಇವರಿಬ್ಬರು ಸ್ಪರ್ಧೆಯಲ್ಲಿ ಅರ್ಹತೆ ಪಡೆಯಲು ವಿಫಲರಾದರು.

ಮಹಿಳಾ ಬಿಲ್ಲುಗಾರಿಕೆ ವೈಯಕ್ತಿಕ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದ ದೀಪಿಕಾ ಕುಮಾರಿ, ದಕ್ಷಿಣ ಕೊರಿಯಾದ ಆನ್ ಸ್ಯಾನ್ ವಿರುದ್ಧ ಸೋತರು. ಗುರುವಾರ ಅವರು ಆರ್‌ಒಸಿಯ ಕ್ಸ್ನಿಯಾ ಪೆರೋವಾ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಗಳಿಸಿದ್ದರು.

ಭಾರತೀಯ ಮಹಿಳಾ ಹಾಕಿ ತಂಡವು ಮೊದಲ ಗೆಲುವನ್ನು ದಾಖಲಿಸಿದೆ. ಐರ್ಲೆಂಡ್ ವಿರುದ್ಧ 1-0 ಅಂತರದ ಗೆಲುವನ್ನು ತಂಡವು ಸಾಧಿಸಿದೆ.

ಪುರುಷರ ಸೂಪರ್‌ ಹೆವಿ ವೈಟ್‌ ಬಾಕ್ಸಿಂಗ್‌ನಲ್ಲಿ ಗುರುವಾರದಂದು ಭಾರತದ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ 4: 1 ರ ಸುತ್ತಿನಲ್ಲಿ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾನುವಾರದಂದು ಉಜ್ಬೇಕಿಸ್ತಾನದ ಬಾಖೋದಿರ್‌ ಜಲಾಲೋವ್ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: ಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್

ಜೊತೆಗೆ ಗುರುವಾರ ನಡೆದ ಪುರುಷರ ಹಾಕಿ ಪೂಲ್‌ ಎ ಪಂದ್ಯಾಟದಲ್ಲಿ ಅರ್ಜೆಂಟೀನ ವಿರುದ್ದ ಭಾರತ 3-1 ಅಂಕದಲ್ಲಿ ಗೆಲುವು ಸಾಧಿಸಿದೆ. ಇಂದು ಜಪಾನ್ ವಿರುದ್ದ ಭಾರತ ಸೆಣಸುತ್ತಿದ್ದು, ಆಟದ ಮೊದಲಾರ್ಧ ಮುಗಿದಿದ್ದು, ಭಾರತವು 2-0 ಅಂಕ ಗಳಿಸಿ ಮುನ್ನಡೆಯಲ್ಲಿದೆ.

ಇನ್ನು, ಗುರುವಾರ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಅವರು 2012 ರ ಚಾಂಪಿಯನ್‌ ದಕ್ಷಣ ಕೊರಿಯಾದ ಓಹ್ ಜಿನ್ ಹೈಕಿನ್ ಅವರನ್ನು ಸೋಲಿಸಿ ಪ್ರೀ ಕ್ವಾಟರ್‌ ಫೈನಲ್‌ಗೆ ತಲುಪಿದ್ದಾರೆ. ಅವರ ಮುಂದಿನ ಪಂದ್ಯ ಶನಿವಾರ ಜಪಾನಿನ ತಕಹಾರು ಫುರುಕವ ಅವರ ವಿರುದ್ದ ನಡೆಯಲಿದೆ.

ಟೋಕಿಯೊ ಒಲಿಂಪಿಕ್‌ನಲ್ಲಿ 49 ಕೆಜಿ ವೈಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮಣಿಪುರ ಮೂಲದ ಮಿರಾಬಾಯಿ ಚಾನು ಅವರು ಬೆಳ್ಳಿ ಗೆದ್ದುಕೊಂಡಿದ್ದರು. ಇದರ ನಂತರ ಭಾರತಕ್ಕೆ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಮೂಲಕ ಎರಡನೆ ಪದಕ ಖಚಿತಗೊಂಡಿದೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಾತಿನಿಧ್ಯ; ಅಂದು-ಇಂದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...