Homeಅಂತರಾಷ್ಟ್ರೀಯಹೊತ್ತಿ ಉರಿದ ಟರ್ಕಿ - ಕಾಡ್ಗಿಚ್ಚಿನಿಂದಾಗಿ ಸಾವಿಗೀಡಾದವರ ಸಂಖ್ಯೆ 8 ಕ್ಕೆ ಏರಿಕೆ

ಹೊತ್ತಿ ಉರಿದ ಟರ್ಕಿ – ಕಾಡ್ಗಿಚ್ಚಿನಿಂದಾಗಿ ಸಾವಿಗೀಡಾದವರ ಸಂಖ್ಯೆ 8 ಕ್ಕೆ ಏರಿಕೆ

- Advertisement -
- Advertisement -

ಟರ್ಕಿಯ ದಕ್ಷಿಣ ಕರಾವಳಿಯಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚು ಸತತ ಐದನೇ ದಿನವು ಮುಂದುವರೆದಿದ್ದು, ಕಾಡ್ಗಿಚ್ಚಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿದೆ ಎಂದು ರಾಯಿಟರ್ಸ್ ಭಾನುವಾರ ವರದಿ ಮಾಡಿದೆ.

ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಅವರು, ದಕ್ಷಿಣ ಟರ್ಕಿಯ ಪಟ್ಟಣವಾದ ಮಾನವ್‌ಗತ್‌ನಲ್ಲಿ ಭಾನುವಾರ ಕಾಡ್ಗಿಚ್ಚಿನಿಂದಾಗಿ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಗಾಯಗೊಂಡಿರುವ 10 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಟರ್ಕಿ ಕೃಷಿ ಮತ್ತು ಅರಣ್ಯ ಸಚಿವ ಬೇಕಿರ್ ಪಕ್ಡೆಮಿರ್ಲಿ ಮಾತನಾಡಿ, “ಮಾನವ್‌ಗತ್, ಮರ್ಮರಿಸ್ ಮತ್ತು ಮಿಲಸ್‌ನಲ್ಲಿ ಬೆಂಕಿ ಹೊತ್ತಿಉರಿಯುತ್ತಿದ್ದು, ಇದರಿಂದಾಗಿ ಸುತ್ತಮುತ್ತಲಿನ ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ಬುಧವಾರ ಕಾಡ್ಗಿಚ್ಚು ಆರಂಭವಾದಾಗಿನಿಂದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಭಾನುವಾರ ವರದಿಯಾದ ಎರಡು ಸಾವುಗಳಿಗೆ ಮೊದಲು, ಮಾನವ್‌ಗತ್‌ನಿಂದ ಐದು ಜನರು ಮತ್ತು ಮರ್ಮರಿಸ್‌ನ ಒಬ್ಬರು ಮೃತಪಟ್ಟಿದ್ದು ವರದಿಯಾಗಿತ್ತು.

ಕನಿಷ್ಠ 828 ಅಗ್ನಿಶಾಮಕ ವಾಹನಗಳು, 13 ವಿಮಾನಗಳು, 45 ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಬೆಂಕಿಯನ್ನು ನಿಯಂತ್ರಿಸಲು ಹೋರಾಡುತ್ತಿದೆ ಎಂದು ಪಕ್ಡೆಮಿರ್ಲಿ ಹೇಳಿದ್ದಾರೆ. ಹೆಚ್ಚುವರಿಯಾಗಿ, ನೆರೆಯ ರಾಷ್ಟ್ರಗಳಾದ ರಷ್ಯಾ, ಉಕ್ರೇನ್, ಇರಾನ್ ಮತ್ತು ಅಝರ್‌‌ಬೈಜಾನ್‌‌‌ ಅಗ್ನಿಶಾಮಕ ತಂಡಗಳನ್ನು ಕಳುಹಿಸಿದೆ. ಇದರ ಜೊತೆಗೆ ಸ್ಥಳೀಯರು ಸಹ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಮೂರು ಅಗ್ನಿಶಾಮಕ ವಿಮಾನಗಳನ್ನು ಯುರೋಪಿಯನ್ ಯೂನಿಯನ್ (ಇಯು) ಸಜ್ಜುಗೊಳಿಸಿದೆ.

ಟರ್ಕಿ ಸರ್ಕಾರವು ಬೆಂಕಿಯಿಂದ ಉಂಟಾಗುವ ಎಲ್ಲಾ ನಷ್ಟವನ್ನು ಭರಿಸಲಾಗುವುದು ಮತ್ತು ಹಾನಿಗೊಳಗಾದ ಮನೆಗಳನ್ನು ಪುನರ್ನಿರ್ಮಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದೆ.

ಈ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದಾಗಿ ಹಾನಿಗೊಳಗಾದ ಅನೇಕ ಮೆಡಿಟರೇನಿಯನ್ ದೇಶಗಳಲ್ಲಿ ಟರ್ಕಿ ಕೂಡ ಒಂದಾಗಿದೆ. ಈ ಹಿಂದೆ ಗ್ರೀಸ್, ಲೆಬನಾನ್, ಸಿರಿಯಾ, ಇಟಲಿ ಮತ್ತು ಸೈಪ್ರಸ್ ದೇಶಗಳಲ್ಲೂ ಕಾಡ್ಗಿಚ್ಚು ಸಂಭವಿಸಿತ್ತು. ಬೆಂಕಿಯಿಂದಾಗಿ ಗ್ರೀಸ್‌ನ ವಾತಾವರಣದಲ್ಲಿ ಉಷ್ಣತೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಪ್ರಶ್ನಿಸಿದ ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ: ಅವ್ಯಾಹತವಾಗಿ ನಡೆದಿದೆ ಅರಣ್ಯ ಲೂಟಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...