Homeಕರ್ನಾಟಕSSLC Result | ಎಸ್‌ಎಸ್‌ಎಲ್‌ಸಿ ರಿಸಲ್ಟ್‌‌ | 99.99% ವಿದ್ಯಾರ್ಥಿಗಳು ಪಾಸ್‌‌!

SSLC Result | ಎಸ್‌ಎಸ್‌ಎಲ್‌ಸಿ ರಿಸಲ್ಟ್‌‌ | 99.99% ವಿದ್ಯಾರ್ಥಿಗಳು ಪಾಸ್‌‌!

- Advertisement -
- Advertisement -

ಕೊರೊನಾ ನಡುವೆಯು ನಡೆದ ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 99.99% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್‌ ಸೋಮವಾರ ಹೇಳಿದ್ದಾರೆ. ಜುಲೈ 19 ಮತ್ತು 22 ರಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ನೀಡಲಾಗಿತ್ತು.

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಓರ್ವ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಿದ್ದರಿಂದ ಅವರನ್ನು ಅನುತ್ತೀರ್ಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 4,70,160 ವಿರ್ದಾರ್ಥಿಗಳು ಉತ್ತೀರ್ಣರಾದರೆ, 4,01,280 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಆರ್‌ಟಿಇ ನಿಧಿ ₹ 1.87 ಕೋಟಿ ದುರುಪಯೋಗ ಆರೋಪ – 20 ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗೆ ನೋಟಿಸ್‌

ಈ ಬಾರಿ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದರೂ ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿದವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾಹಿತಿ ನೀಡಿದ್ದಾರೆ.

ಒಟ್ಟು 157 ವಿದ್ಯಾರ್ಥಿಗಳು 625 ಅಂಕಗಳಲ್ಲಿ 625 ಅಂಕಗಳನ್ನು ಗಳಿಸಿದ್ದಾರೆ. 1,28,931 ವಿದ್ಯಾರ್ಥಿಗಳು A+ ಗ್ರೇಡ್​, 2,50,317 ವಿದ್ಯಾರ್ಥಿಗಳು A ಗ್ರೇಡ್, 2,87,694 ವಿದ್ಯಾರ್ಥಿಗಳು B ಗ್ರೇಡ್​, 1,13,610 ವಿದ್ಯಾರ್ಥಿಗಳು C ಗ್ರೇಡ್​ ಪಡೆದುಕೊಂಡಿದ್ದಾರೆ. ಸಿ ಗ್ರೇಡ್ ಪಡೆದಿರುವ 9% ರಷ್ಟು ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್​ ಮಾರ್ಕ್ಸ್​) ನೀಡಿ ಉತ್ತೀರ್ಣ ಮಾಡಲಾಗಿದೆ.

ಇದೀಗ ಎಸ್‌ಎಸ್‌ಎಲ್‌ಸಿಗೆ ನಡೆದ ಪರೀಕ್ಷೆಯ ಫಲಿತಾಂಶಗಳು ಇಂದು ಮಧ್ಯಾಹ್ನ 03:30 ಕ್ಕೆ ಹೊರ ಬೀಳಬೇಕಿತ್ತಾದರೂ, ಮಂಡಳಿಯ ವೆಬ್‌ಸೈಟ್‌ ಕ್ಯ್ರಾಶ್‌ ಆಗಿದ್ದು, ಫಲಿತಾಂಶ ವೀಕ್ಷಿಸಲು ತಡೆಯಾಗಿದೆ. ಇನ್ನು ಸ್ವಲ್ಪ ಸಮಯದಲ್ಲೇ ಅದು ಸರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ

ನೋಂದಾಯಿತ ಒಟ್ಟು ವಿದ್ಯಾರ್ಥಿಗಳಲ್ಲಿ, 99.6% ದಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಕರ್ನಾಟಕದ ಶಾಲಾ ಶಿಕ್ಷಣ ಸಚಿವರು ಇತ್ತೀಚೆಗೆ ಹೇಳಿಕೊಂಡಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದ್ದ ಸರ್ಕಾರವು ಟೀಕೆಗಳ ಹೊರತಾಗಿಯೂ, ಆಫ್‌ಲೈನ್ ಆಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಿತ್ತು. ದ್ವಿತೀಯ ಪಿಯುಸಿಯ ಫಲಿತಾಂಶಗಳು ಇತ್ತೀಚೆಗಷ್ಟೇ ಪ್ರಕಟವಾಗಿತ್ತು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಸ್ಸೆಸ್ಸೆಎಲ್ಸಿ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ. ಅವರು ಟ್ವಿಟರ್‌ನಲ್ಲಿ, “ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರುವ ಎಲ್ಲ ಮಕ್ಕಳಿಗೂ ಮತ್ತು ಅವರ ಪೋಷಕರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಲವಾರು ಸವಾಲುಗಳ ನಡುವೆಯೂ, ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದೊಂದಿಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕ ವೃಂದದವರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನೋಡುವುದು ಹೇಗೆ?

  • ಮೊದಲಿಗೆ ವಿದ್ಯಾರ್ಥಿಗಳ ರೋಲ್‌ ಅಥವಾ ರಿಜಿಸ್ಟರ್‌‌ ನಂಬರ್‌ ಅನ್ನು ತಯಾರಾಗಿಟ್ಟುಕೊಳ್ಳಿ.
  • ನಂತರ ಇಲ್ಲಿ ಕ್ಲಿಕ್ ಮಾಡಿ.
  • ಮೇಲಿನ ಲಿಂಕ್‌ಗೆ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪೇಜ್‌ ಅಲ್ಲಿ ವಿದ್ಯಾರ್ಥಿಗಳ ರಿಜಿಸ್ಟರ್‌ ನಂಬರ್‌ ತುಂಬಿಸಕು.
  • ನಂತರ ಅಲ್ಲಿ ವಿದ್ಯಾರ್ಥಿಗಳ ಜನ್ಮ ದಿನಾಂಕವನ್ನು ಕೊಟ್ಟಿರುವ ಬಾಕ್ಸ್‌ ಒಳಗೆ ತುಂಬಿಸಬೇಕು.
  • ಅದರ ನಂತರ ‘ಸಬ್‌ಮಿಟ್‌‌’ ಬಟನ್‌ಗೆ ಕ್ಲಿಕ್ ಮಾಡಬೇಕು.
  • ಸಬ್‌ಮಿಟ್‌ ನೀಡಿದ ನಂತರ ನಿಮ್ಮ ಫಲಿತಾಂಶ ಕಾಣುತ್ತದೆ.
  • ಅಲ್ಲಿಂದ ನೀವು ಅದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಬಹುದಾಗಿದೆ.

ಫಲಿತಾಂಶದ ನೇರ ಲಿಂಕ್‌ಗಳನ್ನು ಬೋರ್ಡ್ ವೆಬ್‌ಸೈಟ್‌ಗಳಾದ sslc.karnataka.gov.in ಮತ್ತು karresults.nic.in ನಲ್ಲಿ ಕೂಡಾ ಪಡೆಯಬಹುದಾಗಿದೆ.

ಎರಡು ದಿನಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ನೀಡಲಾಗಿತ್ತು. SSLC ಪರೀಕ್ಷೆಯ ಮಾದರಿ ಉತ್ತರಗಳನ್ನು ಬಿಡುಗಡೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದನ್ನು ಇಲ್ಲಿ ಕ್ಲಿಕ್ ಮಾಡಿದರೆ ನೋಡಬಹುದಾಗಿದೆ.

ಇದನ್ನೂ ಓದಿ: ಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...