ವಿದೇಶಿ ರಾಯಭಾರ ಕಚೇರಿಗಳ ಭದ್ರತೆಯು ತಾಲಿಬಾನ್‌ಗೆ ಮುಖ್ಯವಾಗಿದ್ದು, ಅವರು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತಾರೆ ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ. ತಾಲಿಬಾನ್ ಅಫಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಎರಡು ದಿನಗಳ ನಂತರ ಮಂಗಳವಾರದಂದು ಕಾಬೂಲ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಇದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಲಿಬಾನಿಗಳು ಯಾರೊಂದಿಗೂ ದ್ವೇಷವನ್ನು ಹೊಂದಿಲ್ಲ ಮತ್ತು ತಮ್ಮ ನಾಯಕನ ಆದೇಶದ ಮೇರೆಗೆ ಅವರು ಎಲ್ಲರಿಗೂ ಕ್ಷಮೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ಟೊಲೊನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ಅಫ್ಘಾನ್ ಪತನ: ಕಾಬೂಲ್‌ನಿಂದ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ
ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವಿಲ್ಲ ಎಂದು ‘ಇಸ್ಲಾಮಿಕ್ ಎಮಿರೇಟ್’ ಜಗತ್ತಿನ ಎಲ್ಲ ದೇಶಗಳಿಗೆ ಪ್ರತಿಜ್ಞೆ ಮಾಡುತ್ತಿದೆ ಎಂದು ಮುಜಾಹಿದ್ ಹೇಳಿದ್ದಾರೆ. ಅಫ್ಘಾನಿಸ್ತಾನದ ಆರ್ಥಿಕತೆ ಮತ್ತು ಜನ ಜೀವನೋಪಾಯದಲ್ಲಿ ಸುಧಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.
LIVE: The Taliban holds a news conference in Kabul.
? Latest updates: https://t.co/ZXmnmCnbM1
https://t.co/62lc8slwMS— Al Jazeera English (@AJEnglish) August 17, 2021
ಮಂಗಳವಾರ ಮುಂಜಾನೆ, ತಾಲಿಬಾನ್ ಸರ್ಕಾರಿ ಅಧಿಕಾರಿಗಳಿಗೆ ‘ಸಾಮಾನ್ಯ ಕ್ಷಮಾದಾನ’ ಘೋಷಿಸಿದ್ದು, ಅವರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ ನಂತರ, ಬಂಡುಕೋರರು 20 ವರ್ಷಗಳ ಯುದ್ಧವನ್ನು ಗೆದ್ದಿದ್ದಾರೆ ಎಂದು ಘೋಷಿಸಿದ್ದಾರೆ. ಪ್ರಸ್ತುತ ದೇಶವು ತಾಲಿಬಾನ್ ನಿಯಂತ್ರಣದಲ್ಲಿದೆ.
ಇದನ್ನೂ ಓದಿ: ಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್ ಆದ ವಿಮಾನದಿಂದ ಬಿದ್ದ ಜನರು!
ಭಾರತವು ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ ಎಂಬ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾವನ್ನು ಪರಿಚಯಿಸಿದ್ದು, ಇದು ದೇಶಕ್ಕೆ ಪ್ರವೇಶಿಸುವ ವೀಸಾ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪರಿಣಿಸಲಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕವು ಅಶಾಂತಿ, ವಿಭಜನೆ ಮತ್ತು ಒಡೆದ ಕುಟುಂಬಗಳ ಭೀಕರ ಅವ್ಯವಸ್ಥೆಯನ್ನು ಬಿಟ್ಟಿದೆ ಎಂದು ಚೀನಾ ಹೇಳಿದೆ.
ಭಾನುವಾರವಷ್ಟೇ, ತಾಲಿಬಾನ್ ಕಮಾಂಡರ್‌ಗಳು ತಾವು ಅಫ್ಘಾನ್ ಅಧ್ಯಕ್ಷರ ಅರಮನೆಯ ನಿಯಂತ್ರಣವನ್ನು ಪಡೆದುಕೊಂಡಿದ್ದೇವೆ ಎಂದು ಘೋಷಿಸಿದ್ದರು. ಮೇ 1 ರಂದು ಬಹುಪಾಲು ಅಮೆರಿಕಾ ಸೈನ್ಯವನ್ನು ಹಿಂತೆಗೆದುಕೊಂಡ ನಂತರ, ತಾಲಿಬಾನ್ ಅಫ್ಘಾನ್ ಅನ್ನು ಶೀಘ್ರವಾಗಿ ಆವರಿಸಿ, ರಾಜಧಾನಿಯನ್ನು ವಶಪಡಿಸಿಕೊಂಡಿತು.
ಇದನ್ನೂ ಓದಿ: ಅಫ್ಘಾನ್ ಪತನ: ನೆರೆ ದೇಶಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಯನ್ನು ಪರಿಶೀಲಿಸಬೇಕು – ಶರದ್ ಪವಾರ್


