ಸೋಮವಾರ (ಆಗಸ್ಟ್ 16) ಬಿಡುಗಡೆಯಾದ ಇಂಡಿಯಾ ಟುಡೇಯ “ಮೂಡ್ ಆಫ್ ದಿ ನೇಷನ್” ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದು ವರ್ಷದಲ್ಲಿ 66% ರಿಂದ 24% ಕ್ಕೆ ಇಳಿದಿದೆ.
ದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇರುವುದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ.
“ಕೊರೊನಾ ಮೊದಲ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮೋದಿಯವರನ್ನು ಜನವರಿ 2021 ರಲ್ಲಿ ಪ್ರಶಂಸಿಸಲಾಗಿತ್ತು. ಇದಕ್ಕಾಗಿ ಶೇಕಡಾ 73% ರಷ್ಟು ಜನಪ್ರಿಯತೆ ಗಳಿಸಿದ್ದರು. ಆದರೆ, ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಅವರ ಜನಪ್ರಿಯತೆಯ ಅಂಕಿ ಅಂಶವು 49% ಕ್ಕೆ ಇಳಿದಿದೆ” ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 27% ರಷ್ಟು ಜನರು ಚುನಾವಣಾ ರ್‍ಯಾಲಿಗಳು ಸೇರಿದಂತೆ ದೊಡ್ಡ ಸಭೆ-ಸಮಾರಂಭಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವೆಂದು ಹೇಳಿದ್ದಾರೆ. ಸುಮಾರು 26% ಜನರು ಕೋವಿಡ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದರಿಂದ ಕೊರೊನಾ ಅಲೆ ಹೆಚ್ಚಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: 3 ವರ್ಷದಿಂದ ಒಂದೇ ಭರವಸೆ ನೀಡುತ್ತಿರುವ ಪ್ರಧಾನಿ : ಸಂಖ್ಯೆಯನ್ನಾದರೂ ಬದಲಿಸಿ ಎಂದ ಕಾಂಗ್ರೆಸ್
ದೇಶದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವವರರ ಡೇಟಾ ಮತ್ತು ಕೊರೊನಾ ಸಾವುಗಳ ಡೇಟಾ ಬಗ್ಗೆ ಸರ್ಕಾರಿ ದತ್ತಾಂಶದಲ್ಲಿ ತಿಳಿವುದಕ್ಕಿಂತ ಹೆಚ್ಚಿನ ಕೇಸ್‌ಗಳು ಮತ್ತು ಸಾವುಗಳಾಗಿವೆ ಎಂದು 71% ರಷ್ಟು ಜನರು ಹೇಳಿದ್ದಾರೆ, ಇನ್ನು ಶೇಕಡಾ 44% ಜನರು ಈ ಆರೋಗ್ಯ ಬಿಕ್ಕಟ್ಟು ಉಂಟಾಗಲು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಾರಣವೆಂದು ಹೇಳಿದ್ದಾರೆ.
According to the just-published India Today Mood of the Nation survey, only 24% think Modi is best choice for next PM. The second choice at 11% is Yogi Adityanath. Modi as the first choice has gone down sharply from 66% a year ago to 24% now. pic.twitter.com/wKPcIfM4bd
— Shivam Vij ?? (@DilliDurAst) August 16, 2021
ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, 29% ರಷ್ಟು ಜನರು ಬೆಲೆ ಏರಿಕೆ ಮತ್ತು ಹಣದುಬ್ಬರವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ದೊಡ್ಡ ವೈಫಲ್ಯವೆಂದು ತಿಳಿಸಿದ್ದಾರೆ. ಸುಮಾರು 23% ರಷ್ಟು ಜನರು ನಿರುದ್ಯೋಗ ದರವು ಮೋದಿ ಸರ್ಕಾರದ ಎರಡನೇ ಅತಿದೊಡ್ಡ ವೈಫಲ್ಯ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ನಂತರ ಪ್ರಧಾನಿ ಸ್ಥಾನಕ್ಕೆ ಶೇಕಡಾ 11% ರಷ್ಟು ಜನರು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 10% ರೇಟಿಂಗ್ ಹೊಂದಿದ್ದು, ಪ್ರಧಾನಿ ಸ್ಥಾನಕ್ಕೆ ಮೂರನೇ ಅತ್ಯಂತ ಜನಪ್ರಿಯ ಮುಖವಾಗಿ ಹೊರಹೊಮ್ಮಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 2020 ರಲ್ಲಿ 8% ರಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ 2019 ರಲ್ಲಿ 3% ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ, 11 ರಾಜ್ಯಗಳ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆದಿತ್ಯನಾಥ್ ಏಳನೇ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಇಂಡಿಯಾ ಟುಡೇ ಸಮೀಕ್ಷೆಯನ್ನು ಜುಲೈ 10 ಮತ್ತು ಜುಲೈ 22 ರ ನಡುವೆ ನಡೆಸಿದ್ದುಉ, ಸಮೀಕ್ಷೆಯಲ್ಲಿ 14,599 ಮಂದಿ ಭಾಗವಹಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 71% ಜನರು ಗ್ರಾಮೀಣ ಪ್ರದೇಶದ ಜನರು ಮತ್ತು 29% ನಗರ ಪ್ರದೇಶದ ಜನರಾಗಿದ್ದಾರೆ. ಸಮೀಕ್ಷೆಯು 19 ರಾಜ್ಯಗಳು, 115 ಸಂಸತ್ತು ಮತ್ತು 230 ವಿಧಾನಸಭಾ ಸ್ಥಾನಗಳ ಜನರನ್ನು ಒಳಗೊಂಡಿದೆ.
ಇದನ್ನೂ ಓದಿ: ಬೇಡಿಕೆ ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ: ವರ್ತಕರಿಗೆ ಪ್ರಧಾನಿ ಸಹೋದರನ ಸಲಹೆ