Homeಕರ್ನಾಟಕಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯ ಕೋಮು ಸೂಕ್ಷ್ಮ ಊರುಗಳೆಂಬ ಆತಂಕ ಎರಡು-ಮೂರು ದಶಕದಿಂದ ಕಾಡುತ್ತಿದೆ. ವೈಯಕ್ತಿಕ ಸಣ್ಣ-ಪುಟ್ಟ ಗಲಾಟೆ ನೋಡು-ನೋಡುತ್ತಿದ್ದಂತೆ ಕೋಮು ಕಲಹವಾಗಿ ಊರೂರೆ ಹೊತ್ತಿ ಉರಿವ ಸ್ವಭಾವದ ತಾಲೂಕುಗಳಿವು! ಇಲ್ಲಿ ನಡೆದ ದೊಂಬಿ-ಗಲಭೆಗೆ ಲೆಕ್ಕವೇ ಇಲ್ಲ. ಇಂಥ ಹಿನ್ನಲೆಯ ಪುತ್ತೂರು-ಸುಳ್ಯದಲ್ಲಿ ಇದ್ದಕ್ಕಿದ್ದಂತೆ ಅನೈತಿಕ ಪೊಲೀಸ್‌ಗಿರಿ ಬಿರುಸುಗೊಂಡಿರುವುದು ಜನಸಾಮಾನ್ಯರನ್ನು ಕಂಗಾಲಾಗಿಸಿಬಿಟ್ಟಿದೆ. ಹತ್ತಿರದಲ್ಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ರಂಗತಾಲೀಮು ಇದೆಂಬ ಶಂಕೆ ಶುರುವಾಗಿದೆ. ಕೋವಿಡ್-19ರ ಸತತ ಲಾಕ್‌ಡೌನ್‌ನಿಂದ ತುತ್ತು ಕೂಳಿಗೂ ತತ್ವಾರ ಬಂದಿರುವ ಈ ಸಂದರ್ಭದಲ್ಲಿ ಕೋಮು ಗಲಭೆಯೆನಾದರೂ ಆಗಿಬಿಟ್ಟರೆ ಬದುಕು ಬರ್ಬಾದ್ ಎಂಬ ಆತಂಕದಲ್ಲಿವೆ ದುಡಿದು ತಿನ್ನುವ ಜೀವಗಳು..

ಪುತ್ತೂರು ಮತ್ತು ಸುಳ್ಯದಲ್ಲಿ ಕಳೆದೊಂದು ವಾರದಲ್ಲಿ ಒಂದರ ಹಿಂದೊಂದರಂತೆ ಎರಡು ಮತಾಂಧ ಸಂಘರ್ಷಗಳು ಆಗಿಹೋಗಿವೆ. ಈ ದುರ್ಘಟನೆ ನಂತರ ಮುಂದೇನು ಕಾದಿದೆಯೋ ಎಂಬ ಭಯಕ್ಕೆ ಜನರು ಬಿದ್ದಿದ್ದಾರೆ. ಆಗಸ್ಟ್ 15ರಂದು ಪುತ್ತೂರಿನ ಕಬಕ ಎಂಬಲ್ಲಿ ಸಂಘಪರಿವಾರಿಗಳು ಹಾಗು ಎಸ್‌ಡಿಪಿಐ ಬಳಗದ ನಡುವೆ ಗಲಾಟೆಯಾಗಿದೆ. ಕಬಕದ ಬಿಜೆಪಿ ಆಡಳಿತದ ಗ್ರಾಮ ಪಂಚಾಯತ್ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ-ಮನೆಗೆ ಸ್ವಾತಂತ್ರ್ಯ ಸಂದೇಶ ತಲುಪಿಸುವ ಹೆಸರಲ್ಲಿ ರಥಯಾತ್ರೆ ಆಯೋಜಿಸಿತ್ತು. ಈ ರಥದಲ್ಲಿ ಆರ್‌ಎಸ್‌ಎಸ್ ದಿಗ್ಗಜನಾಗಿದ್ದ ಸಾರ್ವರ್ಕರ್ ಪೋಟೋ ಇಡಲಾಗಿತ್ತು. ಈ ರಥ ಯಾತ್ರೆ ಕಬಕದಾಚೆಯ ಪುತ್ತೂರು ನಗರದಲ್ಲೂ ಸುತ್ತಾಡಿಸುವ ಪ್ಲಾನು ಸಂಘಪರಿವಾರದವರು ಹಾಕಿಕೊಂಡಿದ್ದರು.

PC : The Quint

ಇದು ಕಬಕ-ಪುತ್ತೂರು ಭಾಗದಲ್ಲಿ ಒಂದಿಷ್ಟು ಬೇರು ಬಿಟ್ಟಿರುವ ಎಸ್‌ಡಿಪಿಐ ಕಾರ್ಯಕರ್ತರನ್ನು ಕೆರಳಿಸಿದೆ. ಸಾರ್ವರ್ಕರ್ ಪೋಟೋ ರಥದಿಂದ ತೆಗೆಯುವಂತೆ ಹಠಹಿಡಿದಿದ್ದಾರೆ. “ಸಾರ್ವರ್ಕರ್ ಬ್ರಿಟೀಶರಿಗೆ ಶರಣಾಗಿದ್ದ ಹೇಡಿ. ಇಂಥವನ ಬದಲಿಗೆ ದೇಶ ಭಕ್ತ ಟಿಪ್ಪುಸುಲ್ತಾನ್ ಭಾವಚಿತ್ರ ಹಾಕುವಂತೆ” ಒತ್ತಾಯಿಸಿದ್ದಾರೆ. ಎರಡು ಕಡೆಯವರಿಗೆ ಕೈಕೈ ಮಿಲಾಯಿಸುವ ಜಗಳ ನಡೆದಿದೆ. ಪೊಲೀಸರ ಪ್ರವೇಶವಾಗಿ ಎರಡು -ಮೂರು ಎಸ್‌ಡಿಪಿಐ ಮುಂದಾಳುಗಳ ಬಂಧಿಸಲಾಯಿತು. ಆ ಬಳಿಕ ಆ ರಥ ಊರೆಲ್ಲ ಸುತ್ತು ಹಾಕಿ ಪುತ್ತೂರು ಪೇಟೆಯಲ್ಲಿ ಸಂಚಾರ ನಡೆಸಿದೆ. ಇತ್ತ ಎಸ್‌ಡಿಪಿಐ ಪೊಲೀಸ್ ಠಾಣೆಗೆ ಮತ್ತಿಗೆ ಹಾಕಿತು. ಸಂಸದ-ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರ್ ಎಸ್‌ಡಿಪಿಐಗೆ ಬುದ್ದಿ ಕಲಿಸುವುದಾಗಿ ಹೇಳಿಕೆ ಕೊಟ್ಟರು. ಬಿಜೆಪಿಗರು ಎಸ್‌ಡಿಪಿಐ ನಿಶೇಧಿಸುವಂತೆ ಆಗ್ರಹಿಸಿದರು. ಕೇಂದ್ರ-ರಾಜ್ಯ ಎರಡು ಬಿಜೆಪಿಯೇ ಅಧಿಕಾರದಲ್ಲಿರುವಾಗ ಆ ಪಾರ್ಟಿಯ ದೊಡ್ಡವರೆ ಎಸ್‌ಡಿಪಿಐ ನಿಷೇಧಿಸವಂತೆ ಹೇಳುವುದು ಹಾಸ್ಯಾಸ್ಪದವೆಂದು ಜನರು ನಗುತ್ತಿದ್ದಾರೆ.

ಬಂಧಿತ ಎಸ್‌ಡಿಪಿಐ ನಾಯಕರು ಒಂದೇ ದಿನದಲ್ಲಿ ಜಾಮೀನಲ್ಲಿ ಹೋರಬಂದರು; ಅವರಿಗೆ ಎಸ್‌ಡಿಪಿಐ ಸಂಘಟನೆ ವೀರೋಚಿತ ಸ್ವಾಗತ ನೀಡಿತು; ಎಸ್‌ಡಿಪಿಐ ಪ್ರತಿಭಟನಾ ಮೆರವಣಿಗೆ ಮಾಡಿತು. ಕೆಲ ಖಟ್ಟರ್ ಹಿಂದೂತ್ವವಾದಿಗಳು ತಮ್ಮ ನಾಯಕರ ದೌರ್ಬಲ್ಯದಿಂದ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದುರ್ಬಲ ಕೇಸು ಬೀಳುವಂತಾಯಿತೆಂದು ಟ್ರೋಲ್ ಮಾಡಿ ಆಕ್ರೋಶ ಹೊರಹಾಕಿದರು. ಇಲ್ಲಿ ಸಹಜವಾದ ಎರಡು ಪ್ರಶ್ನೆಗಳೆದ್ದು ಪ್ರಜ್ಞಾವಂತರ ತಲೆತಿನ್ನುತ್ತಿದೆ! ಗಡಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕೋವಿಡ್ ಶಿಷ್ಟಾಚಾರದ ನಿರ್ಬಂಧವಿರುವಾಗ ಬಿಜೆಪಿಗರಿಗೆ ರಥ ಸಂಚಾರಕ್ಕೆ ಪರವಾನಗಿ ಕೊಟ್ಟಿದ್ಯಾರು? ಅದು ಕಬಕ ದಾಟಿ ಪುತ್ತೂರು ಪ್ರವೇಶಿಸಲು ಪೊಲೀಸರು ಅವಕಾಶ ಹೇಗೆ ಕೊಟ್ಟರು? ಎಸ್‌ಡಿಪಿಐ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಸಿಕಿದ್ದು ಹೇಗೆ? ಈ ಪ್ರಶ್ನೆಗಳೆಲ್ಲ ಉತ್ತರವಿಲ್ಲದೆ ಹಾಗೆ ಉಳಿದುಕೊಂಡಿದ್ದು, ಜಿಲ್ಲಾಡಳಿತದ ವೈಫಲ್ಯ ಪತ್ತೂರಿಗೆ ಗಂಡಾಂತಕಾರಿಯಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ!

ಪುತ್ತೂರಿನ ಸ್ಥಿತಿ ಬೂದಿ ಮಚ್ಚಿದ ಕೆಂಡದಂತಿರುವಾಗಲೆ ಪಕ್ಕದ ಸುಳ್ಯದಲ್ಲಿ ಅನೈತಿಕ ಪೂಲೀಸ್‌ಗಿರಿಯ ಅಟ್ಟಹಾಸ ನಡೆದಿದೆ! ಹಿಂದು ಜಾಗರಣಾ ವೇದಿಕೆಯ ನೈತಿಕ ಪಾಠ ಬೋಧನೆಯ ಆರ್ಭಟಕ್ಕೆ ಅಮಾಯಕ ಹಿಂದು ಹುಡುಗಿಯರಿಬ್ಬರಿಗೆ ಕಿರುಕುಳ ಮತ್ತು ಮುಸ್ಲಿಮ್ ಹುಡುಗನ ಪ್ರಾಣ ಸಂಕಟಕ್ಕೀಡಾಗಿತ್ತೆಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾವುದೋ ಕೆಲಸಕ್ಕೆಂದು ಪುತ್ತೂರಿಗೆ ಬಂದಿದ್ದ ಬೆಂಗಳೂರಿನ ಹುಡುಗಿಯರು ವಾಪಸಾಗುತ್ತಿದ್ದರು. ಪುತ್ತೂರಿಂದ ಬೆಂಗಳೂರಿಗೆ ಹೊರಟಿದ್ದ ಈ ಸರ್ಕಾರಿ ಬಸ್‌ನಲ್ಲಿ ಕುಂಬ್ರಕ್ಕೆ ಮುಸ್ಲಿಂ ಹುಡುನೊಬ್ಬ ಕುಂಬ್ರಕ್ಕೆ ಹೋಗುತ್ತಿದ್ದ. ಬೆಂಗಳೂರಿಂದ ಕರೆಬಂದಿದ್ದರಿಂದ ಆತ ಕುಂಬ್ರದಲ್ಲಿ ಇಳಿಯದೆ ಬೆಂಗಳೂರಿಗೆ ಟಿಕೆಟ್ ಪಡೆದಿದ್ದಾನೆ. ಸಂದರ್ಭೋಚಿತವಾಗಿ ಆ ಹುಡುಗ ಹಾಗು ಹುಡುಗಿಯರ ಒಂದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ.

ಇದನ್ನು ಬಸ್‌ನಲ್ಲಿದ್ದ ಹಿಂದು ಜಾಗರಣಾ ವೇದಿಕೆಯ ಸದಸ್ಯನೊಬ್ಬ ಸಂಶಯದಿಂದಲೇ ನೋಡುತ್ತಿದ್ದ. ತಕ್ಷಣ ಆತ ತನ್ನ ಸಹಚರರಿಗೆ ತಾನು ಅರ್ಥೈಸಿಕೊಡ್ಡದ್ದನ್ನು ಪೋನ್‌ನಲ್ಲಿ ವಿವರಿಸಿದ್ದಾನೆ. ಹಿಂದು ಜಾಗರಣಾ ವೇದಿಕೆ, ಬಜರಂಗದಳದ ಕಾರ್ಯಕರ್ತರು ಆನೆಗುಂಡಿ ಎಂಬಲ್ಲಿ ಬಸ್ ಅಡ್ಡ ಹಾಕಿದ್ದಾರೆ. ಹಿಂದು ಜಾಗರಣಾ ವೇದಿಕೆಯ ದೊಡ್ಡ ಗುಂಪು ಆ ಹುಡುಗ-ಹುಡುಗಿಯರಿಗೆ ಮುತ್ತಿಗೆ ಹಾಕಿ ರಂಪವೆಬ್ಬಿಸಿದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು, ಬಸ್ ಕಂಡಕ್ಟರ್ ಮತ್ತು ಚಾಲಕ ಅವರು ಅಪರಿಚಿತರು, ಒಟ್ಟಾಗಿ ಪ್ರಯಾಣಿಸುತ್ತಿಲ್ಲವೆಂದು ತಿಳಿಹೇಳಿದರು ಆವೇಶದಲ್ಲಿದ್ದ ಹಿಂಜಾವೆ ತಂಡ ಕೇಳಲಿಲ್ಲ. ಇದು ಅನೈತಿಕ ಟ್ರಿಪ್ ಎಂದು ದಾಂಧಲೆ ಎಬ್ಬಿಸಿಬಿಟ್ಟರು ಆ ನಡು ರಾತ್ರಿಯಲ್ಲಿ!ಬಸ್ ಪೊಲೀಸ್ ಠಾಣೆಗೆ ಒಯ್ಯುವಂತೆ ಬಲವಂತಪಡಿಸಿದರು. ಬಸ್ಸು ಠಾಣೆಯತ್ತ ತೆರಳುತ್ತಿದ್ದಾಗ ಹಿಂಜಾವೆ ತಂಡ ಕಾರಲ್ಲಿ ಹಿಂಬಾಲಿಸಿದೆ.

PC : DNA India

ಬಸ್ ನಲ್ಲಿದ್ದ ಮುಸ್ಲಿಂ ಹುಡುಗ ಪೈಜಾರಿನಲ್ಲಿ ಇಳಿದು ತನ್ನವರಿಗೆ ಸುದ್ದಿ ಮುಟ್ಟಿಸಿದ್ದಾನೆ. ಇದ್ದಕ್ಕಿದ್ದಂತೆ ಮುಸ್ಲಿಮರ ದೊಡ್ಡ ಗುಂಪು ಜಮೆಯಾಗಿಬಿಟ್ಟಿತು. ವಾತಾವರಣ ಬಿಗಡಾಯಿಸಿ ಸಂಘರ್ಷ ಶುರುವಾಗಿಯಿತು. ಅಷ್ಟರಲ್ಲಿ ಪೊಲೀಸರಿಗೆ ವಿಷಯ ಗೊತ್ತಾಗಿತ್ತು. ಪೊಲೀಸರು ಬಂದು ಬಸ್ ಠಾಣೆಗೆ ಒಯ್ದರು. ಯುವಕ ಯುವತಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ; ಅವರ ಮೋಬೈಲ್ ಪರಿಶೀಲಿಸಿದ್ದಾರೆ. ಕಂಡಕ್ಟರ್-ಡ್ರೈವರ್‌ರ ಪ್ರಶ್ನಿಸಿದ್ದಾರೆ. ಹುಡುಗ ಮತ್ತು ಯುವತಿಯರಿಗೆ ಯಾವುದೆ ಸ್ನೇಹ-ಸಂಬಂಧ ಇಲ್ಲವೆಂಬುದು ಪಕ್ಕಾ ಆಗಿದೆ. ನಂತರವಷ್ಟೇ ಹುಡುಗಿಯನ್ನು ಅದೇ ಬಸ್ಸಿನಲ್ಲಿ ಮತ್ತು ಹುಡುಗನನ್ನು ಬೇರೆ ಬಸ್ಸಿನಲ್ಲಿ ಬೆಂಗಳೂರಿಗೆ ಕಳಿಸಲಾಯಿತು.

ಇದರಿಂದ ಹಿಂಜಾವೆಯವರಿಗೆ ಸಮಾಧಾನವಾಗಲಿಲ್ಲ. ಹುಡುಗನ ಮೇಲೆ ಕೇಸು ಹಾಕಿ, ನಾಲ್ಕು ಬೆತ್ತ ಹಾಕಲು ಒತ್ತಡ ಹಾಕಲಾಯಿತೆನ್ನಲಾಗಿದೆ. ಆದರೆ ಉದ್ದೇಶ ಈಡೇರದೆ ಹಿಂಜಾವೆಯವರು ಪೊಲೀಸರ ಮೇಲೆಯೆ ತಿರುಗಿಬಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆಡಳಿತ ಪಕ್ಷದ ಬೆಂಬಲಿಗರಾದ್ದರಿಂದ ಮುಲಾಜಿಗೆಬಿದ್ದ ಪೊಲೀಸರು ಮತ್ತೆ ಹಿಂಜಾವೆಯವರನ್ನು ಕರೆದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರು ಹಿಂಜಾವೆ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸುತ್ತ ಹೋದರೆನ್ನಲಾಗಿದ್ದು, ಸಾರ್ವಜನಿಕರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಸಂಘಪರಿವಾರದವರು ವರ್ತಿಸಿದ ರೀತಿ-ನೀತಿಯ ಬಗ್ಗೆ ಅಸಹ್ಯ-ಆಕ್ರೋಶ ಮೂಡಿಸಿದೆ.


ಇದನ್ನೂ ಓದಿ: ಉತ್ತರ ಪ್ರದೇಶ: 18 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...