ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ತನ್ನ ಪದಕ ಬೇಟೆಯನ್ನು ಮುಂದುವರೆಸಿದೆ. ಮಂಗಳವಾರದಂದು ಭಾರತ ತನ್ನ ತೆಕ್ಕೆಗೆ ಒಟ್ಟು 10 ಪದಕವನ್ನು ಸೇರಿಸಿಕೊಂಡಿದೆ. ಇಂದು ನಡೆದ ಪುರುಷರ ಹೈಜಂಪ್ ಟಿ42 ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ.
ಈ ಪಂದ್ಯದಲ್ಲಿ ಅಮೆರಿಕದ ಸ್ಯಾಮ್ ಗ್ರೀವ್ ಅವರು 1.88 ಮೀ ಹಾರುವ ಮೂಲಕ ಚಿನ್ನ ಗೆದ್ದರೆ, ಮರಿಯಪ್ಪನ್ ತಂಗವೇಲು ಅವರು 1.86 ಮೀ ಬೆಳ್ಳಿ ಗೆದ್ದರು ಹಾಗೂ ಶರದ್ ಕುಮಾರ್ ಅವರು 1.83ಮೀ ಹಾರಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
#IND ace High jumper @189thangavelu wins silver at #Tokyo2020 #Paralympics with a Season Best performance of 1.86m
Mariyappan is an embodiment of hard work, consistency & determination. Many congratulations on your feat Champ!
?? is proud of you!!#Cheer4India #Praise4Para pic.twitter.com/iTE0R5hq0e
— SAI Media (@Media_SAI) August 31, 2021
ಇದನ್ನೂ ಓದಿ: ಚಿನ್ನ ಗೆದ್ದ ಶೂಟರ್ ಅವನಿ ಲೇಖರಾ: ಪ್ಯಾರಾಲಿಂಪಿಕ್ಸ್‌ನ ಮೊದಲ ಭಾರತೀಯ ಮಹಿಳೆಯೆಂಬ ಹೆಗ್ಗಳಿಕೆ
ಸ್ಪರ್ಧೆಯಲ್ಲಿದ್ದ ಮೂರನೇ ಭಾರತೀಯ ಮತ್ತು 2016 ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವರುಣ್ ಸಿಂಗ್ ಭಾಟಿ ಅವರು ಒಟ್ಟು ಒಂಬತ್ತು ಸ್ಪರ್ಧಿಗಳಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡರು.
ಸೋಮವಾರ, ಶೂಟರ್ ಸಿಂಗರಾಜ್ ಅದಾನ ಅವರು ಪುರುಷರ 10 ಮೇರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು ಇದುವರೆಗೆ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿದೆ.
#IND have won more @ParaAthletics medals at #Tokyo2020 than at any previous Paralympic Games ?
Two arrived in the men's high jump – T63 alone…#Silver – Mariyappan Thangavelu #Bronze – Sharad Kumar
Congratulations to @TeamUSA's Sam Grewe, who took the #gold #Paralympics pic.twitter.com/AsixouBG1W
— Paralympic Games (@Paralympics) August 31, 2021
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ ಜಾವೆಲಿನ್ ಥ್ರೋ: ಚಿನ್ನ ಗೆಲ್ಲುವುದರೊಂದಿಗೆ ವಿಶ್ವದಾಖಲೆ ಬರೆದ ಸುಮಿತ್ ಆಂಟಿಲ್!


