Homeಕ್ರೀಡೆಒಲಂಪಿಕ್ಪ್ಯಾರಾಲಿಂಪಿಕ್ಸ್‌‌ ಜಾವೆಲಿನ್ ಥ್ರೋ: ಚಿನ್ನ ಗೆಲ್ಲುವುದರೊಂದಿಗೆ ವಿಶ್ವದಾಖಲೆ ಬರೆದ ಸುಮಿತ್‌ ಆಂಟಿಲ್!

ಪ್ಯಾರಾಲಿಂಪಿಕ್ಸ್‌‌ ಜಾವೆಲಿನ್ ಥ್ರೋ: ಚಿನ್ನ ಗೆಲ್ಲುವುದರೊಂದಿಗೆ ವಿಶ್ವದಾಖಲೆ ಬರೆದ ಸುಮಿತ್‌ ಆಂಟಿಲ್!

- Advertisement -
- Advertisement -

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ (ಎಫ್ 64) ನಲ್ಲಿ ಭಾರತದ ಸುಮಿತ್‌ ಆಂಟಿಲ್ ಚಿನ್ನ  ಗೆಲ್ಲುವುದರೊಂದಿಗೆ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಸುಮಿತ್ ಆಂಟಿಲ್ ಒಂದಲ್ಲ, ಎರಡಲ್ಲ ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ!.

ಸುಮಿತ್‌ ಆಂಟಿಲ್ ಮೊದಲ ಪ್ರಯತ್ನದಲ್ಲಿ ಈಟಿಯನ್ನು 66.95 ಮೀ. ದೂರ ಎಸೆದು ವಿಶ್ವ ದಾಖಲೆ ಸೃಷ್ಟಿಸಿದರು. ನಂತರ ತನ್ನ ಎರಡನೆ ಎಸೆತದಲ್ಲಿ ಅದನ್ನು ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದರು. ನಂತರ ತನ್ನ ಐದನೇ ಪ್ರಯತ್ನದಲ್ಲಿ, ಮತ್ತೊಮ್ಮೆ 68.55 ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಚಿನ್ನ ಗೆದ್ದ ಶೂಟರ್ ಅವನಿ ಲೇಖರಾ: ಪ್ಯಾರಾಲಿಂಪಿಕ್ಸ್‌ನ ಮೊದಲ ಭಾರತೀಯ ಮಹಿಳೆಯೆಂಬ ಹೆಗ್ಗಳಿಕೆ

ಸುಮಿ‌ತ್‌ ಜೊತೆಗೆ ಸ್ಪರ್ಧಿಸಿದ್ದ ಭಾರತದ ಆಟಗಾರ ಸಂದೀಪ್ ಚೌಧರಿ 62.20 ಮೀ ಎಸೆತದೊಂದಿಗೆ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದ್ದಾರೆ.

ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ಒಂದೇ ದಿನದಲ್ಲಿ ಎರಡನೇ ಚಿನ್ನದ ಪಡೆದು ಸಂಭ್ರಮಿಸಿದೆ. ಇದಕ್ಕೂ ಮೊದಲು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಶೂಟರ್ ಅವನಿ ಲೇಖರಾ ಪಾತ್ರರಾದರು.

ಜಾವೆಲಿನ್ ಥ್ರೋನ ಇತರ ವಿಭಾಗದಲ್ಲಿ ಭಾರತ ಇಂದು ಉತ್ತಮವಾಗಿ ಆಡಿದೆ. ಪುರುಷರ ಜಾವೆಲಿನ್ (ಎಫ್ 46) ಫೈನಲ್‌ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಮತ್ತು ಸುಂದರ್ ಸಿಂಗ್ ಗುರ್ಜಾರ್ ಕಂಚು ಗೆದ್ದಿದ್ದಾರೆ. ಈಗಾಗಲೇ ಏಳು ಪದಕಗಳನ್ನು ಪಡೆದಿರುವ ಭಾರತವು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ದಾಖಲೆಯನ್ನು ನಿರ್ಮಿಸಿದೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಬೆಳ್ಳಿ ತಂದುಕೊಟ್ಟ ಹೈಜಂಪರ್ ನಿಶಾದ್ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...