- Advertisement -
- Advertisement -
ಕೆಲವು ದಿನಗಳ ಹಿಂದೆ ಗುಂಪು ಹಲ್ಲೆ ನಡೆಸಿ, ದುಷ್ಟರು ವಾಹನಕ್ಕೆ ಕಟ್ಟಿ ಎಳೆದು ಕೊಂದ ಬುಡಕಟ್ಟು ಸಮುದಾಯದ ವ್ಯಕ್ತಿಯ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ ನೆರವು ನೀಡಿದೆ.
ಮೃತಪಟ್ಟ ವ್ಯಕ್ತಿಯ ಮಗನ ಶಿಕ್ಷಣ ಹಾಗೂ ಪೋಷಣೆಯನ್ನು ಸರ್ಕಾರ ವಹಿಸಲಿದೆ. ಸಾವಿಗೀಡಾದ ವ್ಯಕ್ತಿಯ ಇಬ್ಬರು ಸಹೋದರರಿಗೆ ಮನೆಗಳನ್ನು ಕಟ್ಟಿಕೊಡಲಾಗುವುದು. ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ ಮಧ್ಯಪ್ರದೇಶ ಸರ್ಕಾರ: ವ್ಯಾಪಕ ಖಂಡನೆ
ನೀಮಚ್ ಜಿಲ್ಲೆಯ ಕನ್ಹ್ಯಾಲಾಲ್ ಭೀಲ್ ಎಂಬವವರನ್ನು ಎಂಟು ಜನರ ಗುಂಪು ಭೀಕರವಾಗಿ ಥಳಿಸಿತ್ತು. ನೈಲಾನ್ ಹಗ್ಗದಲ್ಲಿ ವಾಹನಕ್ಕೆ ಕಟ್ಟಿ ಕೆಲವು ದೂರ ಎಳೆಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭೀಲ್ ಮೃತಪಟ್ಟಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಘಟನೆ ಬೆಳಕಿಗೆ ಬಂದಿತ್ತು.


