ಕರ್ನಾಟಕದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು ಒಟ್ಟು ಸಕ್ರಿಯ ಪ್ರಕರಣ ಸಂಖ್ಯೆ 16,241 ಕ್ಕೆ ಇಳಿದಿದೆ. ಇಂದು 673 ಹೊಸ ಪ್ರಕರಣಗಳು ವರದಿಯಾಗಿದ್ದು 13 ಸಾವುಗಳು ಸಂಭವಿಸಿವೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ 1,074 ಚೇತರಿಕೆ ಪ್ರಕರಣಗಳು ಸಂಭವಿಸಿ ಒಂದಷ್ಟು ಆತಂಕವನ್ನು ದೂರ ಮಾಡಿವೆ. ಇದುವರೆಗೂ ಕರ್ನಾಟಕ 29,62,408 ಒಟ್ಟು ಪ್ರಕರಣವನ್ನು ವರದಿ ಮಾಡಿದೆ. 29,08,622 ಜನ ಚೇತರಿಸಿಕೊಂಡಿದ್ದು, 37,517 ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಪ್ರಮಾಣ 0.56% ಗೆ ಇಳಿದಿದೆ.

ಇನ್ನು ದೇಶದಲ್ಲಿಯೂ ಸಹ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಒಟ್ಟು 27,254 ಹೊಸ ಪ್ರಕರಣಗಳು ದಾಖಲಾಗಿದ್ದು, 219 ಸಾವುಗಳು ಸಂಭವಿಸಿವೆ. 37,687 ಏಕದಿನ ಚೇತರಿಕೆಗಳು ಕಂಡುಬಂದಿವೆ. ಕೇರಳದಲ್ಲಿ ಮಾತ್ರ ಕೊರೊನಾ ಪ್ರಕರಣಗಳು 20,000 ಕ್ಕಿಂತ ಹೆಚ್ಚಿವೆ.
➡️ India's Active Caseload (3,74,269) constitute 1.13% of total cases. pic.twitter.com/jnY31qhJfs
— Ministry of Health (@MoHFW_INDIA) September 13, 2021
ಇದುವರೆಗೂ 54.30 ಕೋಟಿ ಕೊರೊನಾ ಟೆಸ್ಟ್‌ಗಳನ್ನು ಮಾಡಲಾಗಿದೆ. ಅಲ್ಲದೇ 75 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಒಕ್ಕೂಟ ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: 13,500 ಕುಟುಂಬಗಳಿಗೆ ಭೂಮಿ, ವಸತಿ ನೀಡಲು ಕೇರಳ ಸರ್ಕಾರ ನಿರ್ಧಾರ


