Homeಅಂಕಣಗಳುಸಾಧ್ಯವಾದಲೆಲ್ಲಾ ಗಿಡ ನೆಡಿ, ಹೆಂಡಕ್ಕೆ ಬದಲು ಹಾಲು - ಗಣಪಯ್ಯನವರ ಧ್ಯೇಯಗಳು

ಸಾಧ್ಯವಾದಲೆಲ್ಲಾ ಗಿಡ ನೆಡಿ, ಹೆಂಡಕ್ಕೆ ಬದಲು ಹಾಲು – ಗಣಪಯ್ಯನವರ ಧ್ಯೇಯಗಳು

ಅವರು ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರು ಸೆರಮನೆಯಲ್ಲಿದ್ದಾಗಲೂ ಹಾರ್ಲೆಯ ತೋಟದಿಂದ ನೂರು ಕಾಫಿಗಿಡಗಳನ್ನು ತರಿಸಿಕೊಂಡು, ಸೆರೆಮನೆ ಆವರಣದೊಳಗೆ ನೆಟ್ಟಿದ್ದರು.

- Advertisement -
- Advertisement -

ಕಳೆದುಹೋದ ದಿನಗಳು -25

ಎರಡು ದಶಕಗಳಿಗೂ ಹೆಚ್ಚು ಕಾಲ ಹಾರ್ಲೆ ಸಮೂಹದ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ವಾಸುದೇವ ರಾವ್ ನಿವೃತ್ತರಾದರು. ಅವರ ಸ್ಥಾನಕ್ಕೆ ಹಾರ್ಲೆಯಲ್ಲೇ ಉದ್ಯೋಗಿಯಾಗಿದ್ದ ಎಂ. ನಾರಾಯಣ ಭಟ್ ಎಂಬವರು ಬಂದಿದ್ದರು. ವಾಸುದೇವರಾವ್ ಆವರಿಗೆ ಹೋಲಿಸಿದರೆ ಇವರು ಅತ್ಯಂತ ಸೌಮ್ಯ ಸ್ವಭಾವದವರು. ಸ್ವಲ್ಪಮಟ್ಟಿಗೆ ಸಂಗೀತವನ್ನೂ ಅಭ್ಯಾಸ ಮಾಡಿದ್ದರು. ಮಕ್ಕಳಿಗೆ ಭಜನೆ ಪದ್ಯಗಳನ್ನೂ ಹೇಳಿಕೊಡುತ್ತಿದ್ದರು. ನಮ್ಮ ಜೈಕರ್ನಾಟಕ ಸಂಘದ ಕಾರ್ಯಕ್ರಮವೊಂದರಲ್ಲಿಯೂ ಅವರು ಬಂದು ಹಾಡಿದ್ದರು.

ಅಗಲಟ್ಟಿ ಗ್ರಾಮದಲ್ಲಿ ದಲಿತರಿಗೆ ಜಮೀನು ಮಂಜೂರಾಗಿತ್ತು. ಅಲ್ಲೀಗ ಕೃಷಿ ಕೆಲಸಗಳನ್ನು ಪ್ರಾರಂಭಿಸಬೇಕಿತ್ತು. ಅದಕ್ಕಾಗಿ ಯೋಜನೆಗಳನ್ನು ತಯಾರಿಸುತ್ತಿದ್ದರು. ಒಂದು ದಿನ ಗಣಪಯ್ಯ ನನ್ನಲ್ಲಿ, ಪೂರ್ಣಿಮಾ ಎಸ್ಟೇಟಿನಲ್ಲಿ ಮುಂದಿನ ವರ್ಷ ಒಂದು ಲಕ್ಷ ಕಾಫಿಗಿಡಗಳ ಪಾತಿ ಮಾಡಬೇಕು. ಅಗಲಟ್ಟಿ, ಮಾವಿನ ಹಳ್ಳಿ ದಲಿತರಿಗೆ ಮಂಜೂರಾದ ನೂರು ಎಕರೆ ಜಮೀನಿನಲ್ಲಿ ಅವರ ಮನೆಗಳಿಗೆ ಸ್ಥಳ ಬಿಟ್ಟರೆ ಒಟ್ಟು ತೊಂಬತ್ತು ಎಕರೆ ಕಾಫಿ ಕೃಷಿ ಮಾಡಬಹುದು. ಅರಣ್ಯ ಇಲಾಖೆಯಲ್ಲಿ ಹತ್ತು ಸಾವಿರ ಗಿಡಗಳಿಗೆ ಹೇಳಿದ್ದೇನೆ, ಅರ್ಜಿ ಕೊಡಬೇಕು. ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಎಲ್ಲಾ ಲೆಕ್ಕಚಾರಗಳು ಅವರ ಮನಸ್ಸಿನಲ್ಲೇ ಕರಾರುವಾಕ್ಕಾಗಿ ತಯಾರಾಗುತ್ತಿದ್ದವು.

ಗಣಪಯ್ಯನವರು ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾರಂಭಿಸಿದರು. ಸಕಲೇಶಪುರದ ರೋಟರಿ ಸಂಸ್ಥೆಯ ಸಭಾಂಗಣ, ಸರ್ಕಾರಿ ನೌಕರರ ಭವನ, ಅನೇಕ ಕಡೆಗಳಲ್ಲಿ ಶಾಲಾ ಕೊಠಡಿಗಳು, ರಕ್ಷಿದಿ ಶಾಲೆಗೆ ವಿದ್ಯುದೀಕರಣ ಹೀಗೇ ನೂರಾರು ಕೆಲಸಗಳಾದವು. ಕೆಲವು ಕಡೆಗಳಲ್ಲಿ ಅವರು ಮಾಡಿದ ಸಹಾಯವನ್ನು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಆಯಾ ಊರಿನವರು ಹೇಳಿದಾಗ ಮಾತ್ರ ತಿಳಿಯುತ್ತಿದೆ. ತಮ್ಮ ತೋಟಗಳಿಂದ ಬರುತ್ತಿದ್ದ ಉತ್ಪನ್ನದಲ್ಲಿ ಅವರ ಕುಟುಂಬಕ್ಕೆ ಖರ್ಚಾಗುತ್ತಿದ್ದುದು, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ನಿರ್ವಹಣೆಯಷ್ಟು ಮಾತ್ರ. ಉಳಿದ ಎಲ್ಲವೂ ಸಾರ್ವಜನಿಕ ಕಾರ್ಯಗಳಿಗೆ ಮೀಸಲು.

ಎನ್.ಕೆ.ಗಣಪಯ್ಯ ರೋಟರಿ ಸಭಾಂಗಣ

ಗಣಪಯ್ಯನವರಲ್ಲಿ ಕಾರಂತರ ಕಾದಂಬರಿಗಳಿಂದ ಹಿಡಿದು ಭಾಸನ ನಾಟಕಗಳವರೆಗೆ ಒಳ್ಳೆಯ ಪುಸ್ತಕಗಳ ಸಂಗ್ರಹವಿತ್ತು. ಸಾಂಖ್ಯ ಮತ್ತು ಪತಂಜಲಿ ಯೋಗದ ಬಗ್ಗೆ ಹೆಚ್ಚು ಆಸಕ್ತಿಯುಳ್ಳವರಾಗಿದ್ದರು.

ಸಕಲೇಶಪುರದಲ್ಲಿ ಪುರಸಭಾಭವನದಲ್ಲಿ ಗಣಪಯ್ಯ ಒಮ್ಮೆ ಎಂ.ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಕಾರ್ಯಕ್ರಮನ್ನು ಏರ್ಪಡಿಸಿದ್ದರು. ಅಂದು ಸುಬ್ಬುಲಕ್ಷ್ಮಿ ದಂಪತಿಗಳು ಹಾರ್ಲೆ ಎಸ್ಟೇಟಿನಲ್ಲಿ ಉಳಿದಿದ್ದರು.

ಗಣಪಯ್ಯ ಗಾಂಧೀಜಿಯ ಟ್ರಸ್ಟೀ ಶಿಫ್ ಸಮಾಜವಾದದ ನೈಜ ಉದಾಹರಣೆಯಾಗಿದ್ದರು. ಆ ಕಾಲಘಟ್ಟದಲ್ಲಿ ಸಮಾಜದಲ್ಲಿ ನಾವು ಗಣಪಯ್ಯನವರಂತಹ ಹಲವಾರು ವ್ಯಕ್ತಿಗಳನ್ನು ಬೇರೆ ಬೇರೆ ಊರುಗಳಲ್ಲಿ ಕಾಣಬಹುದು. ಇದಕ್ಕೆ ಕಾರಣಗಳೇನಿರಬಹುದು ಮತ್ತು ಇದರ ಹಿನ್ನೆಲೆಗಳೇನು ಎಂಬ ವಿಚಾರಕ್ಕೆ ಮುಂದೆ ಬರೆಯುತ್ತೇನೆ.

ಅವರು ಹೇಳುತ್ತಿದ್ದುದು ಮುಖ್ಯವಾಗಿ ಎರಡು ವಿಚಾರಗಳನ್ನು. ಮೊದಲನೆಯದು “ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಗಿಡ ನೆಡಿ ಅದು ಪುಣ್ಯದ ಕೆಲಸ” ಎಂದು. ಅವರು ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರು ಸೆರಮನೆಯಲ್ಲಿದ್ದಾಗಲೂ ಹಾರ್ಲೆಯ ತೋಟದಿಂದ ನೂರು ಕಾಫಿಗಿಡಗಳನ್ನು ತರಿಸಿಕೊಂಡು, ಸೆರೆಮನೆ ಆವರಣದೊಳಗೆ ನೆಟ್ಟಿದ್ದರು. ಅವು ನಂತರ ಏನಾದವು ತಿಳಿಯದು. ಯಾಕೆಂದರೆ ಆ ಕಾರಾಗೃಹ ಈಗ “ಫ್ರೀಡಂ ಪಾರ್ಕ್” ಆಗಿದೆ. ಎರಡನೆಯ ವಿಚಾರ ಹೆಂಡ ಕುಡಿಬೇಡಿ ಬದಲಿಗೆ ಹಾಲು ಕುಡಿಯಿರಿ ಎಂದು ಹೇಳುತ್ತಿದ್ದರಲ್ಲದೆ “ಹೆಂಡಕ್ಕೆ ಬದಲು ಹಾಲು” ಇದು ನನ್ನ ಸ್ಲೋಗನ್, ಜೋರಾಗಿ ಹೇಳಿ ಎಂದು ಸಭೆಯಲ್ಲಿ ಜನರಲ್ಲಿ ಒಟ್ಟಾಗಿ ಘೋಷಣೆ ಮಾಡಿಸುತ್ತಿದ್ದರು.

ಯಾವುದೋ ಇಂತದ್ದೇ ಒಂದು ಸಂದರ್ಭದಲ್ಲಿ ಒಬ್ಬರು “ಹಾಗಾದರೆ ಕಾಫಿ?” ಎಂದು ತಮಾಷೆಗೆ ಪ್ರಶ್ನಿಸಿದರು.

ಆಗ ಗಣಪಯ್ಯ ಕಾಫಿ ಬೇಕಾದಷ್ಟು ಕುಡಿಯಿರಿ “Any time is coffee time” ಎಂದು ಬಿಟ್ಟರು !.

Any time is coffee time – ಗಣಪಯ್ಯ

ಈ ಘೋಷವಾಕ್ಯ ನಂತರದ ದಿನಗಳಲ್ಲಿ ಗಣಪಯ್ಯನವರ “ಹೆಂಡಕ್ಕೆ ಬದಲು ಹಾಲು” ಘೋಷಣೆಯನ್ನು ಹಿಂದಿಕ್ಕಿ ಎಷ್ಟು ಜನಪ್ರಿಯವಾಯಿತೆಂದರೆ, ಬೆಂಗಳೂರಿನ ಕಾಫಿ ಪುಡಿ ತಯಾರಕರೊಬ್ಬರು ಇದನ್ನು ತಮ್ಮ ಕಾಫಿ ಪುಡಿಯ ಪ್ರಚಾರಕ್ಕೆ ಬಳಸಿಕೊಂಡಿದ್ದರು!

ಗಣಪಯ್ಯನವರ ಈ ಎಲ್ಲಾ ಕೆಲಸಗಳಲ್ಲಿ ಅವರ ಮಗ ರವೀಂದ್ರನಾಥರು ನಿರಂತರ ಜೊತೆಯಾಗಿದ್ದರು. ಇವರು ಸ್ಥಾಪಿಸಿದ ಬಾಲನಿಕೇತನ ಅನಾಥಾಶ್ರಮದಲ್ಲಿ ಹಲವಾರು ಮಕ್ಕಳು ಬದುಕು ರೂಪಿಸಿಕೊಂಡಿದ್ದರು. ಅವರಲ್ಲಿ ಕೆಲವರು ಶಿಕ್ಷಕರಾಗಿ, ಇನ್ನು ಕೆಲವರು ಸ್ವಂತ ಉದ್ಯಮಿಗಳಾಗಿ ಸಮಾಜದಲ್ಲಿ ಮನ್ನಣೆಗಳಿಸಿದ್ದಾರೆ. ಅಂಥವರಲ್ಲಿ ಒಬ್ಬರು ಮುಂದೆ ತಾವೇ ಒಂದು ಅನಾಥಾಶ್ರಮವನ್ನು ಸ್ಥಾಪಿಸಿ ಹಲವು ಮಕ್ಕಳಿಗೆ ಬೆಳಕಾಗಿದ್ದಾರೆ.

ರೋಟರಿ ಸಂಸ್ಥೆಯಲ್ಲಿ ರವೀಂದ್ರನಾಥರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು, ಅವೆಲ್ಲ, ಶಿಕ್ಷಣ, ಕೃಷಿ, ಸಾಮಾಜಿಕ ಸೇವೆ ಹೈನುಗಾರಿಕೆ ಮುಂತಾದವುಗಳಿಗೆ ಸಂಬಂಧಿಸಿದ್ದಾಗಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದುದು ಕಡಿಮೆಯೇ, ನಮ್ಮ ನಾಟಕ ಪ್ರದರ್ಶನಗಳಿಗೆ ಗಣಪಯ್ಯನವರು ನಂತರವೂ ಬರುತ್ತಿದ್ದರು.

ರವೀಂದ್ರನಾಥರು ನಮ್ಮ ಕಾರ್ಯಕ್ರಮಗಳಿಗೆ ಬಂದದ್ದು ಕಡಿಮೆಯೇ. ಯಾರೋ ಸಂಗೀತ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಅವರು ಭಾರತದ ಅತ್ಯುನ್ನತ ಸಂಗೀತ ಪ್ರೇಮಿಗಳಲ್ಲಿ ಮೊದಲನೆಯವನು ಔರಂಗಜೇಬ ಎರಡನೆಯವನು ನಾನೇ ಎಂದಿದ್ದರು!

ರವೀಂದ್ರನಾಥ ಅವರು ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಮೂರುದಿನಗಳ ಚಲನಚಿತ್ರ ರಸಗ್ರಹಣ ಶಿಬಿರ ನಡೆದಿತ್ತು.

ಸಕಲೇಶಪುರ ರೋಟರಿ ಸಂಸ್ಥೆ ಯ ಸಂಯೋಜನೆಯ ನೀನಾಸಂ ಚಲನ ಚಿತ್ರ ಶಿಬಿರ

ದೇವರಲ್ಲಿ ನಂಬಿಕೆಯಿರುವ ರವಿಂದ್ರನಾಥರು ಅಷ್ಟೇ ವೈಜ್ಞಾನಿಕ ಮನೋಭಾವದವರು ಕೂಡಾ. ಆ ಕಾರಣಕ್ಕಾಗಿಯೇ ಅವರಿಗೆ ಅಥರ್ವವೇದ ಮೆಚ್ಚಿನ ಗ್ರಂಥ. ಅದನ್ನವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಅವರ ವೈಜ್ಞಾನಿಕ ವಿಚಾರಗಳು ಅನೇಕ ಸಮಕಾಲೀನರಿಗೆ ಅರ್ಥವಾಗದೆ, ರವೀಂದ್ರನಾಥರದು ಪುಸ್ತಕದ ಬದನೇಕಾಯಿ. ಅವರು ಥಿಯರಿ ಪ್ರೊಫೆಸರ್ ಪ್ರಾಕ್ಟಿಕಲ್ ಆಲ್ಲ ಎಂದು ಹೇಳುತ್ತಿದ್ದರು- ಈಗಲೂ ಹೇಳುತ್ತಿದ್ದಾರೆ. ಅದು  ಸಾಪೇಕ್ಷ ನಿಜ ಯಾಕೆಂದರೆ ಮೂವತ್ತು ವರ್ಷದ ಹಿಂದೆಯೇ ಅವರು ನಮಗೆ ಮುಂದೆ ಈ ಎಲ್ಲ ಇಂಧನಗಳೂ ಪ್ರಯೋಜನಕ್ಕೆ ಬಾರವು ನಾವು ಸೌರಶಕ್ತಿಯನ್ನೇ ಅವಲಂಬಿಸಬೇಕು ಆ ದಿನ ಬರುತ್ತದೆ ಎಂದಿದ್ದರು. ಹಳ್ಳಿಗಳಿಗೆ ಇನ್ನೂ ಟಿವಿ ಬಂದಿರಲಿಲ್ಲ ಆ ಕಾಲದಲ್ಲೇ ಮುಂದೆ ಸಿನಿಮಾ ರೀಲುಗಳನ್ನು ಹೊತ್ತುಕೊಂಡು ಓಡಾಡಬೇಕಿಲ್ಲ ಉಪಗ್ರಹಗಳಿಂದ ನೇರವಾಗಿ ಸಿನಿಮಾ ಮಂದಿರಗಳಿಗೆ ಸಿನಿಮಾ ರವಾನೆ ಮಾಡಬಹುದು ಎಂದರು. 90 ದಶಕದಲ್ಲಿ ಅನೇಕರು ಕಂಪ್ಯೂಟರ್ ಉಪಯೋಗಿಸಲು ತಿಣುಕಾಡುತ್ತಿರುವಾಗ  ಕಂಪ್ಯೂಟರ್ ಉಪಯೋಗಿಸಲು ಪ್ರೋಗ್ರಾಮಿಂಗ್  ಮಾಡುವಷ್ಟು ಕಲಿತರಲ್ಲದೆ  ಎಸ್ಟೇಟಿನ ಎಲ್ಲ ವ್ಯವಹಾರಗಳಿಗೂ ಕಂಪ್ಯೂಟರ್ ಬಳಸಲಾರಂಭಿಸಿದರು.

ಯಾವುದು ವೈಜ್ಞಾನಿಕ ಯಾವುದು ಅಲ್ಲ ಎನ್ನುವುದನ್ನು ತುಂಬ ಸರಳವಾಗಿ ವಿವರಿಸುತ್ತಿದ್ದರು. “ನೋಡು ಒಂದು ಕೆಲಸ ಅಥವಾ ಪ್ರಯೋಗ ಉದಾಹರಣೆಗೆ ಅರಿಶಿನಕ್ಕೆ ಸುಣ್ಣ ಹಾಕಿದರೆ ಕೆಂಪಾಗುತ್ತದೆ. ಅದು ನಾನು ಹಾಕಿದರೂ ಆಗುತ್ತದೆ ನೀನು ಹಾಕಿದರೂ ಆಗುತ್ತದೆ, ಹಾಗಾಗಿ ಅದು ವೈಜ್ಞಾನಿಕ ಸತ್ಯ. ನಾನು ಅರಶಿನಕ್ಕೆ ಸುಣ್ಣ ಹಾಕಿದಾಗ ಕೆಂಪಾಯಿತು, ನೀನು ಹಾಕಿದಾಗ ಆಗಲಿಲ್ಲ ಎಂದರೆ, ಅದು ಸತ್ಯ ಅಲ್ಲ ಆಗ ನಾನೇನೋ ಟ್ರಿಕ್ ಮಾಡಿದ್ದೇನೆ ಎನ್ನುವುದು ಮಾತ್ರ ಸತ್ಯ!” ಎಂದಿದ್ದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...