ಏಪ್ರಿಲ್ 25 ರಂದು ಯುರೋಪಿನ ದೇಶವಾದ ಅಲ್ಬೇನಿಯಾದಲ್ಲಿ ನಡೆದ ಚುನಾವಣೆಯ ನಂತರ, ಅಲ್ಲಿನ ಪ್ರಧಾನಿ ‘ಎಡಿ ರಾಮ’ ತನ್ನ ಹೊಸ ಸಚಿವ ಸಂಪುಟವನ್ನು ಘೋಷಿಸಿದ್ದಾರೆ. ತನ್ನ ಹೊಸ ತಂಡದ 16 ಹುದ್ದೆಗಳಲ್ಲಿ 12 ಸ್ಥಾನಗಳನ್ನು ಮಹಿಳೆಯರಿಗೆ ನೀಡುವ ಮೂಲಕ ದೇಶದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಹೀಗಾಗಿ ಅಲ್ಬೇನಿಯಾದ ಹೊಸ ಸರ್ಕಾರದ 12 ಸಚಿವಾಲಯಗಳಿಗೆ ಎಂಟು ಮಹಿಳಾ ಮತ್ತು ನಾಲ್ಕು ಪುರುಷರು ನೇತೃತ್ವ ವಹಿಸಲಿದ್ದಾರೆ. ಕ್ಯಾಬಿನೇಟ್ ದರ್ಜೆಯಿಲ್ಲದ ಇತರ ನಾಲ್ಕು ಮಂತ್ರಿ ಸ್ಥಾನಕ್ಕೆ ಮಹಿಳೆಯರೇ ಆಯ್ಕೆಯಾಗಿದ್ದಾರೆ. ಪ್ರಧಾನಿಯಿಂದ ಆಯ್ಕೆಯಾಗಿರುವ ಒಟ್ಟು 16 ಸಚಿವರಲ್ಲಿ ನಾಲ್ವರು ಮಂತ್ರಿಗಳು ರಾಜಕೀಯ ಅನನುಭವಿಗಳಾಗಿದ್ದು, ಉಳಿದ ಸಚಿವರು ರಾಜಕೀಯದಲ್ಲಿ ಸಕ್ರಿಯರಾಗಿರುವವರಾಗಿದ್ದಾರೆ.
ಇದನ್ನೂ ಓದಿ: ನಮ್ಮ ಆಡಳಿತದಲ್ಲಿ ‘ಎಮ್ಮೆ-ಗೂಳಿ-ಮಹಿಳೆ’ ಸುರಕ್ಷಿತ: ಆದಿತ್ಯನಾಥ್
ಮಾಜಿ ಹಣಕಾಸು ಸಚಿವರಾಗಿದ್ದ ಅರ್ಬೆನ್ ಅಹ್ಮೆತಾಜ್ ಅವರನ್ನು ದೇಶದ ಉಪ ಪ್ರಧಾನಿಯಾಗಿ ನೇಮಿಸಲಾಯಿತು. ವಿದೇಶಿ, ರಕ್ಷಣಾ, ಆಂತರಿಕ, ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಮತ್ತು ಸಂಸ್ಕೃತಿ ಸಚಿವಾಲಯಗಳಿಗೆ ಓಲ್ಟಾ ಕ್ಷಾಕಾ, ನಿಕೊ ಪೆಲೆಶಿ, ಬ್ಲೆಂಡಿ ಕುಸಿ ಬೆಲಿಂಡ ಬಲ್ಲುಕು, ಒಗೆರ್ಟಾ ಮನಸ್ತಿರ್ಲಿಯು, ಇವಿಸ್ ಕುಶಿ ಮತ್ತು ಎಲ್ವಾ ಮಾರ್ಗರಿಟಿಯನ್ನು ನೇಮಿಸಲಾಗಿದೆ.
ತೆರಿಗೆ ನಿರ್ದೇಶನಾಲಯದ ಮಾಜಿ ನಿರ್ದೇಶಕರಾದ ಡೆಲಿನಾ ಇಬ್ರಾಹಿಮಿಗೆ ಹಣಕಾಸು ಖಾತೆಯನ್ನು ನೀಡಲಾಗಿದ್ದು, ಕೃಷಿಗೆ ಸಹಾಯಧನ ನೀಡುವ ಮುಖ್ಯ ಸಂಸ್ಥೆಯಾದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಏಜೆನ್ಸಿಯ ಮಾಜಿ ಮುಖ್ಯಸ್ಥೆ ಫ್ರಿಡಾ ಕ್ರಿಫ್ಕಾ ಅವರನ್ನು ಕೃಷಿ ಸಚಿವರನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ: ದಲಿತ ಮಹಿಳೆಯರನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾಗೊಳಿಸಿದ ನಿಮ್ಹಾನ್ಸ್: ಆರೋಪ
ಕಾನೂನುಗಳ ಸಂಸದೀಯ ಆಯೋಗದ ಮಾಜಿ ಮುಖ್ಯಸ್ಥ ಉಲ್ಸಿ ಮಂಜ ಅವರನ್ನು ನ್ಯಾಯಾಂಗ ಸಚಿವರನ್ನಾಗಿ ನೇಮಿಸಲಾಯಿತು. ಕ್ಯಾಬಿನೇಟ್ ದರ್ಜೆ ಇಲ್ಲದ ನಾಲ್ವರು ಮಂತ್ರಿಗಳಲ್ಲಿ ಸಂಸತ್ ವ್ಯವಹಾರದ ಸಚಿವೆಯಾಗಿ ಎಲಿಸಾ ಸ್ಪಿರೊಪಾಲಿ, ಉದ್ಯಮಶೀಲತೆ ರಕ್ಷಣೆಯ ಮಂತ್ರಿಯಾಗಿ ಎಡೋನಾ ಬಿಲಾಲಿ, ಸೇವೆಗಳ ಸಚಿವರಾಗಿ ಮಿಲ್ವಾ ಎಕೊನೊಮಿ ಮತ್ತು ಯುವ ಮತ್ತು ಮಕ್ಕಳ ಸಚಿವರಾಗಿ ಬೋರಾ ಮುಝಾಕಿ ನೇಮಕವಾಗಿದ್ದಾರೆ.
ಪ್ರಧಾನಿ ಇಡಿ ರಾಮ ಅವರು ದೇಶದ ಎಡಪಂಥೀಯ ಪಕ್ಷವಾದ ಸೋಷಿಯಲಿಸ್ಟ್ ಪಾರ್ಟಿ ಆಫ್ ಅಲ್ಬೇನಿಯಾದ ಅಧ್ಯಕ್ಷರೂ ಆಗಿದ್ದಾರೆ. ಅವರು 2013 ರಿಂದ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಬೇನಿಯಾ, ಆಗ್ನೇಯ ಯುರೋಪಿನ ಬಾಲ್ಕನ್ ಪರ್ಯಾಯ ದ್ವೀಪದಲ್ಲಿರುವ ದೇಶವಾಗಿದೆ. ‘ತಿರಾನಾ’ ದೇಶದ ರಾಜಧಾನಿಯಾಗಿದ್ದು, ದೇಶವು ಅನೇಕ ಕೋಟೆಗಳು ಮತ್ತು ಪುರಾತತ್ವ ಸ್ಥಳಗಳನ್ನು ಹೊಂದಿದೆ.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು



ನಮ್ಮಲ್ಲಿ ಇನ್ನೂ ಶೇಕಡಾ ೩೩ರಶ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕೊಡಲು ಸಾಧ್ಯವಾಗಿಲ್ಲ.