ಅಫ್ಘಾನಿಸ್ತಾನದಲ್ಲಿನ 20 ವರ್ಷಗಳ ಯುದ್ಧವನ್ನು “ಕಾರ್ಯತಂತ್ರದ ವೈಫಲ್ಯ” ಎಂದು ಅಮೆರಿಕದ ಉನ್ನತ ಮಿಲಿಟರಿ ಅಧಿಕಾರಿ ಮಂಗಳವಾರ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರದ ಪತನ ಮತ್ತು ತಾಲಿಬಾನ್ ತ್ವರಿತವಾಗಿ ದೇಶವನ್ನು ಸ್ವಾಧೀನ ಮಾಡದಂತೆ ತಡೆಗಟ್ಟಲು ಹಲವಾರು ಸಾವಿರ ಸೈನಿಕರನ್ನು ಇಟ್ಟುಕೊಳ್ಳಲು ತಾನು ಒಲವು ತೋರಿದ್ದಾಗಿ ಅಮೆರಿಕ ಸಂಸತ್‌ನಲ್ಲಿ ಅವರು ಒಪ್ಪಿಕೊಂಡಿದ್ದಾರೆ.
ಅಮೆರಿಕ ರಕ್ಷಣಾ ಪಡೆಯ ಮುಖ್ಯಸ್ಥರಾಗಿರುವ ಮಾರ್ಕ್ ಮಿಲ್ಲೆ ಅವರು, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಅಮೆರಿಕ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನ್ನೆತ್ ಮೆಕೆಂಜಿ ಜೊತೆಯಲ್ಲಿ ಈ ಹೇಳಿಕೆಯನ್ನು ಅಮೆರಿಕ ಸಂಸತ್ತಿನಲ್ಲಿ ನೀಡಿದ್ದಾರೆ.
ಇದನ್ನೂ ಓದಿ: ಸೋನು ಸೂದ್ ಕಚೇರಿಗಳ ಮೇಲೆ ಐಟಿ ದಾಳಿ: ತಾಲಿಬಾನ್ ಮನಸ್ಥಿತಿ ಎಂದ ಶಿವಸೇನೆ
ಅಫ್ಘಾನಿಸ್ತಾನದಲ್ಲಿ ಅಮೆರಿಕಾವು ತನ್ನ ಸುದೀರ್ಘ ಯುದ್ಧವನ್ನು ಕೊನೆಗೊಳಿಸಿದ ನಂತರ, ಇದೇ ಮೊದಲ ಬಾರಿಗೆ ಸಂಸತ್‌ನಲ್ಲಿ ಈ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಇದು ಸ್ಪಷ್ಟವಾಗಿದೆ, ಅಫ್ಘಾನಿಸ್ತಾನದಲ್ಲಿನ ಯುದ್ಧವು ನಾವು ಬಯಸಿದಂತೆ ಕೊನೆಗೊಂಡಿಲ್ಲ. ತಾಲಿಬಾನ್ ಈಗ ಕಾಬೂಲ್‌ನಲ್ಲಿ ಅಧಿಕಾರದಲ್ಲಿದೆ. ತಾಂತ್ರಿಕವಾಗಿ, ಯುದ್ಧವು ಕಳೆದುಹೋಗಿದೆ, ಆದರೆ ಶತ್ರು ಕಾಬೂಲ್‌ನಲ್ಲಿದ್ದಾನೆ, ಇದು ಕಾರ್ಯತಂತ್ರದ ವೈಫಲ್ಯವಾಗಿದೆ” ಎಂದು ಮಿಲ್ಲೆ ಮಂಗಳವಾರ ಸಂಸತ್ತಿನ ಸಶಸ್ತ್ರ ಸೇವಾ ಸಮಿತಿಗೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಶೀಘ್ರವಾಗಿ ವಾಪಾಸಾಗುವುದು ಅಫಘಾನ್ ಸರ್ಕಾರ ಮತ್ತು ಮಿಲಿಟರಿಯ ಪತನಕ್ಕೆ ಕಾರಣ ಆಗಬಹುದಾಗಿರುವುದರಿಂದ, ಅಲ್ಲಿ 2,500 ಸೈನಿಕರನ್ನು ಇರಿಸಬೇಕು ಎಂದು ಮಿಲ್ಲೆ ಮತ್ತು ಮೆಕೆಂಜಿ ಅಭಿಪ್ರಾಯಪಟ್ಟಿದ್ದರು.
ಅಮೆರಿಕ ಸೈನ್ಯವು ಅಫ್ಘಾನ್‌ನಿಂದ ವಾಪಾಸಾಗುತ್ತಿದ್ದಂತೆ, ತಾಲಿಬಾನ್ ಇಡೀ ದೇಶವನ್ನು ಮತ್ತೆ ವಶಕ್ಕೆ ಪಡೆದು, ಅಧಿಕಾರಕ್ಕೆ ಏರಿದೆ.
ಇದನ್ನೂ ಓದಿ: ತಾಲಿಬಾನ್ ಬಂಡುಕೋರ ಐಸ್‌ಕ್ರಿಮ್ ಸವಿದನೆ? ವೈರಲ್ ಪೋಟೋದ ನಿಜವೇನು?


