ಬೆಳಗಾವಿ ಜಿಲ್ಲೆಯ ಖಾನಪುರದ ರೈಲ್ವೆ ಹಳಿ ಮೇಲೆ ಮುಸ್ಲಿಂ ಯುವಕನ ಛಿದ್ರವಾದ ಶವ ಪತ್ತೆಯಾಗಿದೆ. ಸೆಪ್ಟಂಬರ್ 28 ರಂದು ಕೊಲೆ ನಡೆದಿರುವ ಸಂಭವವಿದ್ದು, ತಲೆ ಮತ್ತು ಕಾಲುಗಳನ್ನು ಬರ್ಬರವಾಗಿ ಕತ್ತರಿಸಿ ಎಸೆಯಲಾಗಿದೆ. ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆತನ ಕೊಲೆಗೈಯಲಾಗಿದೆ ಎಂದು ಶಂಕಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ನಿವಾಸಿ ಅರ್ಬಾಜ್ ನವಾಜ್ (27) ಎಂಬಾತನೇ ಕೊಲೆಯಾಗಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಸೆಪ್ಟಂಬರ್ 28 ರಿಂದ ಆತ ಕಾಣೆಯಾಗಿದ್ದನು ಎಂದು ಅವನ ಪೋಷಕರು ದೂರಿದ್ದಾರೆ. ಇಂದು ಮುಂಜಾನೆ ರೈಲ್ವೆ ಹಳಿ ಮೇಲೆ ಶವ ಗುರುತಿಸಿದ ರೈತರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಅರ್ಬಾಜ್ ನವಾಜ್ ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದನು. ಇದಕ್ಕೆ ಹುಡುಗಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಕೆಲ ಬಲಪಂಥೀಯ ಸಂಘಟನೆಯ ಸದಸ್ಯರು ಲವ್ ಜಿಹಾದ್ ಎಂದು ಅರ್ಬಾಜ್‌ನೊಂದಿಗೆ ಜಗಳ ಮಾಡಿದ್ದರು. ಸೆಪ್ಟೆಂಬರ್ 28ರಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಅರ್ಬಾಜ್ ನನ್ನು ಖಾನಾಪುರ ಹೊರವಲಯದ ರೈಲ್ವೆ ಹಳಿ ಮೇಲೆ ಬರ್ಬರವಾಗಿ ಕೊಲೆಗೈಯಲಾಗಿದೆ ಎಂದು ಆತನ ಕುಟುಂಬಸ್ಥರು ದೂರಿದ್ದಾರೆ.
ಗಾಂಧಿ ಜಯಂತಿಯ ದಿನವೇ ಮುಸ್ಲಿಂ ಯುವಕನಿಗೆ ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಲೆಗೈಯಲಾಗಿದೆ. ಅನ್ಯಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದುದೆ ಅದಕ್ಕೆ ಕಾರಣ. ಈ ಕೊಲೆಯಲ್ಲಿ ಹುಡುಗಿಯ ಕುಟುಂಬಸ್ಥರದ್ದು ಪಾತ್ರವಿದೆ ಎಂದು ಕೊಲೆಯಾದ ಹುಡುಗನ ತಾಯಿ ಆರೋಪಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಹಲವು ಪತ್ರಕರ್ತರು ಟ್ವೀಟ್ ಸಹ ಮಾಡಿದ್ದಾರೆ.
ರಾಮ್ ಸೇನಾ ಎಂಬ ಸಂಘಟನೆಯ ಯುವಕರು ಅರ್ಬಾಜ್ ವಿರುದ್ಧ ಪದೇ ಪದೇ ಜಗಳ ನಡೆಸುತ್ತಿದ್ದರು ಎಂದು ಸಾಮಾಜಿಕ ಜಾಲತಾಣಿಗರು ಆರೋಪಿಸಿದ್ದಾರೆ.
A barbaric murder coming to light on Gandhi Jayanti. A young Muslim boy tortured & beheaded over an alleged interfaith love affair with a Hindu girl in Belagavi's Khanapur. Mother has alleged that the girl's family has a role to play in her son's murder. Investigation on. pic.twitter.com/6XGN4soo7A
— Deepak Bopanna (@dpkBopanna) October 2, 2021
barbaric murder of Muslim youth coming to light:
A young boy "Arbaz" tortured & brutally beheaded over an alleged interfaith love affair with a Hindu girl in Belagavi's Khanapur.
His head & legs severed from the body.
If this happened in Afghanistan, it would be prime time news! pic.twitter.com/rZQisxmlq8— Samiullah Khan (@SamiullahKhan__) October 2, 2021
Unidentified miscreants killed a man, and threw his body on the railway tracks after cutting off his head and a leg, near Khanapur in Belagavi district on Saturday. Police suspect he was killed by right wing organisation on charges of love jehad or seducing an innocent Hindu girl
— Rishikesh Bahadur D (@Rishiscribe) October 2, 2021
ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು ಇದಕ್ಕಾಗಿ ತಂಡವೊಂದನ್ನು ರಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೋರಲ್ ಪೊಲೀಸಿಂಗ್: ಕರಾವಳಿ ಕರ್ನಾಟಕದಲ್ಲಿ ಆಗುತ್ತಿರುವ ನಷ್ಟವೆಷ್ಟು?


