Homeಮುಖಪುಟಜೇಮ್ಸ್‌ ಬಾಂಡ್‌‌ನ ‘007’ ಬಳಸಿ ಮೋದಿಯನ್ನು ಟ್ರೋಲ್‌ ಮಾಡಿದ ಟಿಎಂಸಿ

ಜೇಮ್ಸ್‌ ಬಾಂಡ್‌‌ನ ‘007’ ಬಳಸಿ ಮೋದಿಯನ್ನು ಟ್ರೋಲ್‌ ಮಾಡಿದ ಟಿಎಂಸಿ

- Advertisement -
- Advertisement -

ತೃಣಮೂಲ ಕಾಂಗ್ರೆಸ್‌ನ ಇತ್ತೀಚಿನ ದಾಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಜೇಮ್ಸ್ ಬಾಂಡ್ ರೀತಿ ಚಿತ್ರಿಸಲಾಗಿದೆ. “007” ಬ್ರಿಟಿಷ್ ಗೂಢಾಚಾರರ ಐಕಾನ್ ಸಂಖ್ಯೆಯಾಗಿದ್ದು, ಅದನ್ನು ಮೋದಿಗೆ ಅನ್ವಯಿಸಿ ಟ್ರೋಲ್ ಮಾಡಲಾಗಿದೆ.

ಸೂಟು ಧರಿಸಿ ನಡೆದುಕೊಂಡು ಬರುತ್ತಿರುವ ಮೋದಿ ಚಿತ್ರವನ್ನು ಪೋಸ್ಟರ್‌‌ ವಿನ್ಯಾಸದಲ್ಲಿ ಬಳಸಿದ್ದು, ತೃಣಮೂಲ ಕಾಂಗ್ರೆಸ್‌ ಹಿರಿಯ ನಾಯಕ ಡೆರೆಕ್ ಒಬ್ರೈನ್ ಅವರು ಪೋಸ್ಟ್‌ ಮಾಡಿದ್ದಾರೆ. ಈ ಮೀಮ್‌ನಲ್ಲಿ ಪ್ರಧಾನಿ ಮೋದಿಯವರನ್ನು ಪ್ರಸಿದ್ಧವಾದ “ಬಾಂಡ್ ಪೋಸ್”ನಲ್ಲಿ ತೋರಿಸಲಾಗಿದೆ.

ಮೋದಿಯವರು ತನ್ನನ್ನು ಪರಿಚಯಿಸಿಕೊಳ್ಳುತ್ತಿರುವುದಾಗಿ ಬಿಂಬಿಸಲಾಗಿದೆ. “ಅವರು ನನ್ನನ್ನು 007 ಎಂದು ಕರೆಯುತ್ತಾರೆ” ಎಂದು ಶೀರ್ಷಿಕೆ ಕೊಡಲಾಗಿದೆ. “0 ಅಭಿವೃದ್ಧಿ, 0 ಆರ್ಥಿಕ ಬೆಳವಣಿಗೆ, 7 ವರ್ಷಗಳ ಆರ್ಥಿಕ ದುರಾಡಳಿತ” ಎಂದು ಕೆಳಗೆ ವಿವರಣೆ ನೀಡಲಾಗಿದೆ.

ಜೇಮ್ಸ್ ಬಾಂಡ್ ಚಲನಚಿತ್ರಗಳಲ್ಲಿ “007” ಎಂಬುದು ಕೊಲ್ಲಲು ಪರವಾನಗಿ ಪಡೆದ ಏಜೆಂಟ್‌‌ನನ್ನು ಸೂಚಿಸುತ್ತದೆ. ಇದನ್ನು ತೃಣಮೂಲ ಕಾಂಗ್ರೆಸ್‌ ಬಳಸಿಕೊಂಡು, ಏಳು ವರ್ಷಗಳಲ್ಲಿ ಶೂನ್ಯ ಅಭಿವೃದ್ಧಿಯನ್ನು ಮೋದಿ ಸರ್ಕಾರ ಸಾಧಿಸಿದೆ ಎಂದು ಕುಟುಕಿದೆ. ಈ ವರ್ಷಾರಂಭದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಏಳು ವರ್ಷಗಳನ್ನು ಪೂರೈಸಿದ್ದಾರೆ.

ಆರ್ಥಿಕ ಕುಸಿತದ ಕುರಿತು ತೃಣಮೂಲ ಕಾಂಗ್ರೆಸ್‌ ಯಾವುದೇ ಉದಾಹರಣೆಗಳನ್ನು ನೀಡದಿದ್ದರೂ, ನೋಟು ರದ್ಧತಿ, ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಸಾಕಷ್ಟು ಆಕ್ಷೇಪಗಳು ಈ ಹಿಂದೆಯೇ ವ್ಯಕ್ತವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಇತಿಹಾಸ ನಿರ್ಮಿಸಿದೆ.


ಇದನ್ನೂ ಓದಿರಿ: ಜೊಮೊಟೊ ಏಜೆಂಟ್‌ ಹಿಂದಿ ಪ್ರೀತಿ: ತೀವ್ರ ಆಕ್ಷೇಪದ ಬಳಿಕ ಕಂಪನಿ ಕ್ಷಮೆಯಾಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...