Homeಮುಖಪುಟಜೊಮೊಟೊ ಏಜೆಂಟ್‌ ಹಿಂದಿ ಪ್ರೀತಿ: ತೀವ್ರ ಆಕ್ಷೇಪದ ಬಳಿಕ ಕಂಪನಿ ಕ್ಷಮೆಯಾಚನೆ

ಜೊಮೊಟೊ ಏಜೆಂಟ್‌ ಹಿಂದಿ ಪ್ರೀತಿ: ತೀವ್ರ ಆಕ್ಷೇಪದ ಬಳಿಕ ಕಂಪನಿ ಕ್ಷಮೆಯಾಚನೆ

- Advertisement -
- Advertisement -

ಗ್ರಾಹಕರೊಬ್ಬರ ಜೊತೆ ಆನ್‌ಲೈನ್‌ ಡೆಲಿವರಿ ಸಂಸ್ಥೆಯಾದ ಜೊಮೊಟೊದ ಗ್ರಾಹಕ ಸೇವಾ ಎಕ್ಸಿಕ್ಯೂಟಿವ್‌‌ ನಡೆಸಿದ ಸಂಭಾಷಣೆಯು ಟ್ವಿಟರ್‌ನಲ್ಲಿ ವೈರಲ್‌ ಆದ ಬಳಿಕ, ಜೊಮೊಟೊ ಕಂಪನಿಯು ಮಂಗಳವಾರ ಕ್ಷಮೆಯಾಚಿಸಿದೆ.

ಮರುಪಾವತಿಗಾಗಿ ಯತ್ನಿಸಿದ ವಿಕಾಸ್‌ ಅವರು ಜೊಮೊಟೊ ಗ್ರಾಹಕ ಸೇವಾ ಎಕ್ಸಿಕ್ಯೂಟಿವ್‌‌ ಜೊತೆ ನಡೆಸಿದ ಸಂವಹನದ ಸ್ಕ್ರೀನ್‌ ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಸ್ಕ್ರೀನ್‌ಶಾಟ್‌ಗಳ ಪ್ರಕಾರ ಗ್ರಾಹಕ ವಿಕಾಶ್ ಅವರು, ತಮಗೆ ತಲುಪದ ಆರ್ಡರ್‌ಗೆ ಸಂಬಂಧಿಸಿದಂತೆ ರೆಸ್ಟೋರೆಂಟ್‌ನಿಂದ ಮರುಪಾವತಿ ಪಡೆಯಲು ಪ್ರಯತ್ನಿಸುತ್ತಿದ್ದರು. ಜೊಮೊಟೊ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಅವರಿಂದ ಮರುಪಾವತಿಗಾಗಿ ಕೋರಿದರು.

ಜೊಮೊಟೊ ಎಕ್ಸಿಕ್ಯೂಟಿವ್‌‌, “ಕರೆ ಮಾಡಿ ಸಂಪರ್ಕಿಸಲು ಐದು ಬಾರಿ ಯತ್ನಿಸಲಾಯಿತು. ಭಾಷೆ ಸಮಸ್ಯೆಯಿಂದಾಗಿ ಸಂವಹನ ಸಾಧ್ಯವಾಗಿಲ್ಲ” ಎಂದಿದ್ದಾರೆ. ಕಂಪನಿಯು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದೆ.  ತಮಿಳು ಮಾತನಾಡುವ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ವಿಕಾಸ್ ಹೇಳಿದ್ದಾರೆ. ಹೀಗೆ ಹೇಳಿದಾಗ, “ಹಿಂದಿ ನಮ್ಮ ರಾಷ್ಟ್ರೀಯ ಭಾಷೆ” ಮತ್ತು “ಪ್ರತಿಯೊಬ್ಬರೂ ಹಿಂದಿ ತಿಳಿದಿರುವುದು ಬಹಳ ಸಾಮಾನ್ಯವಾಗಿದೆ. ಇದು ನಿಮ್ಮ ಮಾಹಿತಿಗೆ” ಎಂದು ಎಕ್ಸಿಕ್ಯೂಟಿವ್ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಅಂತಿಮವಾಗಿ ಎಕ್ಸಿಕ್ಯೂಟಿವ್‌ ಚಾಟ್‌ನಲ್ಲಿ, “ಉಂಟಾದ ತೊಂದರೆಗೆ ನಾವು ನಿಜವಾಗಿಯೂ ವಿಷಾದಿಸುತ್ತೇವೆ. ಆದರೆ ಈ ದುರದೃಷ್ಟಕರ ತಪ್ಪಿಗೆ ಕ್ಷಮೆಯಾಚಿಸುವುದನ್ನು ಹೊರತುಪಡಿಸಿ ನಾವು ನಿಮಗೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ” ಎಂದಿದ್ದಾರೆ.

ವಿಕಾಸ್‌‌ಗೆ ಹಿಂದಿ ಗೊತ್ತಿಲ್ಲದ ಕಾರಣ ಮರುಪಾವತಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಆರೋಪಿಸಿದೆ. ಕಂಪನಿಯನ್ನು ಉದ್ದೇಶಿಸಿ, “ನೀವು ಗ್ರಾಹಕರೊಂದಿಗೆ ಮಾತನಾಡುವ ರೀತಿಯಲ್ಲ” ಎಂದು ವಿಕಾಸ್‌ ತಿಳಿಸಿದ್ದಾರೆ.

ಟ್ವೀಟ್ ಮಾಡಿದ ತಕ್ಷಣ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್‌ ಹಾಗೂ ರೀಟ್ವೀಟ್‌ ಮಾಡಿದ್ದಾರೆ. ಇದಲ್ಲದೆ, #Reject_Zomato ಮತ್ತು #StopHindiImposition ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್‌ ಆಗಿವೆ.

ಧರಮ್‌ಪುರಿ ಸಂಸದ ಸೆಂಥಿಲ್‌ಕುಮಾರ್ ಕೂಡ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಹಿಂದಿ ಯಾವಾಗ ರಾಷ್ಟ್ರೀಯ ಭಾಷೆಯಾಯಿತು ಎಂದು ಕೇಳಿದ್ದಾರೆ. ಕಂಪನಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಭಾರತೀಯ ಸಂವಿಧಾನದ 343ನೇ ವಿಧಿಯಲ್ಲಿ ವಿವರಿಸಿರುವ ಅಧಿಕೃತ ಭಾಷೆಗಳಲ್ಲಿ ಹಿಂದಿ ಒಂದು ಭಾಷೆಯಾಗಿದೆ. ಆದರೆ ಯಾವುದೇ ಭಾಷೆಯನ್ನು “ರಾಷ್ಟ್ರೀಯ ಭಾಷೆ” ಎಂದು ಘೋಷಿಸಲಾಗಿಲ್ಲ. ಇತರ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಜನರ ಮೇಲೆ ಹಿಂದಿ ಹೇರಿಕೆಯನ್ನು ದಕ್ಷಿಣ ಭಾರತದ ರಾಜ್ಯಗಳು ಮೊದಲಿನಿಂದಲೂ ವಿರೋಧಿಸಿವೆ.

ಜೊಮೊಟೊ ಕಂಪನಿಯು, ತಮ್ಮ ಏಜೆಂಟ್‌ನ ವರ್ತನೆಗೆ ಕ್ಷಮೆಯಾಚಿಸಿದೆ. ತಮಿಳುನಾಡು ಜನತೆಯಲ್ಲಿ ಕ್ಷಮೆ ಕೋರಿ ಜೊಮೊಟೊ ಸಂಸ್ಥೆಯ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್ ಮಾಡಿದೆ. ಇಂಗ್ಲಿಷ್‌ ಹಾಗೂ ತಮಿಳು ಭಾಷೆಯಲ್ಲಿ ಕ್ಷಮೆ ಕೋರಲಾಗಿದೆ.

“ನಮ್ಮ ವೈವಿಧ್ಯಮಯ ಸಂಸ್ಕೃತಿಯ ಕಡೆಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಏಜೆಂಟರನ್ನು ಕೆಲಸದಿಂದ ತೆಗೆಯಲಾಗಿದೆ. ಆ ಏಜೆಂಟರ ನಡವಳಿಕೆಯು ಜೊಮೊಟೊ ಕಂಪನಿಯ “ಸೂಕ್ಷ್ಮತೆಯ ತತ್ವಗಳಿಗೆ” ವಿರುದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.

ಈ ಗ್ರಾಹಕ ಏಜೆಂಟ್‌ನ ಹೇಳಿಕೆಗಳು ಸಂಸ್ಥೆಯನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಸಂಸ್ಥೆಯು ಭಾಷೆ ಮತ್ತು ವೈವಿಧ್ಯತೆ ಕಡೆಗಿದೆ ಎಂದಿದೆ.

“ತಮಿಳು ವರ್ಷನ್‌ ಆಪ್‌‌ಅನ್ನು ಜೊಮೊಟೊ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ. ತಮಿಳಿನಲ್ಲಿಯೇ ನಾವು ಈಗಾಗಲೇ ವ್ಯವಹಿಸುತ್ತಿದ್ದೇವೆ. ತಮಿಳು ಕಾಲ್‌ ಸೆಂಟರ್‌‌ಅನ್ನು ಕೊಯಮತ್ತೂರಿನಲ್ಲಿ ತೆರೆಯಲು ಸಿದ್ಧತೆ ನಡೆದಿದೆ” ಎಂದು ಹೇಳಿದೆ.


ಇದನ್ನೂ ಓದಿರಿ: ಹಿಂದಿ ಹೇರಿಕೆ ನಿಲ್ಲಿಸಿ: ಟ್ವಿಟರ್‌ನಲ್ಲಿ ಗಣ್ಯರು, ಕಲಾವಿದರಿಂದ StopHindiImposition ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...