Homeಮುಖಪುಟ‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

- Advertisement -
- Advertisement -

ನವೆಂಬರ್‌ 2ರಂದು ಬಹು ನಿರೀಕ್ಷಿತ ‘ಜೈ ಭೀಮ್‌’ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿದೆ. ನಿರೀಕ್ಷೆಯನ್ನು ಹುಸಿಗೊಳಿಸದೆ ಸಮತಾ ಸಮಾಜದ ನಿರ್ಮಾಣಕ್ಕೆ ಮಿಡಿದಿದೆ.

ಜ್ಯೋತಿಕಾ-ಸೂರಿಯ ಅವರ 2ಡಿ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್‌ನಲ್ಲಿ ತಯಾರಾದ, ನಿಜ ಘಟನೆಯನ್ನು ಆಧರಿಸಿದ ತಮಿಳು ಸಿನಿಮಾ ‘ಜೈ ಭೀಮ್‌’, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗೂ ಡಬ್‌ ಆಗಿರುವುದರಿಂದ ಅದ್ಭುತ ಕಥನವೊಂದು ಬಹುಭಾಷಾ ಸಮುದಾಯವನ್ನು ಪರಿಣಾಮಕಾರಿಯಾಗಿ ತಲುಪಲು ಕಾರಣವಾಗಿದೆ.

ಟಿ.ಜೆ.ಜ್ಞಾನವೇಲ್‌ ನಿರ್ದೇಶನಕ್ಕೆ ಸಂವೇದನಾಶೀಲ ಮನಸ್ಸುಗಳು ಮಿಡಿದಿವೆ. ಸೂರಿಯ, ಪ್ರಕಾಶ್‌ ರಾಜ್‌, ಕೆ.ಮಣಿಕಂದನ್‌, ಲಿಜೊಮೊಲ್‌ ಜೋಸ್‌‌, ರಾವ್‌ ರಮೇಶ್‌, ರಜಿಶಾ ವಿಜಯನ್‌ ಮೊದಲಾದವರು ನಟಿಸಿರುವ ಜೈ ಭೀಮ್‌, ನ್ಯಾಯಾಂಗದ ಸುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ. ಅಧಿಕಾರಶಾಹಿ ಕ್ರೌರ್ಯವನ್ನು ಬಿಚ್ಚಿಡುತ್ತಾ ನ್ಯಾಯಾಂಗದ ಮೇಲಿನ ಭರವಸೆಯನ್ನು ಎತ್ತಿ ಹಿಡಿಯುತ್ತದೆ. ಸಿನಿಮಾ ನೋಡಿದವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಮೂಡಿಬರಬೇಕೆಂದು ಪ್ರೋತ್ಸಾಹಿಸಿದ್ದಾರೆ.

ಅಲಕ್ಷಿತ ಸಮುದಾಯಗಳ ಕುರಿತು ತಮಿಳು ಚಿತ್ರದಲ್ಲಿ ಮೂಡಿಬರುತ್ತಿರುವ ಸಾಲು ಸಾಲು ಸಿನಿಮಾಗಳ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪ.ರಂಜಿತ್‌ ಅವರ ‘ಕಾಲಾ’, ‘ಮದ್ರಾಸ್‌’, ‘ಸರಪಟ್ಟ ಪರಂಬರೈ’, ವೆಟ್ಟಿಮಾರನ್‌ ಅವರ ‘ಅಸುರನ್‌’, ‘ವಿಸಾರಣೈ’, ಮಾರಿ ಸೆಲ್ವರಾಜ್‌ ಅವರ ‘ಪೆರಿಯೇರುಮ್‌ ಪೆರುಮಾಳ್‌’, ‘ಕರ್ಣ‌ನ್‌’ ಸಾಲಿಗೆ ಟಿ.ಜೆ.ಜ್ಞಾನವೇಲ್‌‌ ಅವರ ‘ಜೈಭೀಮ್‌’ ಸೇರಿದೆ ಎಂದು ಕನ್ನಡದ ಮನಸ್ಸುಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿದ್ದು, ಸಾಂಕೇತಿಕವಾಗಿ ಕೆಲವು ಲೇಖಕರ ಟಿಪ್ಪಣಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿರಿ: ‘ಜೈ ಭೀಮ್‌’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ

ಜಗದೀಶ್‌ ಕೊಪ್ಪ ಅವರ ಅಭಿಪ್ರಾಯ

“…. ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಜೈ ಭೀಮ್ ನಾಯಕ ನಟ ಸೂರ್ಯನ ಪ್ರತಿಭೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ತಮಿಳು ಚಿತ್ರರಂಗದಲ್ಲಿ ದುಬಾರಿ ಎನಿಸಬಹುದಾದ ಸಂಭಾವನೆ ಪಡೆಯುವ ನಟರಲ್ಲಿ ಧನುಷ್ ಮತ್ತು ಸೂರ್ಯ ಮುಖ್ಯರಾದವರು. ಆದರೆ, ಚಿತ್ರಕಥೆಗೆ ಸರಿ ಸಮಾನರಾಗಿ ತಮ್ಮ ಸ್ಟಾರ್ ಗಿರಿಯ ಇಮೇಜ್ ಅನ್ನು ಪಕ್ಕಕ್ಕೆ ಇಟ್ಟು ಅಭಿನಯಿಸುವುದರಲ್ಲಿ ಈ ಇಬ್ಬರು ನಾಯಕರು ಇಡೀ ದಕ್ಷಿಣ ಭಾರತಕ್ಕೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ವಿಜಯ್ ಸೇತುಪತಿ ಹೆಸರನ್ನು ಸಹ ಸೇರಿಸಬಹುದು.”

ನಿನ್ನೆ ಬೆಳಿಗ್ಗೆ ಚೆನ್ನೈ ನಗರದಲ್ಲಿ ನಡೆದ ಪ್ರೀಮಿಯರ್ ಷೋ ನಂತರ ಸಂಜೆ ವೇಳೆಗೆ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್‌ ಹಾಗೂ ಎನ್.ಡಿ.ಟಿ.ವಿ. ಮಾಧ್ಯಮಗಳ ಜಾಲತಾಣಗಳಲ್ಲಿ ಹರಿದು ಬಂದ ವಿಮರ್ಶೆ ನೋಡಿ ಆಶ್ಚರ್ಯಪಟ್ಟೆ. ಇತ್ತೀಚಿನ ದಿನಗಳಲ್ಲಿ ಬಂದ ಶ್ರೇಷ್ಠ ಮಟ್ಟದ ವಿಮರ್ಶೆ ಅದಾಗಿತ್ತು. ಕಳೆದ ವರ್ಷ ನಮ್ಮ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಕಥೆ ಆದರಿಸಿದ ಸಿನಿಮಾ ನಿರ್ಮಿಸಿ ಯಶಸ್ವಿಯಾಗಿದ್ದ ಸೂರಿಯ, ಈಗ 1995ರ ನೈಜ ಘಟನೆ ಆದರಿಸಿದ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರಶಂಸೆಗೆ ಪಾತ್ರನಾಗಿದ್ದಾನೆ. ನಮ್ಮ ಅಪ್ಪುವಿನ ವಯಸ್ಸು ಸೂರ್ಯನದು. (46) ಆದರೆ, ಪೇರಳಗನ್ ಹಾಗೂ ಸಿಂಘಂ ಸರಣಿಯ ಚಿತ್ರಗಳ ಮೂಲಕ ತಮಿಳು ರಸಿಕರ ಮನಗೆದ್ದ ನಟ.

ಇಲಿ, ಹಾವು ಹಿಡಿದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಟಿಗೆ ಸಿಲುಕಿ ನರಳಿದ ಇತಿಹಾಸವನ್ನು ಈ ಚಿತ್ರದಲ್ಲಿ ನಿರ್ದೇಶಕ ಜ್ಞಾನವೇಲ್ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಈ ಹಿಂದೆ ರಾಷ್ಟ್ರಪ್ರಶಸ್ತಿ ಪಡೆದ ವಿಸಾರಣೈ ಸಿನಿಮಾದ ಹಾಗೆ ಈ ಸಿನಿಮಾ ಕೂಡ ಪ್ರೇಕ್ಷರನ್ನು ಗಂಭೀರ ಚಿಂತನೆಗೆ ದೂಡುತ್ತದೆ.

ನತದೃಷ್ಟರಿಗೆ ನ್ಯಾಯ ದೊರಕಿಸಿಕೊಡುವ ವಕೀಲನ ಪಾತ್ರದಲ್ಲಿ ಸೂರಿಯ ಅಭಿನಯ ಬಹುಕಾಲ ನಮ್ಮಲ್ಲಿ ಉಳಿಯುವಂತಹದ್ದು. ನಾಯಕಿ, ಹಾಡು, ಡ್ಯಾನ್ಸ್ , ಪೈಟಿಂಗ್ ಗಳಿಲ್ಲದ ಚಿತ್ರಗಳಲ್ಲಿ ಸ್ಟಾರ್ ನಟರು ಅಭಿನಯಿಸಬಲ್ಲರೆ? ಎಂಬ ಪ್ರಶ್ನೆಗೆ ಈ ಸಿನಿಮಾ ಸಾಕ್ಷಿಯಾಗಿದೆ.

ಧನುಷ್ ಅಭಿನಯದ ಅಸುರನ್ ಸಿನಿಮಾ ನಂತರ ನಾನು ನೋಡಿದ ಅತ್ಯುತ್ತಮ ತಮಿಳು ಚಿತ್ರಗಳಲ್ಲಿ ಜೈ ಭೀಮ್ ಒಂದು. ತಪ್ಪದೇ ಪ್ರಜ್ಞಾವಂತರು ನೋಡಬೇಕಾದ ಸಿನಿಮಾ ಇದು.

ಇದನ್ನೂ ಓದಿರಿ: ಪುನೀತ್‌ ನಿಧನ: ಅರ್ಧಕ್ಕೆ ನಿಂತು ಹೋಯಿತು ಸಾಲು ಸಾಲು ಸಿನಿಮಾ

ರಘೋತ್ತಮ ಹೋ.ಬ. ಅವರ ಅಭಿಪ್ರಾಯ

“…ಬುಡಕಟ್ಟು ಸಮುದಾಯದ ಆ ವ್ಯಕ್ತಿಯ ಹತ್ಯೆಯ ಆ ಪ್ರಕರಣವನ್ನು ಚಿತ್ರದುದ್ದಕ್ಕು ವಕೀಲ ಚಂದ್ರು ಎತ್ತಿಕೊಂಡು ಸಾಗುವ ಪರಿ ಸಿಂಪ್ಲಿ ಥ್ರಿಲ್ಲಿಂಗ್, ನ್ಯಾಯಾಲಯದ ಹೋರಾಟದ ಜೊತೆಗೆ ಕಮ್ಯುನಿಸ್ಟ್ ಪಕ್ಷವೊಂದರ ಅಡಿಯಲ್ಲು ಚಂದ್ರು ಹೋರಾಟಕ್ಕೆ ಅಣಿಯಾಗುತ್ತಾರೆ ಎಂದರೆ ಚಿತ್ರದ ಬಿರುಸು ಎಂತಹದ್ದು ಎಂಬುದನ್ನು ಯಾರಾದರೂ ಊಹಿಸಬಹುದು. ಈ ನಡುವೆ ಹಾದಿ ತಪ್ಪುತ್ತಿದ್ದ ತನಿಖೆಯನ್ನು ಸರಿ ದಾರಿಗೆ ತರುವ ಮೂಲಕ ಚಂದ್ರು ತನಿಖೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಉನ್ನತ ಅಧಿಕಾರಿಯ ಪಾತ್ರ ನಮ್ಮ ಕನ್ನಡದ ಪ್ರಕಾಶ್ ರೈ ರದ್ದು ಎಂದರೆ ಅದರ ಕಟ್ಟುವಿಕೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ…”

***

ವಿ.ಎಲ್‌.ನರಸಿಂಹಮೂರ್ತಿಯವರ ಅಭಿಪ್ರಾಯ

“Felt ashamed and guilty after watching this movie. Hats off to ‘Jai Bhim’ team. ಇಂತಹ ಎಷ್ಟು ತಬ್ಬಲಿ ಸಮುದಾಯಗಳ ಅಸಹಾಯಕತೆಯ ನಿಟ್ಟುಸಿರನ್ನ ಉಸಿರಾಡಿಕೊಂಡು ಬದುಕಿದೆ ಈ ದೇಶ !”

***

ಹರ್ಷಕುಮಾರ್‌ ಕುಗ್ವೆ ಹೀಗೆ ಬರೆಯುತ್ತಾರೆ:

“ಬುಡಕಟ್ಟು ಅಲೆಮಾರಿ ಜನರಿಗೂ ಸುಂದರವಾದ ಕನಸುಗಳಿರುತ್ತವೆ ಮತ್ತು ಆ ಕನಸುಗಳನ್ನು ನಮ್ಮ ಸೋ ಕಾಲ್ಡ್ ನಾಗರಿಕ ವ್ಯವಸ್ಥೆ ಮತ್ತು ಪ್ರಭುತ್ವಗಳು ಕ್ರೂರವಾಗಿ ಹೊಸಕಿ ಹಾಕುತ್ತವೆ ಎಂಬ ಸಾಮಾಜಿಕ ವಾಸ್ತವವನ್ನು ತೋರಿಸುವ ಸಿನಿಮಾ. ಬಹುದಿನಗಳ ವರೆಗೆ ನಮ್ಮನ್ನು ಕಾಡಬಲ್ಲ ಸಿನಿಮಾ ಇದು.

ಸಿನಿಮೀಯ ಹೀರೋಯಿಸಂನಿಂದಾಚೆಗೆ ನಿಜ ಜೀವನದ ನಿಜವಾದ ಹೀರೋ ಒಬ್ಬನ ಕೆಚ್ಚೆದೆಯ ಹೋರಾಟವನ್ನು ತಮಿಳು ಸೂಪರ್ ಸ್ಟಾರ್ ಸೂರ್ಯ ತೆರೆಯ ಮೇಲೆ ಅಭಿನಯಿಸಿ ತೋರಿಸಿರುವ ರೀತಿಯೂ ಅನನ್ಯ. ನಿರ್ದೇಶಕ ಟಿ ಜೆ ಜ್ಞಾನವೇಲುಗೆ ಕೋಟಿ ವಂದನೆ. ಪರಭಾಷೆಯ ಅದ್ಭುತ ಸಿನಿಮಾವೊಂದನ್ನು ಅಷ್ಟೇ ಒರಿಜಿನಲ್ ಆದ ರೀತಿಯಲ್ಲಿ ಡಬ್ಬಿಂಗ್ ನಿಂದಾಗಿ ಕನ್ನಡದಲ್ಲೇ ನೋಡುವಂತಾಗಿದ್ದು ಬಹಳ ಖುಷಿ. ಅಮೇಜಾನ್ ಪ್ರೈಂ ನಲ್ಲಿ JAI BHIM ಸಿನಿಮಾವನ್ನು ಕನ್ನಡದಲ್ಲೇ ನೋಡಿ. (Audio Language – ಕನ್ನಡ ಆಯ್ಕೆ ಮಾಡಿಕೊಳ್ಳಬೇಕು) ಇಂದು ಸಂಜೆ 6.30 ಕ್ಕೆ ಈ ಸಿನಿಮಾ ಕುರಿತು ಒಂದು ಕ್ಲಬ್ ಹೌಸ್ ಚರ್ಚೆ ಇದೆ. ಭಾಗವಹಿಸಿ.

***

ನಾಗೇಗೌಡ ಕೀಲಾರ ಅವರ ಅಭಿಪ್ರಾಯ

ಕನ್ನಡ ಪಿಚ್ಚರ್ ಬಂದರೆ ಮೂಗು ಮುರಿಯುತ್ತಾರೆ ಅದೇ ತಮಿಳು, ಮಲಯಾಳಂ ಪಿಚ್ಚರ್ ಬರಲಿ ಅಪ್ಪಿ ಮುದ್ದಾಡುತ್ತಾರೆ ಅಂತ ಒಂದು ಕಂಪ್ಲೈಂಟ್ ಇದೆ. ಹಿಂಗೇ ಕಂಪ್ಲೈಂಟ್ ಮಾಡುವವರು ಈ ಸಿನಿಮಾ ನೋಡ್ರಪ್ಪಾ ಆಮೇಲೆ ಅರ್ಥ ಆಗುತ್ತೆ ಕನ್ನಡ ಸಿನಿಮಾ ಮೇಲೆ ಕಂಪ್ಲೈಂಟ್ ಮಾಡುವವರು ನಮ್ಮ ಕನ್ನಡದಲ್ಲೂ ಏಕೆ ಇಂತಹ ಸಿನಿಮಾಗಳು ಬರುತ್ತಿಲ್ಲ ಅನ್ನುವ ನೋವು ಹತಾಶೆಯಿಂದ ಕಂಪ್ಲೈಂಟ್ ಮಾಡುತ್ತಾರೆ ಅನ್ನುವುದು.


ಇದನ್ನೂ ಓದಿರಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...