Homeಕರ್ನಾಟಕಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ

ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ

ನಟರ ಅಭಿಮಾನಿಗಳು ಪರಸ್ಪರ ಕ್ಷಮೆಯಾಚಿಸಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

- Advertisement -
- Advertisement -

ಕಳೆದ ಶುಕ್ರವಾರ (ಅ.29) ನಾಡಿನ ಪ್ರತಿಭಾನ್ವಿತ ನಟ ಪುನೀತ್ ರಾಜ್‌ಕುಮಾರ್‌ ನಮ್ಮನ್ನಗಲಿದ್ದಾರೆ. ಭಾನುವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಕುಟುಂಬ ವರ್ಗ, ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿರುವ ಅಪ್ಪು ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದೆ.

ಅಪ್ಪು ನಿಧನ ದುಃಖದ ಜೊತೆಗೆ ಹಲವು ಪಾಠಗಳನ್ನು ಕಲಿಸುತ್ತಿದೆ. ಕನ್ನಡ ಸಿನಿರಂಗದಲ್ಲಿ ಅತಿ ಹೆಚ್ಚು ಸುದ್ದಿಯಾಗುವ ಫ್ಯಾನ್ಸ್ ವಾರ್‌ಗೆ ಕಡಿವಾಣ ಬೀಳುವ ಸಮಯವಾಗಿದೆ. ನಟನ ಸಾವು ಎಲ್ಲರಲ್ಲೂ ಬದಲಾವಣೆ ತರುತ್ತಿದೆ ಎಂದರೆ ತಪ್ಪಾಗಲಾರದು.

ನಟ ಯಶ್, ದರ್ಶನ್, ಸುದೀಪ್, ಶಿವರಾಜ್‌ಕುಮಾರ್‌, ಧ್ರುವ ಸರ್ಜಾ ಫ್ಯಾನ್ಸ್‌ಗಳ ನಡುವೆ ಪೈಪೋಟೆ ನಡೆಯುತ್ತಲೆ ಇರುತ್ತದೆ. ಒಂದು ಹಾಡಿನಲ್ಲಿ ಬರುವ ಪದ, ಸಿನಿಮಾದ ಒಂದು ಡೈಲಾಗ್‌, ಚಿತ್ರಮಂದಿರದ ಮುಂದೆ ಹಾಕುವ ಕಟೌಟ್‌…ಹೀಗೆ ಚಿಕ್ಕ ಚಿಕ್ಕ ವಿಷಯಗಳಿಗೂ ಗಲಾಟೆಗಳು ನಡೆಯುತ್ತಲೇ ಇವೆ. ಇವುಗಳಿಗೆ ಕಡಿವಾಣ ಬೀಳುವ ಸಮಯ ಇದು ಎಂಬುದರ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪುನೀತ್‌ರವರ ‘ಬೊಂಬೆ ಹೇಳುತೈತೆ’ ಹಾಡನ್ನು ಪಾಕ್ ಅಭಿಮಾನಿ ಹಾಡಿದ್ದು 2018 ರಲ್ಲಿ!

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾರಂಗವನ್ನು ಉಳಿಸಲು ಒಟ್ಟಿಗೆ ಸಾಗೋಣ, ಮನುಷ್ಯನನ್ನೆ ಕಳೆದುಕೊಂಡ ಮೇಲೆ ಈ ಜಗಳ ಯಾಕೆ, ಚಿತ್ರರಂಗದ ಅಭಿವೃದ್ಧಿಗೆ ಒಟ್ಟಾಗಿ, ನೆಗೆಟಿವಿಟಿ ಬಿಟ್ಟು ಪಾಸಿಟಿವಿಟಿ ಹಂಚೋಣ ಎಂಬ ಪೋಸ್ಟ್‌ಗಳು ಕಾಣಿಸಿಕೊಂಡಿವೆ.

ನಟ ಸುದೀಪ್ ಅಭಿಮಾನಿಗಳು ತಮ್ಮ ಪೇಜ್‌ನಿಂದ ಬಹಿರಂಗವಾಗಿಯೇ ಕ್ಷಮೆ ಕೇಳಿ ಪತ್ರ ಬಿಡುಗಡೆ ಮಾಡಿದ್ದಾರೆ. ’ಇಷ್ಟು ದಿನ ಬೇರೆ ನಟರನ್ನು ಟ್ರೋಲ್ ಮಾಡಿದಕ್ಕೆ, ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಕ್ಷಮಿಸಿ, ಫ್ಯಾನ್ಸ್ ವಾರ್ ಬಿಟ್ಟು ಬಿಡೋಣ. ನಾವೆಲ್ಲಾ ಒಂದಾದರೇ ನಮ್ಮ ಚಿತ್ರರಂಗ ಬೆಳೆಯುತ್ತದೆ. ನಮ್ಮ ಒಂದು ದೊಡ್ಡ ಪಿಲ್ಲರ್‌ ಅನ್ನೇ ನಾವು ಕಳೆದುಕೊಂಡಿದ್ದೇವೆ. ದರ್ಶನ್, ಪುನೀತ್‌, ಯಶ್ ಸರ್‌ ಫ್ಯಾನ್ಸ್‌ ನನ್ನನ್ನು ಕ್ಷಮಿಸಿ” ಎಂದು ಮನವಿ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್‌ ಅಭಿಮಾನಿಗಳು ಕೂಡ ಇತರೆ ನಟರನ್ನು ಟ್ರೋಲ್ ಮಾಡಿದಕ್ಕಾಗಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಅಪ್ಪು ಒಡನಾಟದ ನೆನಪುಗಳನ್ನು ಹಂಚಿಕೊಂಡ ಮಿಲನ ಸಿನಿಮಾ ನಟಿ ಪಾರ್ವತಿ ತಿರುವೊತು

ಕಿಚ್ಚ ಸುದೀಪ್, ನಟ ಯಶ್ ಅವರನ್ನು ಟ್ರೋಲ್ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

ಇನ್ನು ದಾಸ ದರ್ಶನ್ ಅಭಿಮಾನಿಗಳು ಕೂಡ ಎಲ್ಲರ ಕ್ಷಮೆ ಕೇಳಿ, ಮುಂದೆ ಫ್ಯಾನ್ಸ್‌ ವಾರ್‌ಗೆ ಬರುವುದಿಲ್ಲ ಎಂದಿದ್ದಾರೆ. ’ಫ್ಯಾನ್ ವಾರ್ ನಿಲ್ಲಿಸಿ ಸಾಕು. ಮತ್ತೆ ನಾನು ಫ್ಯಾನ್ಸ್ ವಾರ್‌ಗೆ ಎಂಟ್ರಿ ಆಗಲ್ಲ’ ಎಂದು ದರ್ಶನ್, ಸುದೀಪ್, ಯಶ್ ಅವರನ್ನು ಟ್ಯಾಗ್ ಮಾಡಿ ಎಲ್ಲಾ ನಟರ ಮುಂಬರುವ ಚಿತ್ರಗಳನ್ನು ಹ್ಯಾಶ್‌ಟ್ಯಾಗ್ ಹಾಕಲಾಗಿದೆ.

ನಟರ ಅಭಿಮಾನಿಗಳ ನಿರ್ಣಯಕ್ಕೆ ಹಲವು ಮಂದಿ ಸಂತಸ ವ್ಯಕ್ತಪಡಿಸಿದ್ದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಟ್ವೀಟ್ ಮಾಡಿ, ’ನನ್ನ ವೈಯಕ್ತಿಕ ಕೋರಿಕೆ ಇಷ್ಟೇ
ಇನ್ನಾದ್ರೂ ಒಂದಷ್ಟು ಅಭಿಮಾನಿಗಳು ಫ್ಯಾನ್ಸ್ ವಾರ್ ಅನ್ನೋದನ್ನ ಬಿಟ್ಟು ಒಂದಾಗಿ ಪ್ರತಿಯೊಬ್ಬ ನಟರು ನಮ್ಮ ಕನ್ನಡಿಗರು, ನಮ್ಮವ್ರು ಅನ್ನೋ ಭಾವನೆಯೊಂದಿಗೆ ಪ್ರೀತಿಸಿ, ಗೌರವಿಸಿ, ಅಭಿಮಾನಿಸಿ ಅನ್ನೋದಷ್ಟೇ ನನ್ನ ಕೋರಿಕೆ. ಅಪ್ಪು ಸಾರ್ ನಮ್ಮೆಲ್ಲರನ್ನು ಬೆಸೆದು ಹೋದರೇನು ಅನ್ನಿಸುತ್ತಿದೆ. ಕನ್ನಡಕ್ಕಾಗಿ ಒಂದಾಗೋಣ” ಎಂದಿದ್ದಾರೆ.

ಇನ್ನು ನವೆಂಬರ್‌ 2 ರಂದು ಕನ್ನಡ ಚಿತ್ರ ನಟ, ನಟಿಯರ ಅಭಿಮಾನಿಗಳಿಂದ ಸಂಜೆ 6 ಗಂಟೆಗೆ ಟ್ವಿಟರ್‌ ಅಭಿಯಾನ ನಡೆಸಲಾಗುತ್ತಿದೆ. #UnitedKFI, #StopFanWars, #unitedsandalwood ಹ್ಯಾಶ್‌ಟ್ಯಾಗ್‌ಗಳನ್ನು ಟ್ರೆಂಡ್ ಮಾಡಲಾಗುತ್ತಿದೆ.

ಒಟ್ಟಾರೆ, ಕನ್ನಡ ಚಿತ್ರ ನಟ, ನಟಿಯರ ಅಭಿಮಾನಿಗಳು ಫ್ಯಾನ್ಸ್ ವಾರ್‌ ಅನ್ನು ಬಿಟ್ಟು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಒಂದಾಗೋಣ ಎನ್ನುತ್ತಿದ್ದಾರೆ. ನಟರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ ಅಭಿಮಾನಿಗಳ ನಡುವೆ ಈ ವಾರ್‌ ಮುಂದುವರೆಯುತ್ತಲೇ ಇತ್ತು. ಆದರೆ, ಪುನೀತ್ ರಾಜ್‌ಕುಮಾರ್‌ ಅವರ ನಿಧನ ಎಲ್ಲರ ಮನವನ್ನು ಛಿದ್ರಗೊಳಿಸಿದೆ. ಅವರ ಅಂತಿಮ ದರ್ಶನದಲ್ಲಿ ಯಶ್ ಮತ್ತು ಕಿಚ್ಚ ಸುದೀಪ್, ದರ್ಶನ್ ಅವರ ಕಣ್ಣ ಹನಿಗಳು ಅಭಿಮಾನಿಗಳ ಮನಸ್ಸು ಕದಡಿದ್ದು, ಈ ಫ್ಯಾನ್ಸ್ ವಾರ್‌ಗೆ ಅಂತ್ಯಹಾಡಲು ಕಾರಣವಾಗಿದೆ.


ಇದನ್ನೂ ಓದಿ: ಪುನೀತ್‌ ನಿಧನ: ಅರ್ಧಕ್ಕೆ ನಿಂತು ಹೋದವು ಸಾಲು ಸಾಲು ಸಿನಿಮಾಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...