Homeಮುಖಪುಟಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌' ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

- Advertisement -
- Advertisement -

ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು ಬರೆದಿರುವ ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರು ಶೇ.50 ಅಂಕ ನೀಡಿದ್ದಾರೆ.

ಮೂಲಗಳ ಪ್ರಕಾರ, ಅಂಕಗಳನ್ನು ನೀಡಿದ ಇಬ್ಬರು ಶಿಕ್ಷಕರನ್ನು ವಜಾಗೊಳಿಸಲು ವಿಶ್ವವಿದ್ಯಾಲಯವು ಶಿಫಾರಸು ಮಾಡಿದೆ. ವಿಶ್ವವಿದ್ಯಾನಿಲಯದ ಫಾರ್ಮಸಿ ಕೋರ್ಸ್‌ನ ನಾಲ್ವರು ವಿದ್ಯಾರ್ಥಿಗಳ ಉತ್ತರ ಪುಸ್ತಕಗಳನ್ನು ಆರ್‌ಟಿಐ ಅರ್ಜಿಯ ನಂತರ ಮರು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ವಿಶ್ವವಿದ್ಯಾಲಯ ಮಾಜಿ ವಿದ್ಯಾರ್ಥಿ ದಿವ್ಯಾಾಂಶು ಸಿಂಗ್ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.

ಮೂಲಗಳ ಪ್ರಕಾರ, ಡಿ.ಫಾರ್ಮಾ (ಡಿಪ್ಲೊಮಾ ಇನ್ ಫಾರ್ಮಸಿ) ಕೋರ್ಸ್‌ನ ನಾಲ್ವರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಹಲವೆಡೆ ‘ಜೈ ಶ್ರೀ ರಾಮ್’ ಎಂಬ ಘೋಷಣೆ ಇರುವುದು ಕಂಡುಬಂದಿದೆ ಮತ್ತು ಅನೇಕ ಪ್ರಮುಖ ಭಾರತೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟಿಗರ ಹೆಸರೂ ಇದೆ.

ಈ ನಾಲ್ವರು ವಿದ್ಯಾರ್ಥಿಗಳು ಶೇಕಡಾ 50ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ ಎಂದು ಆರ್‌ಟಿಐ ಮಾಹಿತಿ ಬಹಿರಂಗಪಡಿಸಿದೆ. ಉತ್ತರ ಪುಸ್ತಕಗಳನ್ನು ಮರು ಮೌಲ್ಯಪನ ಮಾಡಿದಾಗ ನಾಲ್ಕು ವಿದ್ಯಾರ್ಥಿಗಳಿಗೆ ಶೂನ್ಯ ಅಂಕಗಳನ್ನು ನೀಡಲಾಗಿದೆ.

ಆರ್‌ಟಿಐ ಮಾಹಿತಿ ಪಡೆದ ಮಾಜಿ ವಿದ್ಯಾರ್ಥಿಯು ವಿವಿಯ ಕುಲಪತಿಯಾಗಿರುವ ರಾಜ್ಯಪಾಲರಿಗೆ ಈ ಕುರಿತು  ವಿವರಗಳನ್ನು ಕಳುಹಿಸಿದ್ದು,  ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಜಭವನ ತನಿಖೆಗೆ ಆದೇಶಿಸಿದೆ. ತನಿಖೆಗೆ ವಿಶ್ವವಿದ್ಯಾಲಯದಿಂದ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ವರದಿಯನ್ನು ಆಧರಿಸಿ, ಸಂಬಂಧಪಟ್ಟ ಇಲಾಖೆಯ ಇಬ್ಬರು ಅಧ್ಯಾಪಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಫಾರ್ಮಸಿ ವಿಭಾಗದ ಇಬ್ಬರು ಅಧ್ಯಾಪಕರನ್ನು ವಜಾಗೊಳಿಸುವಂತೆ ನಾವು ಶಿಫಾರಸು ಮಾಡಿದ್ದೇವೆ.  ರಾಜಭವನದಿಂದ ಅನುಮತಿ ಪಡೆದ ನಂತರ ಅವರನ್ನು ವಜಾಗೊಳಿಸಲಾಗುವುದು ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಜೌನ್‌ಪುರದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕದನ ವಿರಾಮ ಒಪ್ಪಿಗೆ ನಡುವೆಯೇ ರಫಾ ಮೇಲೆ ದಾಳಿ ನಡೆಸಿದ ಇಸ್ರೇಲ್: 12 ಪ್ಯಾಲೆಸ್ತೀನಿಯರು...

0
ಒತ್ತೆಯಾಳುಗಳ ಬಿಡುಗಡೆ ಮೂಲಕ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿದ ನಡುವೆಯೇ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಗಾಝಾದ ದಕ್ಷಿಣ ನಗರವಾದ ರಫಾದ ಮೇಲೆ ಸೋಮವಾರ (ಮೇ 6) ರಾತ್ರಿ ವಾಯುದಾಳಿ ನಡೆಸುವ...